Republic Day 2024 Parade Highlights: ದೆಹಲಿಯಲ್ಲಿ 75ನೇ ಗಣರಾಜ್ಯೋತ್ಸವದ ಸಂಭ್ರಮ, ಕರ್ತವ್ಯ ಪಥದಲ್ಲಿ ನಾರಿ ಶಕ್ತಿ ಪ್ರದರ್ಶನ

ಆಯೇಷಾ ಬಾನು
|

Updated on:Jan 26, 2024 | 1:17 PM

75th Republic Day Updates: 75ನೇ‌ ಗಣರಾಜ್ಯೋತ್ಸವ ಹಿನ್ನೆಲೆ‌ ಇಂದು ದೆಹಲಿಯಲ್ಲಿ ಐತಿಹಾಸಿಕ‌ ಪರೇಡ್ ನಡೆಯಲಿದೆ. ರಾಷ್ಟ್ರರಾಜಧಾನಿಯ ಕರ್ತವ್ಯಪಥ್ ಐತಿಹಾಸಿಕ ಸಿದ್ದವಾಗಿದೆ.ದೇಶದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಬಾರಿ ಗಣರಾಜ್ಯೋತ್ಸವ ಪರೇಡ್ ಥೀಮ್ ‘ವಿಕಸಿತ ಭಾರತ’ ಮತ್ತು ‘ಭಾರತ್-ಲೋಕತಂತ್ರ ಕಿ ಮಾತೃಕಾ ಆಗಿದೆ.

Republic Day 2024 Parade Highlights: ದೆಹಲಿಯಲ್ಲಿ 75ನೇ ಗಣರಾಜ್ಯೋತ್ಸವದ ಸಂಭ್ರಮ, ಕರ್ತವ್ಯ ಪಥದಲ್ಲಿ ನಾರಿ ಶಕ್ತಿ ಪ್ರದರ್ಶನ
ದೆಹಲಿಯಲ್ಲಿ 75ನೇ ಗಣರಾಜ್ಯೋತ್ಸವದ ಸಂಭ್ರಮ

ದೇಶದೆಲ್ಲೆಡೆ ಇಂದು 75ನೇ ಗಣರಾಜ್ಯೋತ್ಸವ (Republic Day 2024) ಸಂಭ್ರಮ ಮನೆ ಮಾಡಿದೆ. ಈ ಬಾರಿ ಗಣತಂತ್ರ ದಿನವನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸಲಾಗುತ್ತಿದೆ. ಈ ದಿನದಂದು ಭಾರತೀಯ ಸೇನಾ ಪಡೆಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ದಿನ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಐತಿಹಾಸಿಕ‌ ಗಣರಾಜ್ಯೋತ್ಸವ ಪರೇಡ್ ನಡೆಯಲಿದ್ದು ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಈ ಬಾರಿ ಗಣರಾಜ್ಯೋತ್ಸವ ಪರೇಡ್ ಥೀಮ್ ‘ವಿಕಸಿತ ಭಾರತ’ ಮತ್ತು ‘ಭಾರತ್-ಲೋಕತಂತ್ರ ಕಿ ಮಾತೃಕಾ ಆಗಿದೆ. ಬೆಳಗ್ಗೆ 9.30ಕ್ಕೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಗಣರಾಜ್ಯೋತ್ಸವ ಪರೇಡ್ ಬೆಳಿಗ್ಗೆ 10:30 ಕ್ಕೆ ನವದೆಹಲಿಯ ಕರ್ತವ್ಯ ಪಥ್‌ನಲ್ಲಿ ಪ್ರಾರಂಭವಾಗಲಿದೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಿಂದ ಅಮರ್ ಜವಾನ್ ಜ್ಯೋತಿಗೆ ನಮನ ಸಲ್ಲಿಸಲಿದ್ದಾರೆ. ನಂತರ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಂದ ಧ್ವಜಾರೋಹಣ ನೆರವೇರಲಿದೆ. ಇನ್ನು ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಬೆಳಗ್ಗೆ 9ಕ್ಕೆ ರಾಜ್ಯಪಾಲ ಗೆಹ್ಲೋಟ್ ಧ್ವಜಾರೋಹಣ ಮಾಡಲಿದ್ದಾರೆ. ಧ್ವಜಾರೋಹಣ ಮಾಡಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ವೀಕ್ಷಿಸಿ.

LIVE NEWS & UPDATES

The liveblog has ended.
  • 26 Jan 2024 12:15 PM (IST)

    Republic Day 2024 Parade Live: 25 ಸ್ತಬ್ಧಚಿತ್ರಗಳ ಪ್ರದರ್ಶನ

    ಗಣರಾಜ್ಯೋತ್ಸವದಲ್ಲಿ 16 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳು, 9 ಸಚಿವಾಲಯಗಳು, ವಿವಿಧ ಸಂಸ್ಥೆಗಳ 25 ಸ್ತಬ್ಧಚಿತ್ರಗಳ ಪ್ರದರ್ಶನ ಮಾಡಲಾಯಿತು. ಆಂಧ್ರ, ಅರುಣಾಚಲ ಪ್ರದೇಶ, ಛತ್ತೀಸ್​ಗಢ, ಗುಜರಾತ್, ಹರಿಯಾಣ, ಜಾರ್ಖಂಡ್, ಲಡಾಖ್, ಮೇಘಾಲಯ, ಒಡಿಶಾ, ಮಣಿಪುರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಯುಪಿ ಸ್ತಬ್ಧಚಿತ್ರಗಳು ಭಾಗಿಯಾಗಿದ್ದವು. ಆದ್ರೆ ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಇರಲಿಲ್ಲ.

