ರಾಜ್ಯದಲ್ಲಿಂದು 5,938 ಜನರಲ್ಲಿ ಸೋಂಕು ಪತ್ತೆ, 68 ಸಾವು

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ರುದ್ರ ನರ್ತನ ಮುಂದುವರೆದಿದ್ದು, ರಾಜ್ಯದಲ್ಲಿಂದು ಹೊಸದಾಗಿ 5,938 ಜನರಿಗೆ ಸೋಂಕು ತಗಲಿರೋದು ದೃಢವಾಗಿದೆ. ಇದರಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 2,77,814 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಒಂದೇ ದಿನ 2,126 ಜನರಿಗೆ ಸೋಂಕು ಪತ್ತೆಯಾಗಿದೆ. ಜೊತೆಗೆ, ಸೋಂಕಿನಿಂದ ರಾಜ್ಯದಲ್ಲಿ ಇವತ್ತು 68 ಜನರು ಸಾವನ್ನಪ್ಪಿದ್ದು, ಅದರಲ್ಲಿ ಬೆಂಗಳೂರಿನಲ್ಲಿಯೇ 5 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಈಗ 4,683 ಕ್ಕೆ ಏರಿದೆ. ಈ ನಡುವೆ 1,89,564 ಜನ ಗುಣಮುಖರಾಗಿ […]

ರಾಜ್ಯದಲ್ಲಿಂದು 5,938 ಜನರಲ್ಲಿ ಸೋಂಕು ಪತ್ತೆ, 68 ಸಾವು
Edited By:

Updated on: Aug 23, 2020 | 6:59 PM

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ರುದ್ರ ನರ್ತನ ಮುಂದುವರೆದಿದ್ದು, ರಾಜ್ಯದಲ್ಲಿಂದು ಹೊಸದಾಗಿ 5,938 ಜನರಿಗೆ ಸೋಂಕು ತಗಲಿರೋದು ದೃಢವಾಗಿದೆ. ಇದರಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 2,77,814 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಒಂದೇ ದಿನ 2,126 ಜನರಿಗೆ ಸೋಂಕು ಪತ್ತೆಯಾಗಿದೆ.

ಜೊತೆಗೆ, ಸೋಂಕಿನಿಂದ ರಾಜ್ಯದಲ್ಲಿ ಇವತ್ತು 68 ಜನರು ಸಾವನ್ನಪ್ಪಿದ್ದು, ಅದರಲ್ಲಿ ಬೆಂಗಳೂರಿನಲ್ಲಿಯೇ 5 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಈಗ 4,683 ಕ್ಕೆ ಏರಿದೆ.

ಈ ನಡುವೆ 1,89,564 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 83,551 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.