ಚಿತ್ರದುರ್ಗದಲ್ಲಿ ಹೃದಯಾಘಾತಕ್ಕೆ ಬಲಿಯಾದ 28-ವರ್ಷ ವಯಸ್ಸಿನ ಯುವಕನಿಗೆ ಸೂಕ್ತ ಚಿಕಿತ್ಸೆ ಸಿಗಲಿಲ್ಲವೇ?
ತುರ್ತು ಸಂದರ್ಭಗಳಿಗೆ ಅಂತ ಬಸವೇಶ್ವವರ ಆಸ್ಪತ್ರೆಯಲ್ಲಿ ಒಬ್ಬೇ ಒಬ್ಬ ವೈದ್ಯನಿಲ್ಲ, ಯುವಕನನ್ನು ತಾವು ದಾವಣಗೆರೆ ಇಲ್ಲವೇ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಿಸಬೇಕೆಂಬ ಯೋಚನೆ ಮಾಡಿದ್ದೆವು, ಅದರೆ ಅನಿವಾರ್ಯತೆ ಮತ್ತು ತುರ್ತು ಚಿಕಿತ್ಸೆ ಸಿಕ್ಕೀತು ಎಂಬ ಭರವಸೆಯೊಂದಿಗೆ ಇಲ್ಲಿಗೆ ಬಂದೆವು, ಆದರೆ ಇಲ್ಲಿ ತುರ್ತು ಚಿಕಿತ್ಸೆ ನೀಡಲು ವೈದ್ಯರೇ ಇರಲಿಲ್ಲ ಎಂದ ಯುವಕನ ಆಪ್ತ ಹೇಳಿದರು.
ಚಿತ್ರದುರ್ಗ, ಜುಲೈ 22: ರಾಜ್ಯದಲ್ಲಿ ಯುವಕರು ಹೃದಯಾಘಾತಕ್ಕೊಳಗಾಗಿ (heart attack) ಸಾಯುವುದು ಮುಂದುವರಿದಿದೆ. ಚಿತ್ರದುರ್ಗದಲ್ಲಿ ಇಂದು ಬೆಳಗ್ಗೆ 28-ವರ್ಷದ ಯುವಕನೊಬ್ಬ ಹಾರ್ಟ್ ಅಟ್ಯಾಕ್ ನಿಂದ ಅಸುನೀಗಿದ್ದಾನೆ. ಮೃತ ಯುವಕನನ್ನು ಹತ್ತಿರದಿಂದ ಬಲ್ಲ ವ್ಯಕ್ತಿಯೊಬ್ಬರು ವಿವರ ನೀಡಿದ್ದಾರೆ. ಅಸಲಿಗೆ ಯುವಕ ಇವರಲ್ಲಿ ಕೆಲಸ ಮಾಡುತ್ತಿದ್ದನಂತೆ. ಮನೆಯಲ್ಲಿದ್ದಾಗ ಅವನು ಕುಸಿದು ಬಿದ್ದಿದ್ದಾನೆ, ಕೂಡಲೇ ಅವನ ತಾಯಿ ಈ ವ್ಯಕ್ತಿಗೆ ಫೋನ್ ಮಾಡಿದ್ದಾರೆ. ಇವರು ಧಾವಿಸಿ ಬಂದಾಗ, ಯುವಕ ಚೆನ್ನಾಗೇ ಇದ್ದನಂತೆ, ಅವನೇ ಮೆಟ್ಟಲಿಳಿದು ಬಂದಿದ್ದಾನೆ, ಆಟೋ ರಿಕ್ಷಾದಲ್ಲೂ ಬೇರೆಯವರ ನೆರವಿಲ್ಲದೆ ಕುಳಿತಿದ್ದಾನೆ. ನಗರದಲ್ಲಿರುವ ಬಸವೇಶ್ವರ ಆಸ್ಪತ್ರೆಗ ಒಯ್ದಾಗಲೂ ಅವನೇ ಸ್ಟ್ರೆಚರ್ ಹತ್ತಿ ಮಲಗಿದನಂತೆ. ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರು ರಿಸಸ್ಸಿಟೇಶನ್ ಪ್ರಯತ್ನಿಸಿದ್ದಾರೆ, ಅದರೆ ಯುವಕ ಅಷ್ಟರಲ್ಲಿ ಪ್ರಾಣ ಬಿಟ್ಟಿದ್ದಾನೆ.
ಇದನ್ನೂ ಓದಿ: ಎಂಥಾ ಕಾಕತಾಳೀಯ; ಶೆಫಾಲಿ ಮಾತ್ರವಲ್ಲ, ಇವರ ಜೊತೆ ಕೆಲಸ ಮಾಡಿದ್ದ ಇನ್ನಿಬ್ಬರಿಗೂ ಹಾರ್ಟ್ ಅಟ್ಯಾಕ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