  • 26 Jan 2024 11:01 AM (IST)

    Republic Day 2024 Parade Live: 1,900 ಪ್ರಕಾರಗಳ ಸೀರೆ ಪ್ರದರ್ಶನ

    ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆ ಸೀರೆ ಪ್ರದರ್ಶನ. ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರಯೋಜಕತ್ವದಲ್ಲಿ ದೇಶದ ಸುಮಾರು 1,900 ಪ್ರಕಾರಗಳ ಸೀರೆ ಪ್ರದರ್ಶನ ಮಾಡಲಾಯಿತು. ಸೀರೆ ಪ್ರದರ್ಶನಕ್ಕೆ ‘ಅನಂತ’ ಸೂತ್ರ ಎಂದು ಹೆಸರಿಡಲಾಗಿದೆ. ಕಸೂತಿ ಕಲೆಗೆ ಉತ್ತೇಜನ ನೀಡುವ ಸಲುವಾಗಿ ಸೀರೆ ಪ್ರದರ್ಶನ ಮಾಡಲಾಯಿತು. ಸೀರೆ ಪ್ರದರ್ಶನದಲ್ಲಿ ಮೈಸೂರು ರೇಷ್ಮೆ ಸೀರೆ, ಕಾಂಚೀಪುರಂ ಸೀರೆ, ಕಾಶ್ಮೀರದ ಕಾಶಿದಾ ಸೀರೆ ಸೇರಿ ಮುಂತಾದ ಸೇರಿಗಳ ಪ್ರದರ್ಶನ ಮಾಡಲಾಯಿತು.

  • 26 Jan 2024 11:00 AM (IST)

    Republic Day 2024 Parade Live: ‘ಫ್ರೆಂಚ್‌ ವಿದೇಶಿ ಪಡೆ’ ಪಥಸಂಚಲನ

    ಫ್ರಾನ್ಸ್ ಸೇನಾ ತುಕಡಿ, ಯುದ್ಧವಿಮಾನಗಳು ಪಥಸಂಚನದಲ್ಲಿ ಭಾಗಿಯಾಗಿವೆ. ಯೂರೋಪ್, ಆಫ್ರಿಕಾ, ಮಧ್ಯಪ್ರಾಚ್ಯದಲ್ಲಿ ನಿಯೋಜನೆಗೊಂಡ ‘ಫ್ರೆಂಚ್‌ ವಿದೇಶಿ ಪಡೆ’ 75ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗಿದೆ. 2023ರಲ್ಲಿ ಪ್ಯಾರಿಸ್‌ ಬ್ಯಾಸ್ಟಿಲ್‌ ಡೇನಲ್ಲಿ ಭಾರತ ಸೇನೆ ಪಾಲ್ಗೊಂಡಿತ್ತು, ಹೀಗಾಗಿ ಇಂದು ಫ್ರೆಂಚ್‌ ವಿದೇಶಿ ಪಡೆ ಪಥಸಂಚಲನದಲ್ಲಿ ಭಾಗಿಯಾಗಿದೆ. ಕ್ಯಾಪ್ಟನ್ ಖೌರ್ಡಾ ನೇತೃತ್ವದಲ್ಲಿ ಫ್ರೆಂಚ್‌ ಸೇನಾ ಬ್ಯಾಂಡ್‌ ಭಾಗಿಯಾಗಿದೆ. 30 ಮಂದಿ ಸಂಗೀತಗಾರರಿಂದ ತಮ್ಮ ರೆಜಿಮೆಂಟ್‌ ಗೀತೆ ಗಾಯನ ನುಡಿಸಲಾಯಿತು.

  • 26 Jan 2024 10:43 AM (IST)

