ಕೌಟುಂಬಿಕ ಕಲಹ; ಕುಡಿದ ಅಮಲಿನಲ್ಲಿ ಪತ್ನಿಯ ಮೂಗು ಕಚ್ಚಿದ ಪತಿ

ನಿನ್ನೆ (ಜುಲೈ 10) ರಾತ್ರಿ ಗೀತಾಳೊಂದಿಗೆ ಮೊದಲಿಗೆ ಉಮೇಶ ಸಣ್ಣದಾಗಿ ಜಗಳ ತೆಗೆದಿದ್ದಾನೆ. ನಿತ್ಯ ಕುಡಿದು ಬಂದು ಇದೇ ರೀತಿ ಬೈಯುತ್ತಿದ್ದ ಕಾರಣಕ್ಕೆ ಗೀತಾ ಈತನ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅದರೆ ಏಕಾಏಕಿಯಾಗಿ ಗೀತಾಳ ಮೂಗು ಕಚ್ಚಿದ ಉಮೇಶ, ಗೀತಾಳ ತಾಯಿಯ ಕತ್ತುನ್ನು ಹಿಸುಕಿದ್ದಾನೆ.

ಕೌಟುಂಬಿಕ ಕಲಹ; ಕುಡಿದ ಅಮಲಿನಲ್ಲಿ ಪತ್ನಿಯ ಮೂಗು ಕಚ್ಚಿದ ಪತಿ
ಗಾಯಗೊಂಡಿರುವ ಪತ್ನಿ ಗೀತಾ
Edited By:

Updated on: Jul 11, 2021 | 3:03 PM

ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ಪತಿ ತನ್ನ ಪತ್ನಿಯ ಮೂಗು ಕಚ್ಚಿದ್ದಾನೆ. ