ಚಿಕ್ಕಮಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ನಿರಂತರ ಭಾರಿ ಮಳೆ ಮತ್ತು ಭೂ ಕುಸಿತದಿಂದಾಗಿ ಅಮರನಾಥ ಯಾತ್ರೆ(Amarnath Yatra) ಯನ್ನು ಸ್ಥಗಿತವಾಗಿದೆ. ಜಮ್ಮು ಮತ್ತು ಗುಹಾ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಸಾವಿರಾರು ಯಾತ್ರಾರ್ಥಿಗಳು ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ. ಇದರಲ್ಲಿ 80 ಮಂದಿ ಕನ್ನಡಿಗರು (Kannadigas) ಸಿಲುಕಿದ್ದು, ಸುರಕ್ಷಿತವಾಗಿ ಕರ್ನಾಟಕಕ್ಕೆ ಕರೆತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅಲ್ಲದೇ ರಾಜ್ಯದ ಯಾತ್ರಿಗಳ ನೆರವಿಗಾಗಿ ಕಂದಾಯ ಇಲಾಖೆಯ ಐಎಎಸ್ ಅಧಿಕಾರಿ ರಶ್ಮಿ ನಿಯೋಜನೆ ಮಾಡಲಾಗಿದೆ. ಇದೀಗ ಅಮರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮತ್ತು ಗದಗ ಯಾತ್ರಿಗಳನ್ನು ರಕ್ಷಿಸಿದ್ದಾರೆ.
ಚಿಕ್ಕಮಗಳೂರಿನಿಂದ ಕಳೆದ ವಾರ ನಾಲ್ವರು ಅಮರನಾಥ ಯಾತ್ರೆಗೆ ತೆರಳಿದ್ದರು. ಶ್ರೀನಿವಾಸ್ ,ಮಣಿ ಭರತ್, ಚಂದ್ರಶೇಖರ್, ಮನೋಜ್ ಯಾತ್ರಾರ್ಥಿ ಅಮರನಾಥ ಬಳಿಯ ಶೇಷನಾಗ್ ಪ್ರದೇಶದಲ್ಲಿ ಸಿಲುಕಿದ್ದರು. ಇದೀಗ ನಾಲ್ವರು ಸೇಫ್ ಆಗಿರುವ ಬಗ್ಗೆ ವಿಡಿಯೋ ಬಹಿರಂಗವಾಗಿದೆ.
ಇನ್ನು ಗದಗ ನಗರದ ಮೂರು ಕುಟುಂಬಗಳ ತೆರಳಿದ್ದ 23 ಯಾತ್ರಾರ್ಥಿಗಳಲ್ಲಿ ಪಂಚತರಣಿ ಕ್ಯಾಂಪ್ನಲ್ಲಿದ್ದ ಆರು ಜನರನ್ನು ಸೇನೆ ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಆರಂಭವಾದ ನಂತರ ಉಳಿದ ನೂರಾರು ಅಮರನಾಥ ಯಾತ್ರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ಸರ್ಕಾರ ಬದ್ಧ; ಸಿಎಂ ಸಿದ್ದರಾಮಯ್ಯ
ಈ ಯಾತ್ರಾರ್ಥಿಗಳನ್ನು ಟಿವಿ9 ಸಂಪರ್ಕ ಮಾಡಿದ್ದು, ನಾವೆಲ್ಲಾ ಸುರಕ್ಷಿತವಾಗಿದ್ದೇವೆ. ಪಂಚತರಣಿ ಕ್ಯಾಂಪ್ನಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿದ್ದೇವೆ. ಮಳೆ ಕಡಿಮೆಯಾದ ಬಳಿಕ ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡುವುದಾಗಿ ಹೇಳಿದ್ದಾರೆ ಎಂದ ಓರ್ವ ಯಾತ್ರಿರ್ಥಿ ಹೇಳಿದ್ದಾರೆ. ಅಮರನಾಥ ಯಾತ್ರೆಗೆ ತೆರಳಿರುವ ಬೆಂಗಳೂರಿನ 17 ಯಾತ್ರಾರ್ಥಿಗಳು ಕೂಡ ಸಿಲುಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Sun, 9 July 23