ಬೆಂಗಳೂರು: ನಾಳೆಯಿಂದ SSLC ಹಾಗೂ PUC ತರಗತಿಗಳ ಆರಂಭ ಆಗಲಿವೆ ಎಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈಗಾಗಲೇ SSLC ಹಾಗೂ PUC ತರಗತಿಗಳ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಬೆಂಗಳೂರು ಸುತ್ತಲಿನ ಶಾಲೆ-ಕಾಲೇಜುಗಳನ್ನ ಪರಿಶೀಲಿಸಿದ್ದೇನೆ. ಅಧಿಕಾರಿಗಳು ಸಹ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಶಿಕ್ಷಕರ ಜೊತೆಗೂ ಮಾತನಾಡಿದ್ದೇನೆ ಎಂದು ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಆತಂಕ ಇದ್ದರೆ ತರಗತಿಗೆ ಬರುವುದು ಬೇಡ..
ಪೋಷಕರು ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ತರಗತಿಗೆ ಬರುವುದು ಕಡ್ಡಾಯವಿಲ್ಲ. ವಿದ್ಯಾರ್ಥಿಗಳಿಗೆ ಆತಂಕ ಇದ್ದರೆ ತರಗತಿಗೆ ಬರುವುದು ಬೇಡ. ಅಲ್ಲದೆ ಆತಂಕ ಇದ್ದರೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ. ಆದರೆ ಪೋಷಕರು ಒಪ್ಪಿದಲ್ಲಿ ಮಾತ್ರ ತರಗತಿಗೆ ತಮ್ಮ ಮಕ್ಕಳನ್ನು ಕಳಿಸಬಹುದು. ಒಂದು ವೇಳೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಒಪ್ಪಿದರೆ, ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಶಾಲೆ, ಕಾಲೇಜಿಗೆ ತರಬೇಕು ಎಂದರು.
ಮನೆಯಲ್ಲಿ ನೀವು ಎಷ್ಟು ಜೋಪಾನವಾಗಿ ನೋಡಿಕೊಳ್ತೀರೋ, ಅಷ್ಟೇ ಜೋಪಾನವಾಗಿ ಶಿಕ್ಷಕರು ಮಕ್ಕಳನ್ನ ನೋಡಿಕೊಳ್ತಾರೆ. ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಅಲ್ಲದೆ ದೈಹಿಕ ಅಂತರ, ಶುಚಿತ್ವ, ಸ್ಯಾನಿಟೈಸರ್ ಬಗ್ಗೆ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಜೊತೆಗೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗುತ್ತೆ. ಹೀಗಾಗಿ ಪೋಷಕರು ಆತಂಕಗೊಳ್ಳುವ ಅಗತ್ಯ ಇಲ್ಲ ಎಂದು ವಿಧಾನಸೌಧದಲ್ಲಿ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಈಗ ಬರುತ್ತಿರುವ ಲಸಿಕೆಯೇ ಈ ಎರಡಕ್ಕೂ ಸಾಕಾಗುತ್ತದೆ..
ರೂಪಾಂತರಗೊಂಡ ಕೊರೊನಾ ವೈರಸ್ ಬಗ್ಗೆ ಮಾತಾನಾಡಿದ ಸುರೇಶ್ಕುಮಾರ್, ರೂಪಾಂತರಗೊಂಡ ವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಅಲ್ಲದೆ ಈಗ ಬರುತ್ತಿರುವ ಲಸಿಕೆಯೇ ಈ ಎರಡಕ್ಕೂ ಸಾಕಾಗುತ್ತದೆ. ಕೇಂದ್ರ ಸರ್ಕಾರ ಇಂದು ರಾತ್ರಿಯೇ CBSE ಪರೀಕ್ಷೆ ದಿನಾಂಕ ಪ್ರಕಟಿಸಬಹುದು. ಜೊತೆಗೆ ಮುಂದಿನ ದಿನಗಳಲ್ಲಿ NEET, JEE ಪರೀಕ್ಷೆಗಳ ದಿನಾಂಕವೂ ಪ್ರಕಟವಾಗಲಿವೆ. ನಾಳೆ ಶೇ.50ರಷ್ಟು ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಆಗಮಿಸಲ್ಲಿದ್ದಾರೆ ಎಂದು ನಿರೀಕ್ಷೆ ಮಾಡುತ್ತಿದ್ದೇವೆ. ಅಲ್ಲದೆ ಶಾಲಾ-ಕಾಲೇಜು ಆರಂಭ ಪ್ರತಿಷ್ಠೆ ಅಲ್ಲ, ಇದು ನಮ್ಮ ಬದ್ಧತೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
BMS ಕಾಲೇಜಿನಲ್ಲಿ ಕ್ಲಾಸ್ ರೂಮ್ ಡೆಸ್ಕ್ ಮೇಲಿದ್ದ ಬರಹ ಕಂಡು ನಸು ನಕ್ಕ ಶಿಕ್ಷಣ ಸಚಿವ!
Published On - 5:09 pm, Thu, 31 December 20