    Republic Day 2024 Parade Live: ‘ಆವಾಹನ’ ಜಾನಪದ ಸೊಗಡು

    ಇದೇ ಮೊದಲ ಬಾರಿಗೆ ಕರ್ತವ್ಯ ಪಥದಲ್ಲಿ ‘ಆವಾಹನ’ ಪ್ರದರ್ಶನ. ದೇಶದ ವಿವಿಧ ಜಾನಪದ ಸಂಗೀತದ ಸಂಸ್ಕೃತಿ ಸಾರುವ ‘ಆವಾಹನ’ 112 ಮಹಿಳಾ ಕಲಾವಿದರಿಂದ ಜಾನಪದ, ಬುಡಕಟ್ಟು ವಾದ್ಯ ಪ್ರದರ್ಶನ. 30 ಕಲಾವಿದರಿಂದ ಕರ್ನಾಟಕದ ‘ಡೊಳ್ಳು ಕುಣಿತ’ ಪ್ರದರ್ಶನ. 20 ಕಲಾವಿದರಿಂದ ಡೋಲು, ಮಹಾರಾಷ್ಟ್ರದ ‘ಟಶಾ’ ಡೋಲು ವಾದನ. 16 ಜನರಿಂದ ತೆಲಂಗಾಣದ ಡಪ್ಪು ವಾದನ, 4ಜನರಿಂದ ನಾದಸ್ವರ. 16 ಕಲಾವಿದರಿಂದ ಪಶ್ಚಿಮ ಬಂಗಾಳದ ಧಕ್ ಮತ್ತು ಡೋಲು ವಾದನ. 8 ಮಂದಿ ಪಶ್ಚಿಮ ಬಂಗಾಳದ ಕಲಾವಿದರಿಂದ ಮೊಳಗಿದ ಶಂಖನಾದ. 4 ಕಲಾವಿದರಿಂದ ತುತ್ತೂರಿ ಮತ್ತು ಕಂಸಾಳೆ ಪ್ರದರ್ಶನ.

  • 26 Jan 2024 10:42 AM (IST)

    Republic Day 2024 Parade Live: ರಾಷ್ಟ್ರಪತಿಗಳ ಗನ್‌ ಪ್ಲಟೂನ್‌ನಿಂದ ‘21 ಗನ್‌ ಸಲ್ಯೂಟ್‌’

    ರಾಷ್ಟ್ರಪತಿಗಳ ಗನ್‌ ಪ್ಲಟೂನ್‌ನಿಂದ ‘21 ಗನ್‌ ಸಲ್ಯೂಟ್‌’ ಮಾಡಲಾಯಿತು. 871 ಫೀಲ್ಡ್‌ ರೆಜಿಮೆಂಟ್‌ನಿಂದ ‘21 ಗನ್‌ ಸಲ್ಯೂಟ್’ ಮಾಡಲಾಯಿತು. ರಾಷ್ಟ್ರಧ್ವಜಕ್ಕೆ ನೀಡುವ ಅತ್ಯುನ್ನತ ಮಿಲಿಟರಿ ಗೌರವವಿದು. ಸ್ವದೇಶಿ ನಿರ್ಮಿತ 105mm ಫೀಲ್ಡ್‌ ಗನ್‌ಗಳಿಂದ ಗೌರವ ನೀಡಲಾಯಿತು.

  • 26 Jan 2024 10:36 AM (IST)

    Republic Day 2024 Parade Live: ಸಾರೋಟಿನಲ್ಲಿ ಬಂದ ರಾಷ್ಟ್ರಪತಿ

    ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇಂದು ಪ್ರಮುಖ ದಿನ. 40 ವರ್ಷದ ಬಳಿಕ ಕರ್ತವ್ಯ ಪಥದಲ್ಲಿ ಸಾರೋಟಿನಲ್ಲಿ ರಾಷ್ಟ್ರಪತಿ ಬಂದಿಳಿದಿದ್ದಾರೆ. ಗಣರಾಜ್ಯೋತ್ಸವಕ್ಕೆ ವಿಶೇಷ ಕಾರಿನಲ್ಲಿ ರಾಷ್ಟ್ರಪತಿ ಆಗಮಿಸ್ತಿದ್ರು. ಆದ್ರೆ, ಈ ಬಾರಿ ಸಾರೋಟಿನಲ್ಲಿ ಬಂದಿಳಿದಿದ್ದಾರೆ.

  • 26 Jan 2024 10:26 AM (IST)

    Republic Day 2024 Parade Live: ರಾಷ್ಟ್ರಪತಿ ಮುರ್ಮು, ಫ್ರಾನ್ಸ್ ಅಧ್ಯಕ್ಷರಿಗೆ ಸೇನಾ ಗೌರವ

    ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಮುರ್ಮು, ಫ್ರಾನ್ಸ್ ಅಧ್ಯಕ್ಷರಿಗೆ ಸೇನಾ ಗೌರವ ಸಲ್ಲಿಸಲಾಯಿತು. ಗಣರಾಜ್ಯೋತ್ಸವದ ಮುಖ್ಯ ಅತಿಥಿ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್ ಈ ಬಾರಿ ಭಾಗಿಯಾಗಿದ್ದಾರೆ.

  • 26 Jan 2024 10:16 AM (IST)

    Republic Day 2024 Parade Live: ದೆಹಲಿಯ ರಾಷ್ಟ್ರೀಯ ಸಮರ ಸ್ಮಾರಕಕ್ಕೆ ಪ್ರಧಾನಿ ಮೋದಿ ನಮನ

    ದೆಹಲಿಯ ರಾಷ್ಟ್ರೀಯ ಸಮರ ಸ್ಮಾರಕಕ್ಕೆ ಪ್ರಧಾನಿ ಮೋದಿ ನಮನ ಸಲ್ಲಿಸಿದರು. ಪುಷ್ಪ ಗುಚ್ಛ ಇರಿಸಿ ಹುತಾತ್ಮ ವೀರ ಯೋಧರ ಸ್ಮಾರಕಕ್ಕೆ ಪ್ರಧಾನಿ ಮೋದಿ ನಮನ ಸಲ್ಲಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾಧಿಕಾರಿಗಳು ಕೂಡ ನಮನ ಸಲ್ಲಿಸಿದರು.

