ಬೆಂಗಳೂರು: ಮಹಾಮಾರಿ ಕೊರೊನಾ ಹೊಡೆತಕ್ಕೆ ಬೆಂಗಳೂರು ಪತರಗುಟ್ಟಿ ಹೋಗುತ್ತಿದೆ. ಪಾದರಾಯನಪುರದಲ್ಲಿ ಮತ್ತೆ ಕೊರೊನಾ ಸ್ಫೋಟಗೊಂಡಿದ್ದು, ಬೆಂಗಳೂರಿನ 10 ಪ್ರಕರಣಗಳಲ್ಲಿ 9 ಪಾದರಾಯನಪುರದ್ದಾಗಿದೆ. ಒಂದು ಪ್ರಕರಣ ಮಾತ್ರ ದೀಪಾಂಜಲಿ ನಗರಕ್ಕೆ ಸೇರಿದ್ದು. ಈ 10 ಮಂದಿಯಲ್ಲಿ ಇಬ್ಬರಿಗೆ ಸಂಪರ್ಕ ಯಾರೆಂದೇ ಗೊತ್ತಿಲ್ಲ.
ಪಾದರಾಯನಪುರದ ಪ್ರಕರಣ ಬೆಚ್ಚಿಬೀಳಿಸುವಂತಿದ್ದು, ಸೋಂಕಿತ 292 ಜೊತೆ ಸಂಪರ್ಕ ಹೊಂದಿದ್ದ ಐವರಲ್ಲಿ ಕೊರೊನಾ ದೃಢಪಟ್ಟಿದೆ. ಈ 292 ಸೋಂಕಿತನಿಗೆ ತನ್ನ ಮಾಲೀಕನಿಂದ ಸೋಂಕು ಹಬ್ಬಿತ್ತು. ಲೆದರ್ ಜಾಕೆಟ್, ಬ್ಯಾಗ್ ತಯಾರಿ ಫ್ಯಾಕ್ಟರಿಯ ಮಾಲೀಕನಿಂದ ನೌಕರನಿಗೆ ಸೋಂಕು ಅಟ್ಯಾಕ್ ಆಗಿತ್ತು.
ರಾಜ್ಯದಲ್ಲಿ ಇಂದು ಹೊಸದಾಗಿ 30ಜನರಿಗೆ ಕೊರೊನಾ ಸೋಂಕು ಅಟ್ಯಾಕ್ ಆಗಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆಯಾಗಿದೆ. ಬೆಳಗಾವಿ 14, ವಿಜಯಪುರ 2, ದಕ್ಷಿಣ ಕನ್ನಡ, ತುಮಕೂರು, ದಾವಣಗೆರೆ, ಕಲಬುರಗಿ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.
565 ಕೊರೊನಾ ಸೋಂಕಿತರ ಪೈಕಿ ಈವರೆಗೆ 229 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ ಕೊರೊನಾದಿಂದ 21 ಜನ ಮೃತಪಟ್ಟಿದ್ದು, ಸದ್ಯ 314 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
Published On - 5:54 pm, Thu, 30 April 20