ಬೆಂಗಳೂರಿನಲ್ಲಿ ಕಳವು ಮಾಡುತ್ತಿದ್ದ ಬಿಹಾರಿ ಗ್ಯಾಂಗ್ ಬಂಧನ

ಬೆಂಗಳೂರಿನ ಪಿಜಿಯಲ್ಲಿ ವಾಸವಿದ್ದ ಆರೋಪಿಯೊಬ್ಬ ಬಿಹಾರದಿಂದ ಸ್ನೇಹಿತರನ್ನ ಕರೆಸಿ ಕೃತ್ಯ ನಡೆಸುತ್ತಿದ್ದ. ಬಿಹಾರದಿಂದ ಬಂದಿದ್ದ ಆರೋಪಿಗಳು ಕೋರಮಂಗಲದ ಮನೆಯೊಂದರಲ್ಲಿ ಕಳವು ಮಾಡಿದ್ದರು.

ಬೆಂಗಳೂರಿನಲ್ಲಿ ಕಳವು ಮಾಡುತ್ತಿದ್ದ ಬಿಹಾರಿ ಗ್ಯಾಂಗ್ ಬಂಧನ
ಬಂಧಿತ ಆರೋಪಿಗಳು
Edited By:

Updated on: Jul 19, 2021 | 10:22 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳವು ಮಾಡುತ್ತಿದ್ದ ಬಿಹಾರಿ ಗ್ಯಾಂಗ್​ನ ಪೊಲೀಸರು ಬಂಧಿಸಿದ್ದಾರೆ. ಕೋರಮಂಗಲ ಠಾಣೆ ಪೊಲೀಸರು ಪಂಕಜ್ ಕುಮಾರ್, ಚೋಟು ಕುಮಾರ್, ರಂಜಿತ್ ಕುಮಾರ್, ಗೌತಮ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 20 ಲಕ್ಷ ರೂ. ಮೌಲ್ಯದ ಬೆಳ್ಳಿ ವಸ್ತುಗಳು ಮತ್ತು ವಾಚ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮನೆ ಮಾಲೀಕರು ಹೊರ ರಾಜ್ಯಕ್ಕೆ ಹೋದಾಗ ಕೃತ್ಯ ಎಸಗಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.

ಬೆಂಗಳೂರಿನ ಪಿಜಿಯಲ್ಲಿ ವಾಸವಿದ್ದ ಆರೋಪಿಯೊಬ್ಬ ಬಿಹಾರದಿಂದ ಸ್ನೇಹಿತರನ್ನ ಕರೆಸಿ ಕೃತ್ಯ ನಡೆಸುತ್ತಿದ್ದ. ಬಿಹಾರದಿಂದ ಬಂದಿದ್ದ ಆರೋಪಿಗಳು ಕೋರಮಂಗಲದ ಮನೆಯೊಂದರಲ್ಲಿ ಕಳವು ಮಾಡಿದ್ದರು. ಈ ಘಟನೆ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಗದಗದಲ್ಲಿ ವ್ಯಕ್ತಿಯ ಭೀಕರ ಕೊಲೆ
ಗದಗ: ನಗರದ ತೀಸ್ ಬಿಲ್ಡಿಂಗ್ ಬಳಿ ವ್ಯಕ್ತಿಯ ಕೊಲೆಯಾಗಿದ್ದು, ಬೆಟಗೇರಿ ನಿವಾಸಿ ಗುಂಡಪ್ಪ ಚಲವಾದ(28) ಎಂಬುವವರು ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಹಣಕಾಸಿನ ವಿಷಯಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗುಂಡಪ್ಪ ಬ್ಯಾಂಕ್ ರಸ್ತೆಯಲ್ಲಿ ಹಣ್ಣು ಮಾರಾಟ ಮಾರಿ ಜೀವನ ಮಾಡುತ್ತಿದ್ದ. ದುಷ್ಕರ್ಮಿಗಳು ಮಚ್ಚು, ಚಾಕುವಿನಿಂದ ಕತ್ತು, ತಲೆ, ಎದೆ ಭಾಗದ ಇರಿದು ಹತ್ಯೆ ಎಸಗಿದ್ದಾರೆ. ಸ್ಥಳಕ್ಕೆ ಡಿವೈಎಸ್​ಪಿ ಶಿವಾನಂದ ಪವಾಡಶೆಟ್ಟರ ಹಾಗೂ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ

ಕೆಆರ್​ಎಸ್ ಡ್ಯಾಂ ಬಳಿ ಕಲ್ಲುಗಳ ಕುಸಿತ: ಸ್ಥಳಕ್ಕೆ ಭೇಟಿ ನೀಡಿ, ಶಾಸಕ‌ ರವೀಂದ್ರ ಶ್ರೀಕಂಠಯ್ಯ ಹೇಳಿದ್ದೇನು?

ಬೆಂಗಳೂರಿನಿಂದ ಹೊರಟ ಐರಾವತ ಬಸ್ ಅರಣ್ಯಕ್ಕೆ ನುಗ್ಗಿ, ಮರಕ್ಕೆ ಡಿಕ್ಕಿ: ಚಾಲಕ ಸ್ಥಳದಲ್ಲೇ ದುರ್ಮರಣ

(A Bihari gang has been arrested by the police in Bangalore)