ಕೊರೊನಾ ಸೋಂಕಿಗೆ ಬೆಂಗಳೂರಿನಲ್ಲಿ 27 ವರ್ಷದ ಯುವಕ ಬಲಿ

ಕಳೆದ ವಾರ ಕೊವಿಡ್​ನಿಂದ ಆಸ್ಪತ್ರೆ ಸೇರಿದ್ದ ಯುವಕ ನಿನ್ನೆ ರಾತ್ರಿ ತೀವ್ರ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದಾನೆ. ಕೋರಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದು, ಯುವಕನ ತಂಗಿ ಸಹ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ. 50 ಸಾವಿರ ಖರ್ಚು ಮಾಡಿದರು ಬದುಕಲಿಲ್ಲ ಎಂದು ಕಣ್ಣೀರಿಡುತ್ತಿರುವ ಪೋಷಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸೋಂಕಿಗೆ ಬೆಂಗಳೂರಿನಲ್ಲಿ 27 ವರ್ಷದ ಯುವಕ ಬಲಿ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕೊರೊನಾ ಸೋಂಕಿನ ಅಟ್ಟಹಾಸ ಕಳೆದ ಬಾರಿಗಿಂತ ಈ ಬಾರಿ ಜೋರಾಗಿದೆ. ರಾಜ್ಯದಲ್ಲಿ ಸಾವಿನ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಚಿತಾಗಾರದಲ್ಲಿ ಮೃತ ದೇಹಗಳನ್ನು ಹೊತ್ತು ತರುವ ಆ್ಯಂಬುಲೆನ್ಸ್ಗಳು ಸಾಲಾಗಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೋವಿನ ಸಂಗತಿ ಒಂದೆಡೆಯಾದರೆ, ಇನ್ನೊಂದೆಡೆ ಕೊರೊನಾ ಎರಡನೆ ಅಲೆಗೆ ಹೆಚ್ಚಾಗಿ ಯುವ ಜನತೆ ಬಲಿಯಾಗುತ್ತಿದೆ. ಇಂದು (ಏಪ್ರಿಲ್ 20) 27 ವರ್ಷದ ಯುವಕ ಬಲಿಯಾಗಿದ್ದಾನೆ.

ಕಳೆದ ವಾರ ಕೊವಿಡ್​ನಿಂದ ಆಸ್ಪತ್ರೆ ಸೇರಿದ್ದ ಯುವಕ ತೀವ್ರ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದಾನೆ. ಕೋರಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದು, ಯುವಕನ ತಂಗಿ ಸಹ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದಾಳೆ. 50 ಸಾವಿರ ಖರ್ಚು ಮಾಡಿದರು ಬದುಕಲಿಲ್ಲ ಎಂದು ಕಣ್ಣೀರಿಡುತ್ತಿರುವ ಪೋಷಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

31 ವರ್ಷದ ಯುವಕ ಕೊರೊನಾಗೆ ಬಲಿ ಕಲಬುರಗಿ: ಜಿಲ್ಲೆಯಲ್ಲಿ ಇಂದು 31 ವರ್ಷದ ಯುವಕ ಕೊರೊನಾಗೆ ತುತ್ತಾಗು ಸಾವನ್ನಪ್ಪಿದ್ದಾರೆ. ಮೇ 13ರಂದು ನಿಶ್ಚಿತಾರ್ಥ, ಮದುವೆ ನಿಗದಿಯಾಗಿತ್ತು. ಆದರೆ ಏಪ್ರಿಲ್ 16 ರಂದೇ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೆಮ್ಮು, ಜ್ವರ ಹಿನ್ನೆಲೆಯಲ್ಲಿ ಏಪ್ರಿಲ್ 15 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಕಲಬುರಗಿ ನಗರದಲ್ಲಿ ಪೆಟ್ರೋಲ್ ಬಂಕ್ ನಡೆಸುತ್ತಿದ್ದ ಯುವಕನ ಸಾವನ್ನು ಕಂಡು ಪೋಷಕರು ಕಂಗಾಲಾಗಿದ್ದಾರೆ.

ಇದನ್ನೂ ಓದಿ

ಬಿಜೆಪಿ ಮುಖಂಡರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಬೆದರಿಕೆ: ರಾಮಾಂಜನೇಯ ಆರೋಪ

ಸಂಸದ ವಿ. ಶ್ರೀನಿವಾಸ ಪ್ರಸಾದ್ ಆಪ್ತ ಕಾರ್ಯದರ್ಶಿ ಶಂಕರ್ ಕೊರೊನಾಗೆ ಬಲಿ

(27 years young man died due to covid at bengaluru)

Published On - 3:09 pm, Tue, 20 April 21

Click on your DTH Provider to Add TV9 Kannada