Karnataka Dam Water Level: ತುಂಗಭದ್ರಾ ಡ್ಯಾಂನಲ್ಲಿ 10 ದಿನದಲ್ಲಿ 15 ಅಡಿ ನೀರು ಸಂಗ್ರಹ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ

|

Updated on: Aug 26, 2024 | 8:18 AM

ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕರ್ನಾಟಕದ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಜಲಾಯಶಗಳು ಕೂಡ ಭರ್ತಿಯಾಗಿವೆ. ಭದ್ರಾ, ಹಾರಂಗಿ, ಕಬಿನಿ, ಕೆಆರ್​ಎಸ್, ಹೇಮಾವತಿ, ಲಿಂಗನಮಕ್ಕಿ ಅಣೆಕಟ್ಟುಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ಹಾಗಾದರೆ ರಾಜ್ಯದ 14 ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ವಿವರ ಇಲ್ಲಿದೆ

Karnataka Dam Water Level: ತುಂಗಭದ್ರಾ ಡ್ಯಾಂನಲ್ಲಿ 10 ದಿನದಲ್ಲಿ 15 ಅಡಿ ನೀರು ಸಂಗ್ರಹ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ
ತುಂಗಭದ್ರಾ ಜಲಾಶಯ
Follow us on

ರಾಜ್ಯದಲ್ಲಿ ಮಳೆಯ ಅಬ್ಬರ ಸದ್ಯ ಕಡಿಮೆಯಾಗಿದೆ. ಆದರೆ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ, ಕರಾವಳಿ ಭಾಗದಲ್ಲಿ ಹಾಗೂ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಇನ್ನೂ ಮಳೆ ಮುಂದುವರೆದಿದೆ. ಇದರಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಲೇ ಇದೆ. ಇದರಿಂದ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಸಂತಸ ಮೂಡಿಸಿದೆ. ಅಣೆಕ್ಕಟ್ಟೆಯ 19ನೇ ಗೇಟ್​ ಇದ್ದ ಸ್ಥಳದಲ್ಲಿ ಹೊಸ ಗೇಟ್​ ಅಳವಡಿಸಿದ ಬಳಿಕ 10 ದಿನಗಳಲ್ಲಿ ನೀರಿನ ಮಟ್ಟ 15 ಟಿಎಂಸಿ ಏರಿಕೆಯಾಗಿದೆ. ತುಂಗಭದ್ರ ಜಲಾಶಯ ಸೇರಿದಂತೆ ಕರ್ನಾಟಕದ 14 ಜಲಾಶಯಗಳ (Karnataka Dam Water Level) ಇಂದಿನ ನೀರಿನ ಮಟ್ಟದ ವಿವರ ತಿಳಿಯಿರಿ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.60 123.08 123.08 123.08 28838 28838
ತುಂಗಭದ್ರಾ ಜಲಾಶಯ (Tungabhadra Dam) 497.71 105.79 86.27 81.10 23725 10292
ಮಲಪ್ರಭಾ ಜಲಾಶಯ (Malaprabha Dam) 633.80 37.73 35.25 23.01 11912 5686
ಕೆ.ಆರ್.ಎಸ್ (KRS Dam) 38.04 49.45 47.95 25.04 4695 4189
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 144.75 72.42 14970 7349
ಕಬಿನಿ ಜಲಾಶಯ (Kabini Dam) 696.13 19.52 18.42 14.41 2176 2350
ಭದ್ರಾ ಜಲಾಶಯ (Bhadra Dam) 657.73 71.54 64.67 48.30 5486 3241
ಘಟಪ್ರಭಾ ಜಲಾಶಯ (Ghataprabha Dam) 662.91 51.00 50.40 42.11 13524 13195
ಹೇಮಾವತಿ ಜಲಾಶಯ (Hemavathi Dam) 890.58 37.10 36.14 27.27 5172 5100
ವರಾಹಿ ಜಲಾಶಯ (Varahi Dam) 594.36 31.10 22.19 10.20 1314 0
ಹಾರಂಗಿ ಜಲಾಶಯ (Harangi Dam)​​ 871.38 8.50 8.06 8.21 576 700
ಸೂಫಾ (Supa Dam) 564.00 145.33 124.45 79.40 25952 3122
ನಾರಾಯಣಪುರ ಜಲಾಶಯ (Narayanpura Dam) 492.25 33.31 31.68 24.11 28480 34318
ವಾಣಿವಿಲಾಸ ಸಾಗರ (VaniVilas Sagar Dam) 652.24 30.42 20.84 24.46 693 135

ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ ಗರಿಷ್ಠ 105.78 ಟಿಎಂಸಿ ಇದ್ದು ಸದ್ಯ ಜಲಾಶಯದಲ್ಲಿ 86 ಟಿಎಂಸಿ ನೀರು ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿದರೆ ಡ್ಯಾಂ ಭರ್ತಿಯಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:33 am, Mon, 26 August 24