ವರಮಹಾಲಕ್ಷ್ಮಿ ಹಬ್ಬಕ್ಕೆ ಅಪ್ಪು Fans ಗಾಗಿ ಯುವರತ್ನ ತಂಡದಿಂದ ಭರ್ಜರಿ Gift!

| Updated By:

Updated on: Jul 30, 2020 | 4:04 PM

ಬೆಂಗಳೂರು: ಎಲ್ಲವೂ ಸರಿಯಾಗಿ ಆಗಿದ್ದರೆ, ಪುನೀತ್ ಹಾಗೂ ನಿರ್ದೇಶಕ ಸಂತೋಷ್ ಆನಂದ್​ರಾಮ್ ಕಾಂಬಿನೇಷನ್​ನ ಸಿನಿಮಾ ಯುವರತ್ನ ಇಷ್ಟೊತ್ತಿಗೆ ಆಗ್ಲೇ ರಿಲೀಸ್ ಆಗ್ಬೇಕಿತ್ತು. ಆದ್ರೆ, ಕೊರೊನಾ ವೈರಸ್ ಹಾವಳಿ ಇಡ್ತಿರೋದ್ರಿಂದ ಯುವರತ್ನ ಬಿಡುಗಡೆಯನ್ನ ಅನಿವಾರ್ಯವಾಗಿ ಮುಂದೂಡಬೇಕಾಗಿದೆ. ಯುವರತ್ನ ಸಿನಿಮಾವನ್ನ ಥಿಯೇಟರ್​ನಲ್ಲಿ ನೋಡೋಕೆ ಅಪ್ಪು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ, ಕೊರೊನಾ ಸದ್ಯ ದೇಶ ಬಿಟ್ಟು ತೊಲಗೋ ಹಾಗೆ ಕಾಣಿಸುತ್ತಿಲ್ಲ. ಹೀಗಾಗಿ, ಯುವರತ್ನ ಯಾವಾಗ ರಿಲೀಸ್ ಆಗುತ್ತೋ ಅನ್ನೋದು ಗೊತ್ತಿಲ್ಲ. ಆದರೆ, ಇದರಿಂದ ಬೇಸರಗೊಂಡಿರುವ ಅಭಿಮಾನಿಗಳನ್ನ ಸಮಾಧಾನ ಪಡಿಸೋಕೆ ಸಿನಿಮಾದ […]

ವರಮಹಾಲಕ್ಷ್ಮಿ ಹಬ್ಬಕ್ಕೆ ಅಪ್ಪು Fans ಗಾಗಿ ಯುವರತ್ನ ತಂಡದಿಂದ ಭರ್ಜರಿ Gift!
Follow us on

ಬೆಂಗಳೂರು: ಎಲ್ಲವೂ ಸರಿಯಾಗಿ ಆಗಿದ್ದರೆ, ಪುನೀತ್ ಹಾಗೂ ನಿರ್ದೇಶಕ ಸಂತೋಷ್ ಆನಂದ್​ರಾಮ್ ಕಾಂಬಿನೇಷನ್​ನ ಸಿನಿಮಾ ಯುವರತ್ನ ಇಷ್ಟೊತ್ತಿಗೆ ಆಗ್ಲೇ ರಿಲೀಸ್ ಆಗ್ಬೇಕಿತ್ತು. ಆದ್ರೆ, ಕೊರೊನಾ ವೈರಸ್ ಹಾವಳಿ ಇಡ್ತಿರೋದ್ರಿಂದ ಯುವರತ್ನ ಬಿಡುಗಡೆಯನ್ನ ಅನಿವಾರ್ಯವಾಗಿ ಮುಂದೂಡಬೇಕಾಗಿದೆ.

ಯುವರತ್ನ ಸಿನಿಮಾವನ್ನ ಥಿಯೇಟರ್​ನಲ್ಲಿ ನೋಡೋಕೆ ಅಪ್ಪು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ, ಕೊರೊನಾ ಸದ್ಯ ದೇಶ ಬಿಟ್ಟು ತೊಲಗೋ ಹಾಗೆ ಕಾಣಿಸುತ್ತಿಲ್ಲ. ಹೀಗಾಗಿ, ಯುವರತ್ನ ಯಾವಾಗ ರಿಲೀಸ್ ಆಗುತ್ತೋ ಅನ್ನೋದು ಗೊತ್ತಿಲ್ಲ. ಆದರೆ, ಇದರಿಂದ ಬೇಸರಗೊಂಡಿರುವ ಅಭಿಮಾನಿಗಳನ್ನ ಸಮಾಧಾನ ಪಡಿಸೋಕೆ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ.

ಹೌದು, ವರಮಹಾಲಕ್ಷ್ಮಿ ಹಬ್ಬಕ್ಕೆ ಪವರ್​ಸ್ಟಾರ್ ಅಭಿನಯದ ಪವರ್​ಫುಲ್ ಪೋಸ್ಟರ್ ರಿಲೀಸ್ ಆಗುತ್ತೆ. ಈ ಮಾತನ್ನ ಸ್ವತ: ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್ ಆನಂದ್​ರಾಮ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಂದ ಹಾಗೆ, ಯುವರತ್ನ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ. ಇನ್ನೇನು ಹಾಡುಗಳು ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಎರಡೂ ಹಾಡುಗಳನ್ನ ಶೂಟ್ ಮಾಡಿ ಏಪ್ರಿಲ್ ತಿಂಗಳಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆದಿತ್ತು. ಅಷ್ಟರಲ್ಲೇ ಕೊರೊನಾ ಅಟ್ಟಹಾಸಕ್ಕೆ ಹೆದರಿ ಶೂಟಿಂಗ್ ನಿಲ್ಲಿಸಲಾಗಿತ್ತು. ಮತ್ತೆ ಯಾವಾಗ ಚಿತ್ರೀಕರಣ ನಡೆದು ಸಿನಿಮಾ ಬಿಡುಗಡೆಯಾಗುತ್ತೆ ಅನ್ನೋದನ್ನ ಚಿತ್ರತಂಡ ಇನ್ನೂ ಬಹಿರಂಗ ಪಡಿಸಿಲ್ಲ.

Published On - 7:32 pm, Tue, 28 July 20