ಆರೋಗ್ಯ ಸಚಿವರ ತವರಿನಲ್ಲೇ ಹೆಲ್ತ್ ವರ್ಕರ್ಸ್​ಗಿಲ್ಲ ಸಂಬಳ, ವೇತನ ಲೆಕ್ಕಿಸದೆ ನಿರಂತರ ಶ್ರಮ!

ಬಳ್ಳಾರಿ: ಕೆಲಸಕ್ಕೆ ಹೋಗೋದು ಅತ್ತ ಇರ್ಲಿ. ಮನೆಯಿಂದ ಹೊರಗೆ ಕಾಲು ಇಡೋಕೂ ಭಯ. ಎಲ್ಲಿ ನಮ್ಮ ಮೇಲೂ ಕೊರೊನಾ ಕೆಂಗಣ್ಣು ಬೀರುತ್ತೋ ಅನ್ನೋ ಆತಂಕ ಎಲ್ಲರನ್ನೂ ಕಾಡ್ತಿದೆ. ಹೀಗಾಗಿಯೇ ಪ್ರತಿಯೊಬ್ಬರು ತಮ್ಮ ರಕ್ಷಣೆ ಬಗ್ಗೆ ಮತ್ತು ಕುಟುಂಬದವರ ಸೇಫ್ಟಿ ಬಗ್ಗೆ ಚಿಂತಿಸುತ್ತಿದ್ದಾರೆ. ಆದ್ರೆ ಇದ್ಯಾವುದನ್ನೂ ಲೆಕ್ಕಿಸದೆ ಕೊರೊನಾ ವಿರುದ್ಧದ ಈ ಮಹಾಯುದ್ಧದಲ್ಲಿ ತಮ್ಮ ಜೀವ ಪಣಕ್ಕಿಟ್ಟು ಹೋರಾಡುತ್ತಿರುವವರು ಆರೋಗ್ಯ ಕಾರ್ಯಕರ್ತರು. ನೂರಾರು ಸಮಸ್ಯೆ ಬದಿಗಿಟ್ಟು, ನಮ್ಮ, ನಿಮ್ಮೆಲ್ಲರ ಆರೋಗ್ಯ ರಕ್ಷಣೆಗೆ ಇವರೆಲ್ಲರೂ ಶ್ರಮಿಸುತ್ತಿದ್ದಾರೆ. ಆದ್ರೂ ಆರೋಗ್ಯ ಕಾರ್ಯಕರ್ತರಿಗೆ […]

ಆರೋಗ್ಯ ಸಚಿವರ ತವರಿನಲ್ಲೇ ಹೆಲ್ತ್ ವರ್ಕರ್ಸ್​ಗಿಲ್ಲ ಸಂಬಳ, ವೇತನ ಲೆಕ್ಕಿಸದೆ ನಿರಂತರ ಶ್ರಮ!
Follow us
ಸಾಧು ಶ್ರೀನಾಥ್​
|

Updated on: May 01, 2020 | 7:11 AM

ಬಳ್ಳಾರಿ: ಕೆಲಸಕ್ಕೆ ಹೋಗೋದು ಅತ್ತ ಇರ್ಲಿ. ಮನೆಯಿಂದ ಹೊರಗೆ ಕಾಲು ಇಡೋಕೂ ಭಯ. ಎಲ್ಲಿ ನಮ್ಮ ಮೇಲೂ ಕೊರೊನಾ ಕೆಂಗಣ್ಣು ಬೀರುತ್ತೋ ಅನ್ನೋ ಆತಂಕ ಎಲ್ಲರನ್ನೂ ಕಾಡ್ತಿದೆ. ಹೀಗಾಗಿಯೇ ಪ್ರತಿಯೊಬ್ಬರು ತಮ್ಮ ರಕ್ಷಣೆ ಬಗ್ಗೆ ಮತ್ತು ಕುಟುಂಬದವರ ಸೇಫ್ಟಿ ಬಗ್ಗೆ ಚಿಂತಿಸುತ್ತಿದ್ದಾರೆ.

