ಬೆಂಗಳೂರು: ಗಾಂಜಾ ಮಾರಾಟದ ಕೇಸ್ನಲ್ಲಿ ಬಂಧಿಯಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಪರಪ್ಪನ ಅಗ್ರಹಾರ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊಸಕೋಟೆ ತಾಲೂಕಿನ ಲಾಲ್ಬಾಗ್ ದಾಸರಹಳ್ಳಿ ನಿವಾಸಿಯಾಗಿದ್ದ ಲಕ್ಷ್ಮಯ್ಯ ಆತ್ಮಹತ್ಯೆಗೆ ಶರಣಾದ ವಿಚಾರಣಾಧೀನ ಕೈದಿ.
ಗಾಂಜಾ ಮಾರಾಟ ಕೇಸ್ನಲ್ಲಿ ಹೊಸಕೋಟೆ ಪೊಲೀಸರು ಇದೇ ತಿಂಗಳ 8ನೇ ತಾರೀಖಿನಂದು ಲಕ್ಷ್ಮಯ್ಯನನ್ನು ಬಂಧಿಸಿದ ಪೊಲೀಸರು ಆಗಸ್ಟ್ 18ರಂದು ನ್ಯಾಯಾಲಕ್ಕೆ ಹಾಜರುಪಡಿಸಿದ್ದರು.
ಈ ನಡುವೆ ಪೊಲೀಸರು ಆರೋಪಿ ಲಕ್ಷ್ಮಯ್ಯನಿಗೆ ಠಾಣೆಯಲ್ಲಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದೇ ಆರೋಪಿಯ ಆತ್ಮಹತ್ಯೆಗೆ ಕಾರಣವೆಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.