ಬಹ್ರೇನ್​ನಿಂದ ಮಂಗಳೂರು ಬಂದರಿಗೆ ಬಂದ 40 ಮೆಟ್ರಿಕ್ ಟನ್ ಆಕ್ಸಿಜನ್; ಅನ್​ಲೋಡ್ ಪ್ರಕ್ರಿಯೆ ಮುಕ್ತಾಯ

| Updated By: ganapathi bhat

Updated on: Aug 23, 2021 | 12:48 PM

ಕರಾವಳಿ ಭಾಗಕ್ಕೆ (ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಕ್ಕೆ) 20 ಮೆಟ್ರಿಕ್ ಟನ್ ಆಕ್ಸಿಜನ್​ನ್ನು ಬಳಕೆ ಮಾಡಿಕೊಳ್ಳಲಿರುವ ಜಿಲ್ಲಾಡಳಿತ, ನಂತರದ 20 ಮೆಟ್ರಿಕ್ ಟನ್ ಆಕ್ಸಿಜನ್​ನ್ನು ವಿವಿಧ ಜಿಲ್ಲೆಗಳಿಗೆ ಬಳಕೆ ಮಾಡಲಿದೆ.

ಬಹ್ರೇನ್​ನಿಂದ ಮಂಗಳೂರು ಬಂದರಿಗೆ ಬಂದ 40 ಮೆಟ್ರಿಕ್ ಟನ್ ಆಕ್ಸಿಜನ್; ಅನ್​ಲೋಡ್ ಪ್ರಕ್ರಿಯೆ ಮುಕ್ತಾಯ
ಬಹ್ರೇನ್​ನಿಂದ ಮಂಗಳೂರಿಗೆ ಆಕ್ಸಿಜನ್ ಆಗಮನ
Follow us on

ಮಂಗಳೂರು: ಬಹ್ರೇನ್‌ನಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಇಲ್ಲಿನ ನವ ಮಂಗಳೂರು ಬಂದರ್‌ಗೆ ಬಂದಿದೆ. ನೌಕಾಪಡೆಯ ಐಎನ್​ಎಸ್ ತಲ್ವಾರ್‌ನಲ್ಲಿ ಆಕ್ಸಿಜನ್ ಬಂದಿದೆ. ಬಹ್ರೇನ್‌ನ ಮನಾಮಾ ಬಂದರಿನಿಂದ ಬಂದಿದ್ದ ಐಎನ್​ಎಸ್ ತಲ್ವಾರ್‌, ಆಕ್ಸಿಜನ್ ಹೊತ್ತು ತಂದಿದೆ. 2 ಕ್ರಯೋಜೆನಿಕ್ ಐಸೋಕಂಟೇನರ್​ಗಳಲ್ಲಿ ಆಕ್ಸಿಜನ್ ರವಾನೆ ಮಾಡಲಾಗಿದೆ. ಕೇವಲ ಆಕ್ಸಿಜನ್ ಮಾತ್ರವಲ್ಲದೆ, ಕೊವಿಡ್ ಚಿಕಿತ್ಸೆಗೆ ಬಳಸಲಾಗುವ ಇತರ ವೈದ್ಯಕೀಯ ಉಪಕರಣಗಳನ್ನು ಕೂಡ ಹಡಗು ತಂದಿದೆ. ಕರ್ನಾಟಕದ ಬೇಡಿಕೆಗೆ ಅನುಗುಣವಾಗಿ ಈ ಆಮ್ಲಜನಕ ಪೂರೈಕೆ ಮಾಡಲಾಗುವುದು ಎಂದು ತಿಳಿದುಬಂದಿದೆ.

20 ಮೆಟ್ರಿಕ್ ಟನ್ ಆಕ್ಸಿಜನ್​​ ಕರಾವಳಿ ಭಾಗಕ್ಕೆ ಬಳಕೆ
ಕರಾವಳಿ ಭಾಗಕ್ಕೆ (ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಕ್ಕೆ) 20 ಮೆಟ್ರಿಕ್ ಟನ್ ಆಕ್ಸಿಜನ್​ನ್ನು ಬಳಕೆ ಮಾಡಿಕೊಳ್ಳಲಿರುವ ಜಿಲ್ಲಾಡಳಿತ, ನಂತರದ 20 ಮೆಟ್ರಿಕ್ ಟನ್ ಆಕ್ಸಿಜನ್​ನ್ನು ವಿವಿಧ ಜಿಲ್ಲೆಗಳಿಗೆ ಬಳಕೆ ಮಾಡಲಿದೆ.

