ಸಿಎಂ ಗೃಹ ಕಚೇರಿಗೂ ವಕ್ಕರಿಸಿದ ಕೊರೊನಾ! ಮಹಿಳಾ ಪೇದೆ ಸೇರಿ ನಾಲ್ವರಿಗೆ ಸೋಂಕು

|

Updated on: Jun 25, 2020 | 4:09 PM

ಬೆಂಗಳೂರು: ಈಗ ಎಲ್ಲಿ ಕೇಳಿದ್ರೂ ಕೊರೊನಾ ಜಪ, ಕೊರೊನಾ ಸೋಂಕಿನದ್ದೇ ಆತಂಕ. ದೇಶಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಈ ಮಹಾಮಾರಿ, ಈಗಾಗಲೇ ಲಕ್ಷಾಂತರ ಜನರಿಗೆ ಹಬ್ಬಿದೆ. ರಾಜಧಾನಿಯಲ್ಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಸಿಎಂ ಗೃಹ ಕಚೇರಿ ಕೃಷ್ಣಾದ ನಾಲ್ವರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಗೃಹ ಕಚೇರಿ ಕೃಷ್ಣಾದ ಮಹಿಳಾ ಕಾನ್ಸ್‌ಟೇಬಲ್‌, ARSI, ಅಗ್ನಿಶಾಮಕ ಸಿಬ್ಬಂದಿ ಹಾಗೂ ಎಲೆಕ್ಟ್ರಿಷಿಯನ್‌ಗೆ ಕೊರೊನಾ ಸೋಂಕು ಪಾಸಿಟಿವ್‌ ಬಂದಿದೆ. ಒಬ್ಬರನ್ನ ಈಗಾಗಲೇ ಕೋವಿಡ್ ಆಸ್ಪತ್ರೆಗೆ ಶಿಫ್ಟ್ […]

ಸಿಎಂ ಗೃಹ ಕಚೇರಿಗೂ ವಕ್ಕರಿಸಿದ ಕೊರೊನಾ! ಮಹಿಳಾ ಪೇದೆ ಸೇರಿ ನಾಲ್ವರಿಗೆ ಸೋಂಕು
Follow us on

ಬೆಂಗಳೂರು: ಈಗ ಎಲ್ಲಿ ಕೇಳಿದ್ರೂ ಕೊರೊನಾ ಜಪ, ಕೊರೊನಾ ಸೋಂಕಿನದ್ದೇ ಆತಂಕ. ದೇಶಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಈ ಮಹಾಮಾರಿ, ಈಗಾಗಲೇ ಲಕ್ಷಾಂತರ ಜನರಿಗೆ ಹಬ್ಬಿದೆ. ರಾಜಧಾನಿಯಲ್ಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಈ ಮಧ್ಯೆ ಸಿಎಂ ಗೃಹ ಕಚೇರಿ ಕೃಷ್ಣಾದ ನಾಲ್ವರು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಗೃಹ ಕಚೇರಿ ಕೃಷ್ಣಾದ ಮಹಿಳಾ ಕಾನ್ಸ್‌ಟೇಬಲ್‌, ARSI, ಅಗ್ನಿಶಾಮಕ ಸಿಬ್ಬಂದಿ ಹಾಗೂ ಎಲೆಕ್ಟ್ರಿಷಿಯನ್‌ಗೆ ಕೊರೊನಾ ಸೋಂಕು ಪಾಸಿಟಿವ್‌ ಬಂದಿದೆ. ಒಬ್ಬರನ್ನ ಈಗಾಗಲೇ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟಿವಿ9ಗೆ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇವರು ಪ್ರತಿದಿನ ಕೃಷ್ಣಾದಲ್ಲಿ ಕೆಲಸ ಮಾಡುವವರಲ್ಲ
ಕೊರೊನಾ ಪಾಸಿಟಿವ್ ಬಂದಿರುವವರು ಪ್ರತಿದಿನ ಕೃಷ್ಣಾದಲ್ಲಿ ಕೆಲಸ ಮಾಡುವವರಲ್ಲ. ಪೊಲೀಸ್ ಸಿಬ್ಬಂದಿ 15 ದಿನಗಳಿಗೊಮ್ಮೆ ಬದಲಾಗುತ್ತಾರೆ. ಇಂದು ಪಾಸಿಟಿವ್ ಬಂದಿರುವ ಇಬ್ಬರು ಜೂನ್ ತಿಂಗಳಿನಲ್ಲಿ ಕೃಷ್ಣಾದಲ್ಲಿ ಕೆಲಸ ಮಾಡಿಲ್ಲ. ಮೇ ತಿಂಗಳಿನಲ್ಲಿ ಕೆಲಸ ನಿರ್ವಹಿಸಿದ್ದರು.

ಈ ಹಿಂದೆ ಕೆಲಸ ನಿರ್ವಹಿಸಿದ್ದ ಎಲ್ಲಾ ಸಿಬ್ಬಂದಿಯನ್ನು ಕರೆಸಿ ಮಂಗಳವಾರ ಟೆಸ್ಟ್ ಮಾಡಲಾಗಿತ್ತು. ಪಾಸಿಟಿವ್ ಬಂದಿರುವ ಇಬ್ಬರು ಈಗ ಕೃಷ್ಣಾದಲ್ಲಿ ಕೆಲಸ ಮಾಡ್ತಿಲ್ಲ, ಬೇರೆ ಕಡೆ ಕೆಲಸ ಮಾಡ್ತಿದ್ದಾರೆ. ಅಲ್ಲದೆ, ಎಲೆಕ್ಟ್ರಿಷಿಯನ್ ಕೆಲಸ ಮಾಡಿ ಒಂದು ತಿಂಗಳಾಗಿದೆ.‌ ನಾಳೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮತ್ತೊಮ್ಮೆ ಸ್ಯಾನಿಟೈಸ್​ ಮಾಡಲಾಗುತ್ತೆ.

Published On - 3:04 pm, Thu, 25 June 20