  • 26 Jan 2024 10:06 AM (IST)

    Republic Day 2024 Parade Live: 2200 ಅಡಿಗಳ ರಾಷ್ಟ್ರಧ್ವಜ ಮೆರವಣಿಗೆ

    ಗಣರಾಜ್ಯೋತ್ಸವ ಪ್ರಯುಕ್ತ ಚಿಂತಾಮಣಿ ನಗರದಲ್ಲಿ 2200 ಅಡಿಗಳ ರಾಷ್ಟ್ರಧ್ವಜ ಮೆರವಣಿಗೆ ಮಾಡಲಾಗುತ್ತಿದೆ. ಚಿಂತಾಮಣಿಯ ಆರ್ಯ ವೈಶ್ಯೆ ಮಂಡಳಿ ವಿನೂತನವಾಗಿ ಗಣರಾಜ್ಯೋತ್ಸವ ಆಚರಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮೆರವಣಿಗೆಗೆ ಚಾಲನೆ ನೀಡಿದರು. ನಗತರದ ಪ್ರಮುಖ ರಸ್ತೆಗಳಲ್ಲಿ 2200 ಅಡಿಗಳ ರಾಷ್ಟ್ರಧ್ವಜ ಮೆರವಣಿಗೆ ನೆರವೇರಿದೆ.

  • 26 Jan 2024 09:34 AM (IST)

    Republic Day 2024 Parade Live: SC, ST ನಿರುದ್ಯೋಗಿಗಳಿಗೆ ಸ್ವಾವಲಂಬಿ ಸಾರಥಿ ಯೋಜನೆ ಜಾರಿ

    ಬೆಂಗಳೂರಿನಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಗೆಹ್ಲೋಟ್ ಭಾಷಣ ಮಾಡಿದರು. ಬೆಂಗಳೂರಿನಲ್ಲಿ ಟ್ರಾಫಿಕ್​ ನಿಯಂತ್ರಣಕ್ಕೆ ಪರಿಹಾರ ಕೈಗೊಳ್ಳಲಾಗಿದೆ. ಆಯ್ದ ಸ್ಥಳಗಳಲ್ಲಿ ಸುರಂಗ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ಮಾಡಲಾಗಿದೆ. ಎಲ್ಲಾ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಬೋಧನೆ, ಭಾರತ ಸಂವಿಧಾನ ಪೀಠಿಕೆ ಫೋಟೋ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಪ. ಜಾತಿಯ 69,190 ವಿದ್ಯಾರ್ಥಿಗಳಿಗೆ 133.82 ಕೋಟಿ ರೂ. ಪ್ರೋತ್ಸಾಹ ಧನ ನೀಡಲಾಗಿದೆ. SC, ST ನಿರುದ್ಯೋಗಿಗಳಿಗೆ ಸ್ವಾವಲಂಬಿ ಸಾರಥಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ರಾಜ್ಯಪಾಲ ಗೆಹ್ಲೋಟ್ ತಿಳಿಸಿದರು.

  • 26 Jan 2024 09:30 AM (IST)

    Republic Day 2024 Parade Live: ರಾಜ್ಯಪಾಲ ಗೆಹ್ಲೋಟ್ ಭಾಷಣ

    223 ತಾಲೂಕು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಪೈಕಿ 196 ತೀವ್ರ ಬರಪೀಡಿತ ತಾಲೂಕುಗಳಿವೆ. ರಾಜ್ಯ ಸರ್ಕಾರ NDRFನಿಂದ ಅನುದಾನ ಕೋರಿದೆ. ಪ್ರತಿ ರೈತನ ಖಾತೆಗೆ 2 ಸಾವಿರ ರೂ. ಪರಿಹಾರ ಹಾಕಲಾಗುತ್ತೆ. ಮಧ್ಯಂತರ ಪರಿಹಾರ ಬಿಡುಗಡೆ ಮಾಡಲಾಗುತ್ತಿದೆ. ಮನ್ರೇಗಾ ಯೋಜನೆಯಡಿ ಕೆಲಸ ಒದಗಿಸಲಾಗಿದೆ. 63.13 ಲಕ್ಷ ಜನರಿಗೆ ಕೆಲಸವನ್ನ ಒದಗಿಸಲಾಗಿದೆ. 72.38 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ರಾಜ್ಯದಲ್ಲಿರುವ ಡಯಾಲಿಸಿಸ್​ ಕೇಂದ್ರಗಳ ವಿಸ್ತರಣೆ ಮಾಡಲಾಗಿದೆ. 168 ಇದ್ದ ಡಯಾಲಿಸಿಸ್​ ಕೇಂದ್ರ 219ಕ್ಕೆ ಹೆಚ್ಚಳವಾಗಿದೆ. ಆರೋಗ್ಯ ಕವಚ ಯೋಜನೆಯಡಿ ಹೊಸದಾಗಿ 262 ಆ್ಯಂಬುಲೆನ್ಸ್​​ಗಳು ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯಪಾಲ ಗೆಹ್ಲೋಟ್ ಭಾಷಣದಲ್ಲಿ ತಿಳಿಸಿದರು.