ಭಾರತದೊಂದಿಗಿನ ದೋಸ್ತಿನಿಭಾಯಿಸುತ್ತಿರುವ ಬಹ್ರೈನ್ ರಾಷ್ಟ್ರದಿಂದ ಆಕ್ಸಿಜನ್ ಲಭ್ಯವಾಗಿದೆ. ಮೆಡಿಕಲ್​ ಆಕ್ಸಿಜನ್​ ಅನ್​ಲೋಡ್​ ಪ್ರಕ್ರಿಯೆ ಮುಕ್ತಾಯಗೊಂಡಿದೆ. ನೌಕೆಯಲ್ಲಿ ಬಂದಿರುವ ಒಟ್ಟು ಆಕ್ಸಿಜನ್ ಪ್ರಮಾಣದಲ್ಲಿ ಅರ್ಧದಷ್ಟು ಅಂದರೆ, 20 ಮೆಟ್ರಿಕ್ ಟನ್ ಆಕ್ಸಿಜನ್​ನ್ನು ಕರಾವಳಿ ಭಾಗಕ್ಕೆ ಬಳಕೆ ಮಾಡಲಾಗುವುದು. ಉಳಿದ 20 ಮೆಟ್ರಿಕ್ ಟನ್ ಆಕ್ಸಿಜನ್ ವಿವಿಧ ಜಿಲ್ಲೆಗಳಿಗೆ ರವಾನೆ‌ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಕರ್ನಾಟಕಕ್ಕೆ ಆಕ್ಸಿಜನ್ ಒದಗಿಸಲು ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ
ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸಿ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಉತ್ಪಾದಿಸುವ ಆಕ್ಸಿಜನ್ ಬಳಕೆಗೆ ಅವಕಾಶ ನೀಡಿ, ಈ ಬಗ್ಗೆ ತೀರ್ಮಾನಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆಯನ್ನು ನೀಡಿದೆ. ದೇಶದಲ್ಲೇ ಅತ್ಯಧಿಕ ಸೋಂಕು ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಚಾಮರಾಜನಗರದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದೆ ಸೋಂಕಿತರು ಸಾವನ್ನಪ್ಪಿದ್ದಾರೆ. ಆಕ್ಸಿಜನ್ ಕೊರತೆಯಿಂದ ರಾಜ್ಯದಲ್ಲಿ ಹೆಚ್ಚಿನ ಸಾವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್​ನ ಆದೇಶ ಮಹತ್ವದ್ದಾಗಿದೆ. ಅಂದ ಹಾಗೆ ರಾಜ್ಯಕ್ಕೆ 1,792 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ವಿಶಾಖಪಟ್ಟಣ, ಒಡಿಶಾದಿಂದ ರಾಜ್ಯಕ್ಕೆ ಆಮ್ಲಜನಕ ತರುವುದು ವಿಳಂಬ ಆಗುತ್ತಿದೆ. ಕೇಂದ್ರ ಸರ್ಕಾರದಿಂದ 965 ಮೆಟ್ರಿಕ್ ಟನ್ ಒದಗಿಸುವುದಾಗಿ ಈಗಾಗಲೇ ಹೇಳಲಾಗಿದೆ. ಇನ್ನು ಕರ್ನಾಟಕದಲ್ಲಿ 4.62 ಲಕ್ಷ ಕೊರೊನಾ ಸೋಂಕಿತರಿದ್ದಾರೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕರ್ತವ್ಯ. ಕರ್ನಾಟಕಕ್ಕೆ ರೆಮ್​ಡಿಸಿವಿರ್ ಹಂಚಿಕೆ‌ಯನ್ನು ಹೆಚ್ಚಿಸಬೇಕು. 2 ದಿನದಲ್ಲಿ ಇಂಜೆಕ್ಷನ್ ಹಂಚಿಕೆ ಹೆಚ್ಚಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ: UAE ಇಂದ ಭಾರತಕ್ಕೆ 7 ಟ್ಯಾಂಕರ್‌ ಆಕ್ಸಿಜನ್!

ಕರ್ನಾಟಕದಲ್ಲಿ ತಪ್ಪಿದ ಮತ್ತೊಂದು ಆಕ್ಸಿಜನ್ ಮಹಾ ದುರಂತ; 300 ಸೋಂಕಿತರ ಜೀವ ಪಾರು

Published On - 10:14 pm, Wed, 5 May 21