ಪೊಲೀಸ್ ಕಾಲೋನಿ ಪರೀಕ್ಷಾ ಕೇಂದ್ರದಲ್ಲಿ ನಕಲಿಗೆ ಯತ್ನ, ಕಿಟಕಿಯಲ್ಲಿ ನೋಟ್ಬುಕ್ ಪತ್ತೆ
ರಾಯಚೂರು: ನಗರದ ಪೊಲೀಸ್ ಕಾಲೋನಿ ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುವ ಯತ್ನ ನಡೆದಿದೆ. ಪರೀಕ್ಷಾ ಕೇಂದ್ರದ ಮೇಲೆ ಡಿಸಿ ವೆಂಕಟೇಶ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ದಾಳಿ ವೇಳೆ ಪರೀಕ್ಷಾ ಕೊಠಡಿಯ ಕಿಟಕಿಯಲ್ಲಿ ಗೈಡ್ ಹಾಗೂ ನೋಟ್ಬುಕ್ಗಳು ಪತ್ತೆಯಾಗಿದೆ. ಪರೀಕ್ಷಾ ಮೇಲ್ವಿಚಾರಕಿಗೆ ಡಿಸಿ ತರಾಟೆ ಇದನ್ನು ಕಂಡ ಡಿಸಿ ವೆಂಕಟೇಶ್ ಕುಮಾರ್ ಕೊಠಡಿಯ ಮೇಲ್ವಿಚಾರಕಿ ಶೀಲಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಅವರನ್ನ ಸೇವೆಯಿಂದ ರಿಲೀವ್ ಮಾಡಿಸಿದ ವೆಂಕಟೇಶ್ ಕುಮಾರ್ ಮತ್ತೊಬ್ಬ ಮೇಲ್ವಿಚಾರಕರನ್ನ […]
ರಾಯಚೂರು: ನಗರದ ಪೊಲೀಸ್ ಕಾಲೋನಿ ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುವ ಯತ್ನ ನಡೆದಿದೆ. ಪರೀಕ್ಷಾ ಕೇಂದ್ರದ ಮೇಲೆ ಡಿಸಿ ವೆಂಕಟೇಶ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ದಾಳಿ ವೇಳೆ ಪರೀಕ್ಷಾ ಕೊಠಡಿಯ ಕಿಟಕಿಯಲ್ಲಿ ಗೈಡ್ ಹಾಗೂ ನೋಟ್ಬುಕ್ಗಳು ಪತ್ತೆಯಾಗಿದೆ.
ಪರೀಕ್ಷಾ ಮೇಲ್ವಿಚಾರಕಿಗೆ ಡಿಸಿ ತರಾಟೆ ಇದನ್ನು ಕಂಡ ಡಿಸಿ ವೆಂಕಟೇಶ್ ಕುಮಾರ್ ಕೊಠಡಿಯ ಮೇಲ್ವಿಚಾರಕಿ ಶೀಲಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಅವರನ್ನ ಸೇವೆಯಿಂದ ರಿಲೀವ್ ಮಾಡಿಸಿದ ವೆಂಕಟೇಶ್ ಕುಮಾರ್ ಮತ್ತೊಬ್ಬ ಮೇಲ್ವಿಚಾರಕರನ್ನ ನೇಮಿಸಿದರು. ಜೊತೆಗೆ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದ್ದಾರೆ.
Published On - 2:45 pm, Thu, 25 June 20