ಕರ್ನಾಟಕದ 21 ಸ್ಪೂರ್ತಿದಾಯಕ ಮಹಿಳೆಯರಿಗೆ NITI ಆಯೋಗದ ಮಹಿಳಾ ಟ್ರಾನ್ಸ್​ಫಾರ್ಮಿಂಗ್ ಇಂಡಿಯಾ ಪ್ರಶಸ್ತಿ ಪ್ರದಾನ

| Updated By: ಸುಷ್ಮಾ ಚಕ್ರೆ

Updated on: Mar 23, 2022 | 7:04 PM

ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ,75 ಮಹಿಳಾ ಸಾಧಕರಿಗೆ ವುಮೆನ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ ಪ್ರಶಸ್ತಿಗಳನ್ನು ನೀಡಲಾಯಿತು. ಈ 75 ಪ್ರಶಸ್ತಿ ಪುರಸ್ಕೃತರಲ್ಲಿ ಕರ್ನಾಟಕ ರಾಜ್ಯದ 21 ಮಹಿಳೆಯರನ್ನು ಕೂಡ ಸನ್ಮಾನಿಸಲಾಯಿತು.

ಕರ್ನಾಟಕದ 21 ಸ್ಪೂರ್ತಿದಾಯಕ ಮಹಿಳೆಯರಿಗೆ NITI ಆಯೋಗದ ಮಹಿಳಾ ಟ್ರಾನ್ಸ್​ಫಾರ್ಮಿಂಗ್ ಇಂಡಿಯಾ ಪ್ರಶಸ್ತಿ ಪ್ರದಾನ
ಸನ್ಮಾನಿತರಾದ ಸ್ಫೂರ್ತಿದಾಯಕ ಮಹಿಳೆಯರು
Follow us on

ಬೆಂಗಳೂರು: ಕರ್ನಾಟಕದ 21 ಸ್ಪೂರ್ತಿದಾಯಕ ಮಹಿಳೆಯರು NITI ಆಯೋಗದ ಐದನೇ ಆವೃತ್ತಿಯ ಮಹಿಳಾ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾದ ಹಿನ್ನೆಲೆಯಲ್ಲಿ 75 ಮಹಿಳೆಯರನ್ನು ಗೌರವಿಸಲಾಯಿತು. ಭಾರತವನ್ನು ‘ಸಶಕ್ತ್ ಔರ್ ಸಮರ್ಥ ಭಾರತ’ವನ್ನಾಗಿ ಪರಿವರ್ತಿಸುವಲ್ಲಿ ಮಹಿಳೆಯರು ಸತತವಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಈ ಮಹಿಳೆಯರ ಗಮನಾರ್ಹ ಸಾಧನೆಗಳನ್ನು ಗುರುತಿಸಿ NITI ಆಯೋಗವು ವುಮೆನ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ ಪ್ರಶಸ್ತಿಗಳನ್ನು ಸ್ಥಾಪಿಸಿದೆ.

ಈ ವರ್ಷ, ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸಲು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ, 75 ಮಹಿಳಾ ಸಾಧಕರಿಗೆ WTI (ವುಮೆನ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ) ಪ್ರಶಸ್ತಿಗಳನ್ನು ನೀಡಲಾಯಿತು. ಈ 75 ಪ್ರಶಸ್ತಿ ಪುರಸ್ಕೃತರಲ್ಲಿ ಕರ್ನಾಟಕ ರಾಜ್ಯದ 21 ಮಹಿಳೆಯರನ್ನು ಕೂಡ ಸನ್ಮಾನಿಸಲಾಯಿತು. ಆ 21 ಮಹಿಳೆಯರೆಂದರೆ,

1. ಅಲೀನಾ ಆಲಂ, ಬೆಂಗಳೂರು, ಮಿಟ್ಟಿ ಸೋಶಿಯಲ್ ಇನಿಶಿಯೇಟಿವ್ಸ್ ಫೌಂಡೇಶನ್

2. ನೇಹಾ ಸಟಕ್, ಬೆಂಗಳೂರು, ಆಸ್ಟ್ರೋಮ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್

3. ಹಾರ್ದಿಕಾ ಶಾ, ಬೆಂಗಳೂರು, ಕಿನಾರಾ ಕ್ಯಾಪಿಟಲ್

4. ಜೋ ಅಗರ್​ವಾಲ್, ಬೆಂಗಳೂರು, ಟಚ್ಕಿನ್ ಇ ಸರ್ವೀಸ್ ಪ್ರೈವೇಟ್ ಲಿಮಿಟೆಡ್ (ವೈಸಾ)

5. ವಿಕ್ಟೋರಿಯಾ ಜೋಸ್ಲಿನ್ ಡಿಸೋಜಾ, ಬೆಂಗಳೂರು, ಸ್ವಚ್ಛ ಇಕೋ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್

6. ಅನುರಾಧಾ ಪರೇಖ್, ಬೆಂಗಳೂರು, ವಿಕಾರ ಸರ್ವಿಸಸ್ ಪ್ರೈ. ಲಿಮಿಟೆಡ್ (ದಿ ಬೆಟರ್ ಇಂಡಿಯಾ)

7. ಛಾಯಾ ನಂಜಪ್ಪ, ಮಂಡ್ಯ, ನೆಕ್ಟರ್​ ಫ್ರೆಷ್

8. ರಿಚಾ ಸಿಂಗ್, ಬೆಂಗಳೂರು, ಯುವರ್ ದೋಸ್ತ್ ಹೆಲ್ತ್​ ಸೊಲ್ಯೂಷನ್ ಪ್ರೈ. ಲಿ.

