ಚಾಮರಾಜನಗರ: ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಆನೆ ಸಾವು

|

Updated on: Apr 07, 2021 | 1:27 PM

ನಿನ್ನೆ (ಮಂಗಳವಾರ) ಕಾಡಾನೆ ಮೃತ ಪಟ್ಟಿದೆ. ಪಶುವೈದ್ಯಾಧಿಕಾರಿಗಳಿಂದ ಸಹಾಯಕ ಸಂರಕ್ಷಣಾಧಿಕಾರಿಗಳ ಸಮಕ್ಷಮದಲ್ಲಿ ಮರೂಣೋತ್ತರ ಪರೀಕ್ಷೆ ನಡೆಯಿತು. ಆನೆಯು ವಯೋಸಹಜವಾಗಿ ಮೃತ ಹೊಂದಿರುವುದು ದೃಢವಾಗಿದೆ.

ಚಾಮರಾಜನಗರ: ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಆನೆ ಸಾವು
ಆನೆ (ಪ್ರಾತಿನಿಧಿಕ ಚಿತ್ರ)
Follow us on

ಚಾಮರಾಜನಗರ: ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಲಯದ ಕೌದಳ್ಳಿ ವಲಯದಲ್ಲಿ 60 ವರ್ಷದ ಗಂಡಾನೆ ಸಾವಿಗೀಡಾಗಿದೆ. ನಾಲ್ಕೈದು ದಿನಗಳ ಹಿಂದೆ ಗಂಡಾನೆಯೊಂದು ನಿತ್ರಾಣ ಸ್ಥಿತಿಯಲ್ಲಿ ಕಂಡು ಬಂದಿತ್ತು. ನಿತ್ರಾಣಗೊಂಡ ಆನೆಯ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಟ್ಟಿದ್ದರು. ನಿನ್ನೆ (ಮಂಗಳವಾರ) ಕಾಡಾನೆ ಮೃತ ಪಟ್ಟಿದೆ. ಪಶುವೈದ್ಯಾಧಿಕಾರಿಗಳಿಂದ ಸಹಾಯಕ ಸಂರಕ್ಷಣಾಧಿಕಾರಿಗಳ ಸಮಕ್ಷಮದಲ್ಲಿ ಮರೂಣೋತ್ತರ ಪರೀಕ್ಷೆ ನಡೆಯಿತು. ಆನೆಯು ವಯೋಸಹಜವಾಗಿ ಮೃತ ಹೊಂದಿರುವುದು ದೃಢವಾಗಿದೆ.

ಅಪಘಾತ: ಇಬ್ಬರು ಸಾವು
ಚಿತ್ರದುರ್ಗ: ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರಿಯೂರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ನಡೆದಿದೆ. ಕಾರಿನಲ್ಲಿದ್ದ 48 ವರ್ಷದ ಕುಮಾರ್ ಮತ್ತು 38 ವರ್ಷದ ದೇವರಾಜ್ ಮೃತ ದುರ್ದೈವಿಗಳು. ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ಪ್ರಕರಣ ಹಿರಿಯೂರು ನಗರ ಠಾಣೆಯಲ್ಲಿ ದಾಖಲಾಗಿದೆ.

ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ

ಬಸ್, ಜೀಪ್ ಮಧ್ಯೆ ಡಿಕ್ಕಿ ಮೂವರಿಗೆ ಗಾಯ
ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇತ್ರಿ ಬಳಿ ಖಾಸಗಿ ಬಸ್, ಜೀಪ್ ಮಧ್ಯೆ ಅಪಘಾತ ನಡೆದಿದೆ. ಈ ವೇಳೆ ಜೀಪ್​ನಲ್ಲಿದ್ದ ಮೂವರಿಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಮುಖ ದೃಢೀಕರಣದ ಮೂಲಕವೂ ಈಗ ಆಧಾರ್​ ಕಾರ್ಡ್​ ಡೌನ್​ಲೋಡ್ ಸಾಧ್ಯ; ಯುಐಡಿಎಐ ವೆಬ್​ಸೈಟ್​ಗೆ ಹೋಗಿ ಈ ಕ್ರಮಗಳನ್ನು ಅನುಸರಿಸಿ

Karnataka Transport Workers Strike LIVE: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ.. KSRTC, BMTC ಸಿಗಲ್ಲ, ಖಾಸಗಿ ಸೇವೆ ಲಭ್ಯ

(60 year old Elephant has died In the Mahadeswara Wildlife Division at chamarajanagar)