
ಬೆಂಗಳೂರು: ಕರುನಾಡಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ರಾಜ್ಯದಲ್ಲಿ ಹೊಸದಾಗಿ 8 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 659ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಹೊಸದಾಗಿ 3 ಸೋಂಕು ತಗುಲಿದೆ, ಬಾಗಲಕೋಟೆ 2, ದಕ್ಷಿಣ ಕನ್ನಡ, ಬಳ್ಳಾರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಇಂದು ಮತ್ತೆ ಮೂವರಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 153ಕ್ಕೇರಿಕೆಯಾಗಿದೆ.
652ನೇ ಕೊರೊನಾ ಸೋಂಕಿತೆ 30 ವರ್ಷದ ಮಹಿಳೆ
ಕೊರೊನಾ ಸೋಂಕು ಹರಡಿದ ಬಗ್ಗೆ ತನಿಖೆ ಪ್ರಗತಿಯಲ್ಲಿದೆ
653ನೇ ಕೊರೊನಾ ಸೋಂಕಿತ 34 ವರ್ಷದ ವ್ಯಕ್ತಿ
420ನೇ ಸೋಂಕಿತರ ಸಂಪರ್ಕದಿಂದ ವ್ಯಕ್ತಿಗೆ ಕೊರೊನಾ
654ನೇ ಕೊರೊನಾ ಸೋಂಕಿತ 45 ವರ್ಷದ ವ್ಯಕ್ತಿ
ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ
Published On - 12:13 pm, Tue, 5 May 20