ಬೆಂಗಳೂರು: ರಾಜಧಾನಿಯಲ್ಲಿ ಇಂದು ಹೊಸದಾಗಿ 4 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಕರ್ನಾಟಕದಲ್ಲಿ ಇಂದು 12 ಜನರಿಗೆ ಕೊರೊನಾ ಪಾಸಿಟಿವ್ ಬಂದಂತಾಗಿದೆ. ಒಟ್ಟಾರೆಯಾಗಿ, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇದುವರೆಗೂ 601ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೊನಾಗೆ ಇದುವರೆಗೆ 25 ಜನರು ಸಾವನ್ನು ಕಂಡಿದ್ದಾರೆ. 601 ಸೋಂಕಿತರ ಪೈಕಿ, 271 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಇಂದು 12 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ವಿವರ ಹೀಗಿದೆ:
1) 590ನೇ ಸೋಂಕಿತ ಬೀದರ್ ಜಿಲ್ಲೆಯ 82 ವರ್ಷದ ವೃದ್ಧ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.
2) 591ನೇ ಸೋಂಕಿತ ತುಮಕೂರು ಜಿಲ್ಲೆಯ 40 ವರ್ಷದ ವ್ಯಕ್ತಿ. 535, 553ನೇ ಸೋಂಕಿತರ ಸಂಪರ್ಕದಿಂದ ಈ ವ್ಯಕ್ತಿಗೆ ಸೋಂಕು ತಗುಲಿದೆ.
3) 592ನೇ ಸೋಂಕಿತೆ ತುಮಕೂರು ಜಿಲ್ಲೆ 29 ವರ್ಷದ ಮಹಿಳೆ. 535, 553ನೇ ಸೋಂಕಿತರ ಸಂಪರ್ಕದಿಂದ ಈ ವ್ಯಕ್ತಿಗೆ ಸೋಂಕು ಬಂದಿದೆ.
4) 593ನೇ ಸೋಂಕಿತ ಚಿಕ್ಕಬಳ್ಳಾಪುರ ಜಿಲ್ಲೆಯ 54 ವರ್ಷದ ವ್ಯಕ್ತಿ. 250ನೇ ಸೋಂಕಿತನ ದ್ವಿತೀಯ ಸಂಪರ್ಕದಿಂದ ಈ ಸೋಂಕು.
5) 594ನೇ ಸೋಂಕಿತ ವಿಜಯಪುರದ 22 ವರ್ಷದ ಯುವಕ. ಮತ್ತು
6) 595ನೇ ಸೋಂಕಿತ ವಿಜಯಪುರದ 45 ವರ್ಷದ ಪುರುಷ. ಇವರಿಬ್ಬರಿಗೂ ಇಬ್ಬರಿಗೂ 221ನೇ ಸೋಂಕಿತನ ಸಂಪರ್ಕದಿಂದ ಸೋಂಕು ಬಂದಿದೆ.
7) 596ನೇ ಸೋಂಕಿತ ಬೆಳಗಾವಿ ಜಿಲ್ಲೆಯ 23 ವರ್ಷದ ಯುವಕ. 128ನೇ ಸೋಂಕಿತನ ದ್ವಿತೀಯ ಸಂಪರ್ಕದಿಂದ ಈತನಿಗೆ ಸೋಂಕು ತಗುಲಿದೆ.
8) 597ನೇ ಸೋಂಕಿತೆ ಬಾಗಲಕೋಟೆಯ 45 ವರ್ಷದ ಮಹಿಳೆ. 381ನೇ ಸೋಂಕಿತನಿಂದ ಜಮಖಂಡಿ ಈ ಮಹಿಳೆಗೆ ಸೋಂಕು.
9) 598ನೇ ಸೋಂಕಿತೆ ಬೆಂಗಳೂರಿನ 32 ವರ್ಷದ ಮಹಿಳೆ. 444ನೇ ಸೋಂಕಿತನ ಸಂಪರ್ಕದಿಂದ ಈ ಮಹಿಳೆಗೆ ಸೋಂಕು.
10) 599ನೇ ಸೋಂಕಿತೆ ಬೆಂಗಳೂರಿನ 38 ವರ್ಷದ ಮಹಿಳೆ.
11) 600ನೇ ಸೋಂಕಿತೆ ಬೆಂಗಳೂರಿನ 26 ವರ್ಷದ ಮಹಿಳೆ.
12) 601ನೇ ಸೋಂಕಿತ ಬೆಂಗಳೂರಿನ 30 ವರ್ಷದ ಪುರುಷ. ಮೇಲಿನ ಈ ಮೂವರಿಗೂ 565ನೇ ಸೋಂಕಿತರಿಂದ ಸೋಂಕು ತಗುಲಿದೆ.
Published On - 5:48 pm, Sat, 2 May 20