  • 26 Jan 2024 09:25 AM (IST)

    Republic Day 2024 Parade Live: ಇಂದು ಭಾರತಕ್ಕೆ ಐತಿಹಾಸಿಕ ದಿನವಾಗಿದೆ-ರಾಜ್ಯಪಾಲ ಗೆಹ್ಲೋಟ್

    ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಗೆಹ್ಲೋಟ್​ ಭಾಷಣ ಮಾಡಿದರು.ನಾಡಿನ ಸಮಸ್ತ ಜನತೆಗೆ 75ನೇ ಗಣರಾಜ್ಯೋತ್ಸವದ ಶುಭಾಶಯಗಳು. ಇಂದು ಭಾರತಕ್ಕೆ ಐತಿಹಾಸಿಕ ದಿನವಾಗಿದೆ. ಸಂವಿಧಾನವು ಭಾರತದ ನಾಗರೀಕರಿಗೆ ನ್ಯಾಯ, ಸ್ವಾತಂತ್ರ್ಯ, ಹಾಗೂ ಸಮಾನತೆಯ ಅವಕಾಶವನ್ನ ಒದಗಿಸಿದೆ. ಸಮಗ್ರತೆ, ಏಕತೆಯನ್ನ ಕಾಪಾಡುವ ಜೊತೆಗೆ ಸ್ವಾಭಿಮಾನದ ಜೀವನ ಒದಗಿಸುವ ಧ್ಯೇಯವನ್ನ ಹೊಂದಿದೆ. ಸರ್ಕಾರವು 5 ಗ್ಯಾರೆಂಟಿಗಳನ್ನ ಜಾರಿಗೊಳಿಸುವ ಭರವಸೆ ನೀಡಿತ್ತು. ಅದರಂತೆ ಎಲ್ಲ ಐದು ಗ್ಯಾರೆಂಟಿಗಳನ್ನ ಅನುಷ್ಠಾನಗೊಳಿಸಲಾಗಿದೆ. ಶಕ್ತಿ & ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಮಾಸಿಕ ₹2,000 ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಭೀಕರ ಬರಗಾಲ ಹಿನ್ನೆಲೆ ಬರಪೀಡಿತ ತಾಲೂಕುಗಳನ್ನ ಘೋಷಿಸಲಾಗಿದೆ ಎಂದರು.

  • 26 Jan 2024 09:21 AM (IST)

    Republic Day 2024 Parade Live: ಈ ವಾರದಲ್ಲಿ ಬೆಳೆ ಪರಿಹಾರದ ಮೊದಲ ಕಂತು ಬಿಡುಗಡೆ-ಗಣರಾಜ್ಯೋತ್ಸವದ ಸಂದೇಶದಲ್ಲಿ ಸಿಎಂ ಘೋಷಣೆ

    ಈ ವಾರದಲ್ಲಿ ಬೆಳೆ ಪರಿಹಾರದ ಮೊದಲ ಕಂತು ಬಿಡುಗಡೆ ಮಾಡುತ್ತೇವೆ ಎಂದು ಗಣರಾಜ್ಯೋತ್ಸವದ ಸಂದೇಶದಲ್ಲಿ ಸಿಎಂ ಘೋಷಿಸಿದ್ದಾರೆ. ಈಗಾಗಲೇ ಬೆಳೆ ಪರಿಹಾರ 2,000 ರೂ. ಘೋಷಣೆ. ಈವರೆಗೆ 550 ಕೋಟಿ ರೈತರ ಖಾತೆಗೆ ಜಮೆ ಆಗಿದೆ. ಈ ವಾರದಲ್ಲಿ ಮೊದಲ ಕಂತಿನ ಪರಿಹಾರ ತಲುಪಲಿದೆ ಎಂದು ಗಣರಾಜ್ಯೋತ್ಸವದ ಸಂದೇಶದಲ್ಲಿ ಸಿಎಂ ಘೋಷಣೆ ಮಾಡಿದ್ದಾರೆ.

  • 26 Jan 2024 09:17 AM (IST)

    Republic Day 2024 Parade Live: ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

    ಬೆಂಗಳೂರಿನಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ ನೆರವೇರಿದೆ.