ಆದ್ರೆ ಇದ್ಯಾವುದನ್ನೂ ಲೆಕ್ಕಿಸದೆ ಕೊರೊನಾ ವಿರುದ್ಧದ ಈ ಮಹಾಯುದ್ಧದಲ್ಲಿ ತಮ್ಮ ಜೀವ ಪಣಕ್ಕಿಟ್ಟು ಹೋರಾಡುತ್ತಿರುವವರು ಆರೋಗ್ಯ ಕಾರ್ಯಕರ್ತರು. ನೂರಾರು ಸಮಸ್ಯೆ ಬದಿಗಿಟ್ಟು, ನಮ್ಮ, ನಿಮ್ಮೆಲ್ಲರ ಆರೋಗ್ಯ ರಕ್ಷಣೆಗೆ ಇವರೆಲ್ಲರೂ ಶ್ರಮಿಸುತ್ತಿದ್ದಾರೆ. ಆದ್ರೂ ಆರೋಗ್ಯ ಕಾರ್ಯಕರ್ತರಿಗೆ ಸರಿಯಾದ ಸಮಯಕ್ಕೆ ಸಂಬಳವೇ ಸಿಗುತ್ತಿಲ್ಲ ಅನ್ನೋದು ಎಂಥವರಲ್ಲೂ ಬೇಸರ ಮೂಡಿಸುವಂತಿದೆ.

3 ತಿಂಗಳಿಂದ ಸಂಬಳ ಸಿಗದೆ ಸಿಬ್ಬಂದಿಗೆ ತೀವ್ರ ಸಂಕಷ್ಟ: ಬಳ್ಳಾರಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಆರೋಗ್ಯ ಸಹಾಯಕರು, ನರ್ಸ್​ಗಳು ಸೇರಿದಂತೆ ಒಟ್ಟು 1822 ಸಿಬ್ಬಂದಿಗೆ 3 ತಿಂಗಳಿಂದ ವೇತನವನ್ನೇ ಬಿಡುಗಡೆ ಮಾಡಿಲ್ಲವಂತೆ. ಇನ್ನು ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳನ್ನ ಕೇಳಿದ್ರೆ, ವೇತನ ಬಿಡುಗಡೆ ಸಂಬಂಧ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಜೊತೆ ಮಾತನಾಡಿದ್ದೇವೆ ಅಂತಿದ್ದಾರೆ. ಅಲ್ಲದೆ ವೇತನ ಬಿಡುಗಡೆ ಆಗುತ್ತೆ ಅಂತಾ ಭರವಸೆ ಕೊಡ್ತಾರೆ.

ವೇತನ ಲೆಕ್ಕಿಸದೆ ಕೊರೊನಾ ಹೀರೋಗಳ ನಿರಂತರ ಶ್ರಮ: ಇನ್ನು ಕಳೆದ 3 ತಿಂಗಳಿಂದ ಇಂಥ ಸಮಸ್ಯೆಯಾಗಿದ್ದು, ಕೊರೊನಾ ದಾಳಿಯಿಟ್ಟ ಸಂದರ್ಭದಲ್ಲೂ ಇದೇ ರೀತಿ ಸಂಕಷ್ಟ ಎದುರಿಸುವಂತಾಗಿದೆ. ಆದ್ರೂ ಧೃತಿಗೆಡದ ಆರೋಗ್ಯ ಕಾರ್ಯಕರ್ತರು ಸಂಬಳ ಲೆಕ್ಕಿಸದೆ ದೇಶಸೇವೆ ಹಾಗೂ ನಾಡಿನ ಜನರ ಸೇವೆ ಮಾಡುತ್ತಿದ್ದಾರೆ. ಇದನ್ನಾದ್ರೂ ಸರ್ಕಾರ ಇವರ ಕಷ್ಟ ಗಮನಿಸಬೇಕಿದೆ.

ಒಟ್ನಲ್ಲಿ ಜೀವನ ಮತ್ತು ಜೀವ ಎರಡನ್ನೂ ಪಣಕ್ಕಿಟ್ಟು ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರ ನೆರವಿಗೆ ಸರ್ಕಾರ ಧಾವಿಸಬೇಕಿದೆ. ಆರೋಗ್ಯ ಸಚಿವರು ಈಗಲಾದರೂ ತಮ್ಮ ತವರು ಜಿಲ್ಲೆಯಲ್ಲೇ ಆಗುತ್ತಿರುವ ಈ ಅನ್ಯಾಯ ಸರಿಪಡಿಸಲು ಖಡಕ್ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಸಮಸ್ಯೆ ಸುಳಿಗೆ ಸಿಲುಕಿರುವ ಆರೋಗ್ಯ ಕಾರ್ಯಕರ್ತರ ಮೇಲೆ ಇದು ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀರುವ ಅಪಾಯವಿರುತ್ತದೆ.

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