ಮೇ 3 ಸಮೀಪಿಸುತ್ತಿದೆ, ಬೆಂಗಳೂರಿನಲ್ಲಿ ಇಂದು ಹೊಸ ಕೇಸ್ ಪತ್ತೆಯಾಗಿಲ್ಲ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 24 ಜನರಿಗೆ ಕೊರೊನಾ ಸೋಂಕು ಅಟ್ಯಾಕ್ ಆಗಿದ್ದು, ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ. ಮಂಡ್ಯ 8, ದಾವಣಗೆರೆ 6, ಬೆಳಗಾವಿ 3, ದಕ್ಷಿಣ ಕನ್ನಡ 2, ಕಲಬುರಗಿ, ವಿಜಯಪುರ, ಚಿಕ್ಕಬಳ್ಳಾಪುರ, ಧಾರವಾಡ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಬೆಳಗಾವಿ, ದಾವಣಗೆರೆ ಸೇರಿದಂತೆ ಇಂದು 8 ಜಿಲ್ಲೆಯಲ್ಲಿ ಮತ್ತೆ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಸಮಾಧಾನಕರ ಸಂಗತಿಯೆಂದರೆ ಬೆಂಗಳೂರಿನಲ್ಲಿ ಇವತ್ತು ಯಾವುದೇ ಹೊಸ ಕೇಸ್​ ಪತ್ತೆಯಾಗಿಲ್ಲ. 589 ಸೋಂಕಿತರ ಪೈಕಿ 251 […]

ಮೇ 3 ಸಮೀಪಿಸುತ್ತಿದೆ, ಬೆಂಗಳೂರಿನಲ್ಲಿ ಇಂದು ಹೊಸ ಕೇಸ್ ಪತ್ತೆಯಾಗಿಲ್ಲ

Updated on: May 01, 2020 | 6:10 PM

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 24 ಜನರಿಗೆ ಕೊರೊನಾ ಸೋಂಕು ಅಟ್ಯಾಕ್ ಆಗಿದ್ದು, ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ. ಮಂಡ್ಯ 8, ದಾವಣಗೆರೆ 6, ಬೆಳಗಾವಿ 3, ದಕ್ಷಿಣ ಕನ್ನಡ 2, ಕಲಬುರಗಿ, ವಿಜಯಪುರ, ಚಿಕ್ಕಬಳ್ಳಾಪುರ, ಧಾರವಾಡ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಬೆಳಗಾವಿ, ದಾವಣಗೆರೆ ಸೇರಿದಂತೆ ಇಂದು 8 ಜಿಲ್ಲೆಯಲ್ಲಿ ಮತ್ತೆ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಸಮಾಧಾನಕರ ಸಂಗತಿಯೆಂದರೆ ಬೆಂಗಳೂರಿನಲ್ಲಿ ಇವತ್ತು ಯಾವುದೇ ಹೊಸ ಕೇಸ್​ ಪತ್ತೆಯಾಗಿಲ್ಲ. 589 ಸೋಂಕಿತರ ಪೈಕಿ 251 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 22 ಜನರ ಕೊರೊನಾದಿಂದ ಮೃತಪಟ್ಟಿದ್ದಾರೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲಿ ಇಂದು 1,993 ಹೊಸ ಕೇಸ್ ಪತ್ತೆ!
ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 1,993 ಹೊಸ ಕೊರೊನಾ ಕೇಸ್​ಗಳು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 35,043ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ 1,147 ಜನರು ಸಾವಿಗೀಡಾಗಿದ್ದಾರೆ. 35,043 ಸೋಂಕಿತರ ಪೈಕಿ 8,889 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Published On - 5:51 pm, Fri, 1 May 20