ಯಾದಗಿರಿಯಲ್ಲಿ ಡಿಸೇಲ್ ಕಳವು; 30 ಮೀಟರ್ ದೂರದಿಂದಲೇ 5 ಸಾವಿರ ಲೀಟರ್ ಡಿಸೇಲ್ ಕಳ್ಳತನ

| Updated By: preethi shettigar

Updated on: Jul 02, 2021 | 8:34 AM

ಯಾದಗಿರಿ ‌ನಗರದ ಹೈದರಾಬಾದ್ ರಸ್ತೆಯಲ್ಲಿರುವ ಎಸ್ಸಾರ್ ಮತ್ತು ಗುರು ಪೆಟ್ರೋಲ್ ಬಂಕ್​ಗಳಲ್ಲಿ ಕಳ್ಳತನ ನಡೆದಿದ್ದು, ಅಂಡರ್ ಗ್ರೌಂಡ್​ನಲ್ಲಿರುವ ಡಿಸೇಲ್ ಟ್ಯಾಂಕ್ ಕವರ್ ಓಪನ್ ಮಾಡಿ, ಅದರ ಒಳಗೆ ಪೈಪ್ ಹಾಕಿ ಕಳ್ಳತನ ಮಾಡಲಾಗಿದೆ.

ಯಾದಗಿರಿಯಲ್ಲಿ ಡಿಸೇಲ್ ಕಳವು; 30 ಮೀಟರ್ ದೂರದಿಂದಲೇ 5 ಸಾವಿರ ಲೀಟರ್ ಡಿಸೇಲ್ ಕಳ್ಳತನ
ಎಸ್ಸಾರ್ ಪೆಟ್ರೋಲ್ ಬಂಕ್​
Follow us on

ಯಾದಗಿರಿ: ಪೆಟ್ರೋಲ್ ಮತ್ತು ಡಿಸೇಲ್ ದರ ದಿನೇ ದಿನೇ ಹೆಚ್ಚಾಗುತ್ತಿದ್ದು, ಕೆಲವು ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ. ಆದರೆ ಇದನ್ನೇ ಬಂಡವಾಳವಾಗಿಸಿಕೊಂಡ ಹಲವರು ಕಳ್ಳತನ ಮಾಡುವುದಕ್ಕೆ ಮುಂದಾಗಿದ್ದಾರೆ. ಅದರಲ್ಲೂ ಯಾದಗಿರಿ ನಗರದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಕಳ್ಳತನ ಶುರುವಾಗಿದ್ದು, ಒಂದೇ ದಿನ 5 ಸಾವಿರ ಲೀಟರ್ ಡಿಸೇಲ್ ಕಳ್ಳತನವಾಗಿದೆ.

ಯಾದಗಿರಿ ನಗರಕ್ಕೆ ಕಳ್ಳರ ಗುಂಪೋಂದು ಬಂದಿದ್ದು, ಈಗಾಗಲೇ ಎರಡು ಪೆಟ್ರೋಲ್ ಬಂಕ್​ಗಳಿಗೆ ಕನ್ನ ಹಾಕಿದ್ದಾರೆ. ಯಾದಗಿರಿ ‌ನಗರದ ಹೈದರಾಬಾದ್ ರಸ್ತೆಯಲ್ಲಿರುವ ಎಸ್ಸಾರ್ ಮತ್ತು ಗುರು ಪೆಟ್ರೋಲ್ ಬಂಕ್​ಗಳಲ್ಲಿ ಕಳ್ಳತನ ನಡೆದಿದ್ದು, ಅಂಡರ್ ಗ್ರೌಂಡ್​ನಲ್ಲಿರುವ ಡಿಸೇಲ್ ಟ್ಯಾಂಕ್ ಕವರ್ ಓಪನ್ ಮಾಡಿ, ಅದರ ಒಳಗೆ ಪೈಪ್ ಹಾಕಿ ಕಳ್ಳತನ ಮಾಡಲಾಗಿದೆ.

ರಾತ್ರಿ ವೇಳೆಯಲ್ಲಿ ಡೀಸೆಲ್ ಕಳ್ಳತನಕ್ಕೆ ಮುಂದಾದ ಕಳ್ಳರ ಗುಂಪೊಂದು ಸುಮಾರು 30 ಮೀಟರ್ ದೂರದಲ್ಲೇ ನಿಂತು ಡಿಸೇಲ್ ಕಳ್ಳತನ ಮಾಡಿದೆ. ಸಿಸಿಟಿವಿಯನ್ನು ಬಟ್ಟೆಯಿಂದ ಮುಚ್ಚಿ ಕಳ್ಳತನ ಮಾಡಿದ್ದು, ಬಂಕ್​ನಲ್ಲಿ 12 ಸಿಸಿಟಿವಿ ಇದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿ 12 ಗಂಟೆ ಹೊತ್ತಿನಲ್ಲಿ ಡಿಸೇಲ್ ಕಳ್ಳತನ ಮಾಡಿದ್ದು, ಸದ್ಯ ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಮನೆಗಳ್ಳತನದ ಆರೋಪಿ ಬಂಧನ
ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜ್ಞಾನಭಾರತಿ ಠಾಣೆ ಪೊಲೀಸರ ಕಾರ್ಯಾಚರಣೆ ವೇಳೆ ತಮಿಳುನಾಡು ಮೂಲದ ಮುರುಗನ್ (24) ಸಿಕ್ಕಿಬಿದ್ದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ 2.50 ಲಕ್ಷ ಬೆಲೆಬಾಳುವ 4 ಕೆಜಿ 350 ಗ್ರಾಂ ಬೆಳ್ಳಿ ವಸ್ತುಗಳು, 5 ಕೆಜಿ ತೂಕದ ಹಿತ್ತಾಳೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೀಗ ಹಾಕಿದ್ದ ಮನೆ ಕಳುವಾದ ಬಗ್ಗೆ ಮನೆ ಮಾಲೀಕರು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:
ಬೈಕ್ ಕದಿಯುತ್ತಿದ್ದ ವೇಳೆ ಸಿಕ್ಕಿಬಿದ್ದ ಕಳ್ಳ, ಮರಕ್ಕೆ ಕಟ್ಟಿ ಹಾಕಿ ಸಾರ್ವಜನಿಕರಿಂದ ಥಳಿತ

ಕಳ್ಳತನ ಮಾಡಿ ಖಾರದಪುಡಿ ಮನೆ ತುಂಬಾ ಚೆಲ್ಲುತ್ತಿದ್ದ ಅಸಲಿ ಕಾರಣ ಬಯಲು; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

 

Published On - 8:23 am, Fri, 2 July 21