  • 26 Jan 2024 08:33 AM (IST)

    Republic Day 2024 Parade Live: ರಕ್ಷಣಾ ಪಡೆಯ ಯೋಧರು, ಅಧಿಕಾರಿಗಳಿಗೆ ಶೌರ್ಯ ಪ್ರಶಸ್ತಿ

    ರಕ್ಷಣಾ ಪಡೆಯ ಯೋಧರು, ಅಧಿಕಾರಿಗಳಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 6 ಕೀರ್ತಿಚಕ್ರ, 16 ಶೌರ್ಯಚಕ್ರ ಸೇರಿದಂತೆ 80 ಶೌರ್ಯಪ್ರಶಸ್ತಿ ನೀಡಲಾಗುತ್ತಿದೆ. 6 ಯೋಧರ ಪೈಕಿ ಮೂವರಿಗೆ ಮರಣೋತ್ತರ ಕೀರ್ತಿಚಕ್ರ ಪ್ರಶಸ್ತಿ. 16 ಯೋಧರ ಪೈಕಿ ಇಬ್ಬರಿಗೆ ಮರಣೋತ್ತರ ಶೌರ್ಯಚಕ್ರ ಪ್ರಶಸ್ತಿ. 53 ಯೋಧರ ಪೈಕಿ 7 ಯೋಧರಿಗೆ ಮರಣೋತ್ತರ ಸೇನಾಪದಕ. 80 ಯೋಧರ ಪೈಕಿ 12 ಯೋಧರಿಗೆ ಮರಣೋತ್ತರ ಶೌರ್ಯಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

  • 26 Jan 2024 08:14 AM (IST)

    Republic Day 2024 Parade Live: ಮಾಣೆಕ್ ಷಾ ಪರೇಡ್ ಮೈದಾನದ ಸುತ್ತ ಬಿಗಿ ಬಂದೋಬಸ್ತ್

    ದೇಶಾದ್ಯಂತ ಇಂದು 75ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಕಾರ್ಯಕ್ರಮ ಹಿನ್ನೆಲೆ ಮೈದಾನದ ಸುತ್ತ ಪೊಲೀಸರಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಿಎಂ ಹಾಗೂ ಗಣ್ಯ ವ್ಯಕ್ತಿಗಳು ಮೈದಾನಕ್ಕೆ ಆಗಮಿಸಲಿದ್ದಾರೆ. ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಪಾಸ್ ಇದ್ದವರಿಗೆ ಮಾತ್ರ ಮೈದಾನದ ಒಳಗಡೆ ಪ್ರವೇಶ. ಭದ್ರತೆಗೋಸ್ಕರ ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಭದ್ರತೆಗೆ 9 ಡಿಸಿಪಿ, 16 ಎಸಿಪಿ, 46 ಇನ್ಸ್​ಪೆಕ್ಟರ್​​​, 109 PSI, 77 ASI ಸೇರಿ 1000ಕ್ಕೂ ಹೆಚ್ಚು ಸಿಬ್ಬಂದಿ, ಸಂಚಾರ ನಿರ್ವಹಣೆಗೆ ಒಟ್ಟು 575 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 10 KSRP, ಸಿಎಆರ್ ತುಕಡಿ, 2 ಅಗ್ನಿಶಾಮಕ ವಾಹನ, ಎರಡು ಆ್ಯಂಬುಲೆನ್ಸ್​, ಕ್ಷಿಪ್ರ ಕಾರ್ಯಪಡೆ ನಿಯೋಜನೆ ಮಾಡಲಾಗಿದೆ.

  • 26 Jan 2024 07:49 AM (IST)

    Republic Day 2024 Parade Live: ಗಣರಾಜ್ಯೋತ್ಸವ ಶುಭಕೋರಿದ ಪ್ರಧಾನಿ ಮೋದಿ

    ಟ್ವೀಟ್ ಮೂಲಕ ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಗಣರಾಜ್ಯೋತ್ಸವ ಶುಭಕೋರಿದ್ದಾರೆ.

  • 26 Jan 2024 07:45 AM (IST)

    Republic Day 2024 Parade Live: ನಾಡಿನ ಜನತೆಗೆ ಹೆಚ್.ಡಿ.ಕುಮಾರಸ್ವಾಮಿ ಶುಭಾಶಯ

    ಎಲ್ಲರಿಗೂ ಗಣರಾಜ್ಯೋತ್ಸವ ದಿನದ ಶುಭಾಶಯಗಳು. ಈ ಸಂದರ್ಭದಲ್ಲಿ ರಾಷ್ಟ್ರದ ಅಭ್ಯುದಯಕ್ಕಾಗಿ ದುಡಿದ ಎಲ್ಲಾ ಮಹನೀಯರನ್ನು ಸ್ಮರಿಸೋಣ. ಅನೇಕರ ತ್ಯಾಗ ಬಲಿದಾನಗಳಿಂದ ಪಡೆದುಕೊಂಡ ಸ್ವಾತಂತ್ರ್ಯವನ್ನು ಸಾರ್ಥಕಗೊಳಿಸಿಕೊಳ್ಳುವುದರ ಜತೆಗೆ, ಭಾರತವು ಮಹಾನ್ ಜಾಗತಿಕ ಶಕ್ತಿಯಾಗಿ ಅವಿರ್ಭವಿಸುವ ನಿಟ್ಟಿನಲ್ಲಿ ಒಟ್ಟಾಗಿ ದುಡಿಯೋಣ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.

