ಜಿಲ್ಲಾಡಳಿತ ವರದಿ ಶಾಕ್! ಬೆಂಗಳೂರಿನಲ್ಲಿ ಮೇ ಅಂತ್ಯಕ್ಕೆ ಸೋಂಕಿತರು ಎಷ್ಟು?

ಬೆಂಗಳೂರು: ಜಿಲ್ಲಾಡಳಿತ ಸಿದ್ಧಪಡಿಸಿರುವ ಅಂದಾಜು ವರದಿ ಬೆಂಗಳೂರಿಗರನ್ನು ಬೆಚ್ಚಿಬೀಳುವಂತೆ ಮಾಡಿದೆ. ಮೇ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ ಐದು ಸಾವಿರಕ್ಕೆ ಏರಿಕೆಯಾಗಲಿದೆ ಎಂಬ ಆಘಾತಕಾರಿ ವರದಿಯನ್ನ ನೀಡಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುವಂತಹ ಸಾಧ್ಯತೆ ಇದೆ. ನಗರದಲ್ಲಿ ಲಾಕ್​ಡೌನ್ ಕಟ್ಟುನಿಟ್ಟಾಗಿ ಮುಂದುವರಿಸಿದ್ದರೂ ಸೋಂಕಿತರ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆ ಹೆಚ್ಚಾಗಿದೆ. ಬೆಂಗಳೂರು ಜಿಲ್ಲಾಡಳಿತ ಸಿದ್ಧಪಡಿಸಿರುವ ಅಂದಾಜು ವರದಿಯಲ್ಲಿ ಸ್ಪೋಟಕ ಮಾಹಿತಿ ಸಿಕ್ಕಿದೆ. ಸದ್ಯ ಬೆಂಗಳೂರಿನಲ್ಲಿ 141 ಸೋಂಕಿತರಿದ್ದು, ಮೇ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ […]

ಜಿಲ್ಲಾಡಳಿತ ವರದಿ ಶಾಕ್! ಬೆಂಗಳೂರಿನಲ್ಲಿ ಮೇ ಅಂತ್ಯಕ್ಕೆ ಸೋಂಕಿತರು ಎಷ್ಟು?
sadhu srinath

|

May 01, 2020 | 10:11 AM

ಬೆಂಗಳೂರು: ಜಿಲ್ಲಾಡಳಿತ ಸಿದ್ಧಪಡಿಸಿರುವ ಅಂದಾಜು ವರದಿ ಬೆಂಗಳೂರಿಗರನ್ನು ಬೆಚ್ಚಿಬೀಳುವಂತೆ ಮಾಡಿದೆ. ಮೇ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ ಐದು ಸಾವಿರಕ್ಕೆ ಏರಿಕೆಯಾಗಲಿದೆ ಎಂಬ ಆಘಾತಕಾರಿ ವರದಿಯನ್ನ ನೀಡಿದೆ. ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುವಂತಹ ಸಾಧ್ಯತೆ ಇದೆ.

ನಗರದಲ್ಲಿ ಲಾಕ್​ಡೌನ್ ಕಟ್ಟುನಿಟ್ಟಾಗಿ ಮುಂದುವರಿಸಿದ್ದರೂ ಸೋಂಕಿತರ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆ ಹೆಚ್ಚಾಗಿದೆ. ಬೆಂಗಳೂರು ಜಿಲ್ಲಾಡಳಿತ ಸಿದ್ಧಪಡಿಸಿರುವ ಅಂದಾಜು ವರದಿಯಲ್ಲಿ ಸ್ಪೋಟಕ ಮಾಹಿತಿ ಸಿಕ್ಕಿದೆ. ಸದ್ಯ ಬೆಂಗಳೂರಿನಲ್ಲಿ 141 ಸೋಂಕಿತರಿದ್ದು, ಮೇ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 4,811 ಕ್ಕೆ ಏರಿಕೆಯಾಗಬಹುದು ಎನ್ನಲಾಗಿದೆ.

ಪಾದರಾಯನಪುರ, ಹೊಂಗಸಂದ್ರ ಸೇರಿದಂತೆ ಹಲವೆಡೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಯಾವುದೇ ಸೋಂಕಿತರ ಸಂಪರ್ಕ ಹಾಗೂ ಕೊರೊನಾ‌ ಲಕ್ಷಣಗಳಿಲ್ಲದ ವ್ಯಕ್ತಿಗಳಲ್ಲೂ ಸೋಂಕು ಪತ್ತೆಯಾಗುತ್ತಿದೆ. ರ್ಯಾಂಡಮ್ ಟೆಸ್ಟ್​ಗಳಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೀಗಾಗಿ ಮೇ ಅಂತ್ಯದೊಳಗೆ 5 ಸಾವಿರ ಸೋಂಕಿತರು ಪತ್ತೆಯಾಗಬಹುದು ಎಂದು ಅಂದಾಜಿಸಲಾಗಿದೆ.

ನಗರದಲ್ಲಿ ಸೋಂಕಿತರು ಹೆಚ್ಚಾದ್ರೆ ಎಷ್ಟು ವೈದ್ಯರು ಬೇಕು ಗೊತ್ತಾ? ಜಿಲ್ಲಾಡಳಿತ ಸಿದ್ಧಪಡಿಸಿರುವ ಅಂದಾಜು ವರದಿಯ ಪ್ರಕಾರ ಬೆಂಗಳೂರಿನಲ್ಲಿ ಮೇ ಅಂತ್ಯದಲ್ಲಿ 5 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಲಿದ್ದಾರೆ. ಹೀಗಾಗಿ ಸೋಂಕನ್ನು ನಿಯಂತ್ರಿಸಲು ಹೆಚ್ಚು ಜನ ವೈದ್ಯರ ಅವಶ್ಯಕತೆ ಇದೆ.4 ಸಾವಿರ ಸೋಂಕಿತರು ಪತ್ತೆಯಾದ್ರೆ 2241 ಜನ ಜೂನಿಯರ್ ಡಾಕ್ಟರ್ಸ್​ಗಳ ಅವಶ್ಯಕತೆ ಬೀಳುತ್ತೆ.

ಆದ್ರೆ, ಹಾಲಿ 310 ಜನ ಜೂನಿಯರ್ ಡಾಕ್ಟರ್ಸ್​ಗಳು ಇದ್ದಾರೆ. ಕನ್ಸಲ್ಟೆಂಟ್ 1078 ಜನರ ಅವಶ್ಯಕತೆ ಬೀಳಬಹುದು. ಹಾಲಿ 107 ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಾಟಾ ಎಂಟ್ರಿ ಆಪರೇಟರ್ 699 ಜನರ ಅವಶ್ಯಕತೆ ಬೀಳಬಹುದು. ಹಾಲಿ 20 ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರೂಪ್ ಡಿ ನೌಕರರು 981 ಜನ ಅವಶ್ಯಕತೆ ಬೀಳಬಹುದು. ನಗರದ ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳ ವೈದ್ಯರ ಸಹಾಯ ಪಡೆಯಲು ಸಿದ್ಧತೆ ನಡೆಸಬಹುದು. https://www.facebook.com/Tv9Kannada/videos/526634084692700/

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada