KG ಹಳ್ಳಿ-DJ ಹಳ್ಳಿ ಗಲಭೆ ಕೇಸ್: ಮತ್ತೊಬ್ಬ ಕಿಂಗ್ಪಿನ್ ಮುದಾಸಿರ್ ಅಹಮದ್ ಸಿಸಿಬಿ ವಶಕ್ಕೆ
[lazy-load-videos-and-sticky-control id=”7MmQoWHNn5A”] ಬೆಂಗಳೂರು: ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಂತಹ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಪ್ರಕರಣದ ಮತ್ತೋರ್ವ ಕಿಂಗ್ಪಿನ್ ಆಗಿದ್ದ ಮುದಾಸಿರ್ ಅಹಮದ್ನನ್ನು ಬಂಧಿಸಿದ್ದಾರೆ. ಮುದಾಸಿರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ ಮುಜಮಿಲ್ ಪಾಷಾ ಜೊತೆ ಸೇರಿ ಗಲಭೆಗೆ ಸಂಚು ರೂಪಿಸಿದ್ದಲ್ಲದೆ, ಗಲಭೆಗೆ ಜನ ಸೇರಿಸಲು ಹಣದ ವ್ಯವಸ್ಥೆ ಸಹ ಮಾಡಿದ್ದ ಎನ್ನಲಾಗಿದೆ. ಮುದಾಸಿರ್ ಟೆರರಿಸ್ಟ್ ಗಳ ಜೊತೆ ಲಿಂಕ್ ಹೊಂದಿದ್ದಾರೆ ಎನ್ನಲಾಗಿದ್ದು, ಪ್ರಕರಣದ ನಂತರ ಮೊದಲು […]
[lazy-load-videos-and-sticky-control id=”7MmQoWHNn5A”]
ಬೆಂಗಳೂರು: ಕೆ.ಜಿ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಂತಹ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಪ್ರಕರಣದ ಮತ್ತೋರ್ವ ಕಿಂಗ್ಪಿನ್ ಆಗಿದ್ದ ಮುದಾಸಿರ್ ಅಹಮದ್ನನ್ನು ಬಂಧಿಸಿದ್ದಾರೆ.
ಮುದಾಸಿರ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ ಮುಜಮಿಲ್ ಪಾಷಾ ಜೊತೆ ಸೇರಿ ಗಲಭೆಗೆ ಸಂಚು ರೂಪಿಸಿದ್ದಲ್ಲದೆ, ಗಲಭೆಗೆ ಜನ ಸೇರಿಸಲು ಹಣದ ವ್ಯವಸ್ಥೆ ಸಹ ಮಾಡಿದ್ದ ಎನ್ನಲಾಗಿದೆ.
ಮುದಾಸಿರ್ ಟೆರರಿಸ್ಟ್ ಗಳ ಜೊತೆ ಲಿಂಕ್ ಹೊಂದಿದ್ದಾರೆ ಎನ್ನಲಾಗಿದ್ದು, ಪ್ರಕರಣದ ನಂತರ ಮೊದಲು ಹೈದರಾಬಾದ್ನಲ್ಲಿ ತಲೆಮರೆಸಿಕೊಂಡಿದ್ದ ಮುದಾಸಿರ್ ಅಹಮದ್ಗಾಗಿ ಹುಡುಕಾಟ ನಡೆಸಿ ಸಿಸಿಬಿ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ.
ಇದಲ್ಲದೆ, ಶಾಸಕರ ಮನೆಗೆ ಬೆಂಕಿ ಹಚ್ಚಿದ್ದ ಪ್ರಮುಖ ಆರೋಪಿಗಳಾದ ನಯಿಂ ಹಾಗೂ ಫಿರ್ದೋಸ್ನನ್ನ ಸಿಸಿಬಿ ತಂಡ ಬಂಧಿಸಿದೆ. ಮೊದಲಿಗೆ 20ಕ್ಕೂ ಹೆಚ್ಚು ಆರೋಪಿಗಳು ಮನೆಗೆ ನುಗ್ಗಿದ್ದು ಮನೆಯಲ್ಲಿದ್ದ ವಸ್ತುಗಳನ್ನ ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದರು ಎಂದು ತಿಳಿದುಬಂದಿದೆ. ಉಳಿದ ಆರೋಪಿಗಳಿಗೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.
Published On - 5:49 pm, Sun, 23 August 20