  • 26 Jan 2024 07:42 AM (IST)

    Republic Day 2024 Parade Live: ಗಣರಾಜ್ಯೋತ್ಸವ ಹಿನ್ನೆಲೆ ಬೆಂಗಳೂರಲ್ಲಿ ಕೆಲ ಮಾರ್ಗ ಬದಲಾವಣೆ

    ಗಣರಾಜ್ಯೋತ್ಸವ ಹಿನ್ನೆಲೆ ಬೆಂಗಳೂರಲ್ಲಿ ಕೆಲ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 9.30ರಿಂದ 10.30ರವರೆಗೆ ಕಬ್ಬನ್ ರಸ್ತೆ, BRV ಜಂಕ್ಷನ್, ಕಾಮರಾಜ ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್ ಆಗಿರಲಿದೆ. ಪರ್ಯಾಯ ಮಾರ್ಗಗಳ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್​ಫೆಂಟ್ರಿ ರಸ್ತೆ, ಮಣಿಪಾಲ್ ಸೆಂಟರ್ ​ಕಡೆ ವಾಹನಗಳು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್​ಫೆಂಟ್ರಿ ರಸ್ತೆ-ಸಫೀನಾ ಪ್ಲಾಜಾ ಮೂಲಕ ಎಡ ತಿರುವು ಪಡೆದು ಮೈನ್​ಗಾರ್ಡ್ ರಸ್ತೆ, ಡಿಕನ್ಸ್​ಸನ್ ರಸ್ತೆ ಮೂಲಕ ಕಬ್ಬನ್ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ.

  • 26 Jan 2024 07:37 AM (IST)

    Republic Day 2024 Parade Live: ದೆಹಲಿಯಾದ್ಯಂತ ಕಟ್ಟುನಿಟ್ಟಿನ ಭದ್ರತೆ

    ಗಣರಾಜ್ಯೋತ್ಸವ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಭದ್ರತೆ ಕೈಗೊಳ್ಳಲಾಗಿದೆ. ದೆಹಲಿಯಲ್ಲಿ ಸೇನೆ, ಖಾಕಿ ಕೋಟೆಯೇ ನಿರ್ಮಾಣವಾಗಿದೆ. ಡ್ರೋನ್‌ಗಳ ಹಾರಾಟವನ್ನು ನಿಷೇಧಿಸಲಾಗಿದೆ. ಕಟ್ಟಡಗಳ ಮೇಲೆ ಶಾರ್ಪ್‌ಶೂಟರ್‌ಗಳನ್ನು ನಿಯೋಜಿಸಲಾಗಿದೆ. ಎಲ್ಲೆಲ್ಲೂ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ಕಾರ್ಯಕ್ರಮಕ್ಕೆ ಬರೋರಿಗೆ, ತಿಂಡಿ, ನೀರಿನ ಬಾಟಲ್, ಗನ್, ಚಾಕು, ಚೂಪಾದವಸ್ತುಗಳು, ಕೊಡೆ, ಕಪ್ಪುವಸ್ತ್ರ, ಕ್ಯಾಮರಾ, ರೇಡಿಯೋ, ಸ್ಯೂಟ್‌ಕೇಸ್, ಬ್ಯಾಗ್, ಸಿಗರೇಟ್, ಬೀಡಿ, ಬೆಂಕಿಪೊಟ್ಟಣ, ಅಗ್ನಿಕಾರಕ ವಸ್ತುಗಳನ್ನು ನಿಷೇಧಿಸಲಾಗಿದೆ.

  • 26 Jan 2024 07:37 AM (IST)

    Republic Day 2024 Parade Live: ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮುಖ್ಯ ಅತಿಥಿ

    ಈಗಾಗಲೇ ಭಾರತಕ್ಕೆ ಬಂದಿಳಿದಿರುವ ಫ್ರೆಂಚ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರಾನ್ 75ನೇ ಗಣರಾಜ್ಯೋತ್ಸವ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದಲ್ಲದೆ ದೇಶ ವಿದೇಶಗಳ 13 ಸಾವಿರ ಅತಿಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟು 70 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಸಾರ್ವಜನಿಕರಿಗಾಗಿ 42 ಸಾವಿರ ಆಸನಗಳನ್ನು ಮೀಸಲಿರಿಸಲಾಗಿದೆ.

  • 26 Jan 2024 07:36 AM (IST)

    Republic Day 2024 Parade Live: ಈ ಬಾರಿ ಗಮನ ಸೆಳೆಯಲಿದೆ ಎಐ ಟ್ಯಾಬ್ಲೋ

    ದೇಶದ ವಿವಿಧೆಡೆಯ ಸಂಸ್ಕೃತಿ, ಪರಂಪರೆ ಬಿಂಬಿಸೋದ್ರ ಜತೆ, ವಿಜ್ಞಾನ ತಂತ್ರಜ್ಞಾನ ಬಿಂಬಿಸುವ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ. ಚಂದ್ರಯಾನ-3 ಮಾದರಿ ಟ್ಯಾಬ್ಲೋ ಹಾಗೂ ಇದೇ ಮೊದಲ ಬಾರಿಗೆ ಎಐ ತಂತ್ರಜ್ಞಾನದ ಟ್ಯಾಬ್ಲೋವನ್ನು ಪ್ರದರ್ಶಿಸಲಾಗ್ತಿದೆ. ಸಂಸ್ಕೃತಿ ಸಚಿವಾಲಯದಿಂದ ಅನಂತ್ ಸೂತ್ರ ಪ್ರದರ್ಶನ ಇರಲಿದೆ. ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 1,900 ಸೀರೆಗಳು ಪ್ರದರ್ಶನವಿದೆ.

