Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌರಿಬಿದನೂರಿನಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ 7 ಜನರಿಂದ ನಿರಂತರ ಅತ್ಯಾಚಾರ; ವೇಶ್ಯಾವಾಟಿಕೆಗೆ ನೂಕಿದ ಆರೋಪ

ಗೌರಿ ಎನ್ನುವವರು ಈ ಬಾಲಕಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಆಕೆಯನ್ನು ಪುಸಲಾಯಿಸಿ ಯಾರಿಗೂ ಗೊತ್ತಾಗದಂತೆ ವೇಶ್ಯಾವಾಟಿಕೆಗೆ ನೂಕಿದ್ದಾರೆ. ಇನ್ನುಳಿದ 7 ಮಂದಿ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದು, ಆಕೆ ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದೆ.

ಗೌರಿಬಿದನೂರಿನಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ 7 ಜನರಿಂದ ನಿರಂತರ ಅತ್ಯಾಚಾರ; ವೇಶ್ಯಾವಾಟಿಕೆಗೆ ನೂಕಿದ ಆರೋಪ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Skanda

Updated on: Jul 02, 2021 | 8:40 AM

ಚಿಕ್ಕಬಳ್ಳಾಪುರ: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರವೆಸಗಿ ಆಕೆಯನ್ನು ವೇಶ್ಯಾವಾಟಿಕೆಗೆ ನೂಕಿದ 7 ಜನರ ವಿರುದ್ಧ ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 14 ವರ್ಷದ ಅಪ್ರಾಪ್ತ ಬಾಲಕಿ ಗರ್ಭಿಣಿಯಾದ ಬೆನ್ನಲ್ಲೇ ದುಷ್ಕೃತ್ಯ ಬೆಳಕಿಗೆ ಬಂದಿದ್ದು, ದೊಡ್ಡಬ್ಯಾಲ್ಯಾ ಗ್ರಾಮದ ನಿವಾಸಿ ಗೌರಿ ಎಂಬುವವವರು ಬಾಲಕಿಯನ್ನು ಪುಸಲಾಯಿಸಿ ವೇಶ್ಯಾವಾಟಿಕೆಗೆ ನೂಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಮೂರ್ತಿ, ರಾಜೇಶ, ವಿನೋದ್, ನರಸಿಂಹಮೂರ್ತಿ ಸೇರಿದಂತೆ 7 ಜನರ ವಿರುದ್ಧ ಮಂಚೇನಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗೌರಿ ಎನ್ನುವವರು ಈ ಬಾಲಕಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಆಕೆಯನ್ನು ಪುಸಲಾಯಿಸಿ ಯಾರಿಗೂ ಗೊತ್ತಾಗದಂತೆ ವೇಶ್ಯಾವಾಟಿಕೆಗೆ ನೂಕಿದ್ದಾರೆ. ಇನ್ನುಳಿದ 7 ಮಂದಿ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದು, ಆಕೆ ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದೆ. ಬಾಲಕಿ ಗರ್ಭಿಣಿಯಾದ ವಿಷಯ ತಿಳಿದ ನಂತರ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ತುಮಕೂರಿನಲ್ಲಿ ಮಂಗಳಮುಖಿಯರಿಂದ ಹಲ್ಲೆ ಆರೋಪ ತುಮಕೂರು: ತುಮಕೂರು ಜಿಲ್ಲೆ ಮಧುಗಿರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕೋಡ್ಲಾಪುರ ಗ್ರಾಮಪಂಚಾಯ್ತಿ ಸದಸ್ಯ ರಂಗನಾಥ್ ಎಂಬುವವರ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಧುಗಿರಿಯಲ್ಲಿ ಮಂಗಳಮುಖಿಯರ ಆಟಾಟೋಪ ಹೆಚ್ಚಾಗಿದ್ದು, ಸಾರ್ವಜನಿಕರು ನಿರಾಂತಕವಾಗಿ ಓಡಾಡುವುದು ಕಷ್ಟವಾಗಿದೆ ಎನ್ನುವುದಕ್ಕೆ ಈ ಘಟನೆಯೇ ನಿದರ್ಶನ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.

ಮಂಗಳಮುಖಿಯರು ಹಣ ಕೇಳಿದಾಗ ಕೊಡಲಿಲ್ಲ ಎಂದರೆ ದೈಹಿಕ ಹಲ್ಲೆಯನ್ನೇ ನಡೆಸುತ್ತಾರೆ. ಮಧುಗಿರಿ ಹೊರವಲಯದ ಹಿಂದೂಪುರ ಬೈಪಾಸ್ ಬಳಿ ಬೈಕ್​ನಲ್ಲಿ ತೆರಳುತ್ತಿದ್ದ ಗ್ರಾಮಪಂಚಾಯ್ತಿ ಸದಸ್ಯ ರಂಗನಾಥ್ ಅವರನ್ನು ಅಡ್ಡಗಟ್ಟಿದ ಇಬ್ಬರು ಮಂಗಳಮುಖಿಯರು ಹಣ ಕೇಳಿದ್ದಾರೆ. ಆದರೆ, ಅವರು ಹಣ ನೀಡಲು ನಿರಾಕರಿಸಿದಾಗ ಕೋಪಗೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: 10 ವರ್ಷದ ಬಾಲಕಿ ಮೇಲೆ 7 ಬಾಲಕರಿಂದ ಅತ್ಯಾಚಾರ, ಅವರಲ್ಲಿ 6 ಜನ 12ಕ್ಕಿಂತ ಕಡಿಮೆ ಪ್ರಾಯದವರು!

GIMS Hospital: ಸೋಂಕಿತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಚಾಲಕನ ಮತ್ತೊಂದು ಕಾಮದಾಟ ಬಯಲು.. ಬೌನ್ಸರ್‌ಗಳಿಂದ ಹಿಗ್ಗಾಮುಗ್ಗ ಏಟು ತಿಂದವ ಜೈಲಿಗೆ