9. ಪೂಜಾ ಶರ್ಮ ಗೋಯಲ್, ಬೆಂಗಳೂರು, ಬಿಲ್ಡಿಂಗ್ ಬ್ಲಾಕ್ಸ್​ ಲರ್ನಿಂಗ್ ಸೊಲ್ಯೂಷನ್ಸ್​ ಪ್ರೈ. ಲಿ.

10. ನೀಲಂ ಚಿಬೆರ್, ಬೆಂಗಳೂರು, ಇಂಡಸ್ ಟ್ರೀ ಕ್ರಾಫ್ಟ್​​ ಫೌಂಡೇಷನ್

11. ಸುಚೇತಾ ಭಟ್, ಬೆಂಗಳೂರು, ಡ್ರೀಮ್ ಎ ಡ್ರೀಮ್

12. ಮಯೂರ ಬಾಲಸುಬ್ರಹ್ಮಣ್ಯನ್, ಬೆಂಗಳೂರು, ಕ್ರಾಫ್ಟಿಜನ್ ಫೌಂಡೇಶನ್

13. ಅಕ್ಷಿತಾ ಸಚ್‌ದೇವ, ಬೆಂಗಳೂರು, ಟ್ರೆಸಲ್ ಲ್ಯಾಬ್ಸ್ ಪ್ರೈ. ಲಿಮಿಟೆಡ್

14. ಡಾ. ಗಾಯತ್ರಿ ವಾಸುದೇವನ್, ಬೆಂಗಳೂರು, ಲೇಬರ್ ನೆಟ್ ಸರ್ವೀಸಸ್ ಇಂಡಿಯಾ ಪ್ರೈ. ಲಿಮಿಟೆಡ್

15. ಡಾ. ಸುಸ್ಮಿತಾ ಮೊಹಂತಿ, ಬೆಂಗಳೂರು, Earth2Orbit

16. ಖುಷ್ಬೂ ಅವಸ್ತಿ, ಬೆಂಗಳೂರು, ಮಂತ್ರ ಸಮಾಜ ಸೇವೆಗಳು

17. ಅದಿತಿ ಅವಸ್ತಿ, ಬೆಂಗಳೂರು, ಇಂಡಿಯಾವಿಜುವಲ್ ಲರ್ನಿಂಗ್ ಲಿಮಿಟೆಡ್ (ಎಂಬಿಬೆ)

18. ಮಾಲಿನಿ ಪರ್ಮಾರ್, ಬೆಂಗಳೂರು, ರೆಕ್ಕೆ ಪರ್ಸನಲ್ ಕೇರ್ ಪ್ರೈ. ಲಿಮಿಟೆಡ್ (Stonesoup.in)

19. ಡಾ. ಸ್ವಪ್ನಾ ಪ್ರಿಯಾ ಕೆ, ಬೆಂಗಳೂರು, ಫಾರ್ಮ್ಸ್2ಫೋರ್ಕ್ ಟೆಕ್ನಾಲಜೀಸ್ ಪ್ರೈ.ಲಿ. ಲಿಮಿಟೆಡ್

20. ರಾಜೋಶಿ ಘೋಷ್, ಬೆಂಗಳೂರು, ಹಸೂರ

21. ಸುಗಂಧಾ ಸುಕೃತರಾಜ್, ಬೆಂಗಳೂರು, AMBA

ಇದನ್ನೂ ಓದಿ: ತಾಯ್ನೆಲಕ್ಕಾಗಿ ಹೋರಾಡುತ್ತೇನೆ ಎನ್ನುತ್ತ ಉಕ್ರೇನ್ ಸೇನೆ ಸೇರಲು ಹೋದ 98ರ ಮಹಿಳೆ; ಸ್ಫೂರ್ತಿಯ ಚಿಲುಮೆಯೆಂದ ವಿದೇಶಾಂಗ ಇಲಾಖೆ

ರಸ್ತೆ ಬದಿ ನಿಂತು ಕಚ್ಚಾ ಬಾದಾಮ್​ ಹಾಡಿಗೆ ಡ್ಯಾನ್ಸ್​ ಮಾಡಿದ ಮಹಿಳೆ: 8 ಮಿಲಿಯನ್​​ಗೂ ಅಧಿಕ ವೀಕ್ಷಣೆ ಪಡೆದ ವಿಡಿಯೋ