  • 26 Jan 2024 07:32 AM (IST)

    Republic Day 2024 Parade Live: ಮೂರು ಸೇನೆಗಳ ಮಹಿಳಾ ಪಡೆಗಳಿಂದ ಪರೇಡ್

    ಈ ವರ್ಷದ ಗಣರಾಜ್ಯೋತ್ಸವದ ಪರೇಡ್‌ನ ಮಹತ್ವದ ಹೈಲೈಟ್ ಅಂದ್ರೆ ಎಲ್ಲಾ ಮಹಿಳಾ 3 ಸೇನೆಗಳ ಗುಂಪನ್ನು ಒಟ್ಟಿಗೆ ಸೇರಿಸಿರೋದು. ಸೇನೆಯ ಮಿಲಿಟರಿ ಪೊಲೀಸ್ ಮತ್ತು ಇತರ ಸೇವೆಗಳ ಮಹಿಳಾ ಪಡೆಗಳನ್ನು ಒಳಗೊಂಡಿರುವ ಐತಿಹಾಸಿಕ ತುಕಡಿ ಇಂದಿನ ಪರೇಡ್ ನಲ್ಲಿ ಭಾಗಿಯಾಗಲಿದೆ.

  • 26 Jan 2024 07:32 AM (IST)

    Republic Day 2024 Parade Live: ಶಕ್ತಿ ಅನಾವರಣಕ್ಕೆ ಮೂರು ಸೇನೆಗಳು ಸಜ್ಜು

    ಎರಡು ರಫೇಲ್ ವಿಮಾನಗಳಿಂದ ಶಕ್ತಿ ಪ್ರದರ್ಶನ ವಿರಲಿದ್ದು, ವಾಯಸೇನೆ ಯುದ್ಧ ವಿಮಾನಗಳಿಂದ ಕಸರತ್ತು ನಡೆಯಲಿದೆ. ಅತ್ಯಾಧುನಿಕ ಕ್ಷಿಪಣಿಗಳು, ಯುದ್ಧಟ್ಯಾಂಕರ್‌ಗಳು, ಯುದ್ಧವಿಮಾನಗಳ ಪ್ರದರ್ಶನವಿರಲಿದೆ. ಪರೇಡ್‌ನಲ್ಲಿ ಫ್ರೆಂಚ್ ಮಿಲಿಟರಿ ತಂಡ ಕೂಡ ಭಾಗಿಯಾಗಲಿವೆ. ಟ್ಯಾಂಕ್ ಟಿ-90, ನಾಗಾ ಕ್ಷಿಪಣಿ ನಿಗ್ರ ಟ್ಯಾಂಕರ್, ಪಿನಾಕಾ ಬಹು ರಾಕೆಟ್ ಲಾಂಚರ್ಸ್, ವೆೆಪನ್ ಲೋಕೇಟಿಂಗ್ ರಾಡಾರ್ ಸಿಸ್ಟಂ ಸ್ವಾತಿ ಸೇರಿ ಇತರೆ ಪ್ರದರ್ಶನವಿರಲಿದೆ.

  • 26 Jan 2024 07:31 AM (IST)

    Republic Day 2024 Parade Live: ಬೆಳಗ್ಗೆ 10.30ಕ್ಕೆ ಪರೇಡ್‌ಗೆ ರಾಷ್ಟ್ರಪತಿ ಚಾಲನೆ

    ಬೆಳಗ್ಗೆ 10.30ಕ್ಕೆ ಪರೇಡ್‌ಗೆ ರಾಷ್ಟ್ರಪತಿ ಚಾಲನೆ ನೀಡಲಿದ್ದಾರೆ. ಈ ಬಾರಿ 90 ನಿಮಿಷಗಳವರೆಗೆ ನಡೆಯಲಿರುವ ಪರೇಡ್ ನಡೆಯಲಿದೆ. ವಿಜಯ್‌ ಚೌಕ್‌ನಿಂದ ಕರ್ತವ್ಯಪಥ್‌ವರೆಗೆ ಪರೇಡ್ ಸಾಗಲಿದೆ. ಭೂಸೇನೆ, ನೌಕಾ, ವಾಯುಸೇನೆಯಿಂದ, ಪ್ಯಾರಾಮಿಲಿಟರಿ ಪಡೆಗಳಿಂದ ಪರೇಡ್‌ನಡೆಯಲಿದೆ.

  • Published On - Jan 26,2024 7:30 AM

    Follow us
    ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
    ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
    ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
    ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
    ‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
    ‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
    ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
    ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
    ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
    ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
    14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
    14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
    ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
    ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
    ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
    ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
    ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
    ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
    ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
    ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