ಪಾದರಾಯನಪುರದಲ್ಲಿ ಮತ್ತೆ ಕೊರೊನಾ‌ ಸ್ಫೋಟ, ಇಂದು ಬೆಂಗಳೂರಲ್ಲಿ 10 ಮಂದಿಗೆ ಸೋಂಕು!

ಬೆಂಗಳೂರು: ಮಹಾಮಾರಿ ಕೊರೊನಾ ಹೊಡೆತಕ್ಕೆ ಬೆಂಗಳೂರು ಪತರಗುಟ್ಟಿ ಹೋಗುತ್ತಿದೆ. ಪಾದರಾಯನಪುರದಲ್ಲಿ ಮತ್ತೆ ಕೊರೊನಾ‌ ಸ್ಫೋಟಗೊಂಡಿದ್ದು, ಬೆಂಗಳೂರಿನ 10 ಪ್ರಕರಣಗಳಲ್ಲಿ 9 ಪಾದರಾಯನಪುರದ್ದಾಗಿದೆ. ಒಂದು ಪ್ರಕರಣ ಮಾತ್ರ ದೀಪಾಂಜಲಿ ನಗರಕ್ಕೆ ಸೇರಿದ್ದು. ಈ 10 ಮಂದಿಯಲ್ಲಿ ಇಬ್ಬರಿಗೆ ಸಂಪರ್ಕ ಯಾರೆಂದೇ ಗೊತ್ತಿಲ್ಲ. ಪಾದರಾಯನಪುರದ ಪ್ರಕರಣ ಬೆಚ್ಚಿಬೀಳಿಸುವಂತಿದ್ದು, ಸೋಂಕಿತ 292 ಜೊತೆ ಸಂಪರ್ಕ ಹೊಂದಿದ್ದ ಐವರಲ್ಲಿ ಕೊರೊನಾ ದೃಢಪಟ್ಟಿದೆ. ಈ 292 ಸೋಂಕಿತನಿಗೆ ತನ್ನ ಮಾಲೀಕನಿಂದ ಸೋಂಕು ಹಬ್ಬಿತ್ತು. ಲೆದರ್ ಜಾಕೆಟ್, ಬ್ಯಾಗ್ ತಯಾರಿ ಫ್ಯಾಕ್ಟರಿಯ ಮಾಲೀಕನಿಂದ ನೌಕರನಿಗೆ ಸೋಂಕು […]

ಪಾದರಾಯನಪುರದಲ್ಲಿ ಮತ್ತೆ ಕೊರೊನಾ‌ ಸ್ಫೋಟ, ಇಂದು ಬೆಂಗಳೂರಲ್ಲಿ 10 ಮಂದಿಗೆ ಸೋಂಕು!
Follow us
ಸಾಧು ಶ್ರೀನಾಥ್​
|

Updated on:Apr 30, 2020 | 6:04 PM

ಬೆಂಗಳೂರು: ಮಹಾಮಾರಿ ಕೊರೊನಾ ಹೊಡೆತಕ್ಕೆ ಬೆಂಗಳೂರು ಪತರಗುಟ್ಟಿ ಹೋಗುತ್ತಿದೆ. ಪಾದರಾಯನಪುರದಲ್ಲಿ ಮತ್ತೆ ಕೊರೊನಾ‌ ಸ್ಫೋಟಗೊಂಡಿದ್ದು, ಬೆಂಗಳೂರಿನ 10 ಪ್ರಕರಣಗಳಲ್ಲಿ 9 ಪಾದರಾಯನಪುರದ್ದಾಗಿದೆ. ಒಂದು ಪ್ರಕರಣ ಮಾತ್ರ ದೀಪಾಂಜಲಿ ನಗರಕ್ಕೆ ಸೇರಿದ್ದು. ಈ 10 ಮಂದಿಯಲ್ಲಿ ಇಬ್ಬರಿಗೆ ಸಂಪರ್ಕ ಯಾರೆಂದೇ ಗೊತ್ತಿಲ್ಲ.

ಪಾದರಾಯನಪುರದ ಪ್ರಕರಣ ಬೆಚ್ಚಿಬೀಳಿಸುವಂತಿದ್ದು, ಸೋಂಕಿತ 292 ಜೊತೆ ಸಂಪರ್ಕ ಹೊಂದಿದ್ದ ಐವರಲ್ಲಿ ಕೊರೊನಾ ದೃಢಪಟ್ಟಿದೆ. ಈ 292 ಸೋಂಕಿತನಿಗೆ ತನ್ನ ಮಾಲೀಕನಿಂದ ಸೋಂಕು ಹಬ್ಬಿತ್ತು. ಲೆದರ್ ಜಾಕೆಟ್, ಬ್ಯಾಗ್ ತಯಾರಿ ಫ್ಯಾಕ್ಟರಿಯ ಮಾಲೀಕನಿಂದ ನೌಕರನಿಗೆ ಸೋಂಕು ಅಟ್ಯಾಕ್ ಆಗಿತ್ತು.

ರಾಜ್ಯದಲ್ಲಿ ಇಂದು ಹೊಸದಾಗಿ 30ಜನರಿಗೆ ಕೊರೊನಾ ಸೋಂಕು ಅಟ್ಯಾಕ್ ಆಗಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆಯಾಗಿದೆ. ಬೆಳಗಾವಿ 14, ವಿಜಯಪುರ 2, ದಕ್ಷಿಣ ಕನ್ನಡ, ತುಮಕೂರು, ದಾವಣಗೆರೆ, ಕಲಬುರಗಿ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

565 ಕೊರೊನಾ ಸೋಂಕಿತರ ಪೈಕಿ ಈವರೆಗೆ 229 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ ಕೊರೊನಾದಿಂದ 21 ಜನ ಮೃತಪಟ್ಟಿದ್ದು, ಸದ್ಯ 314 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Published On - 5:54 pm, Thu, 30 April 20

ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್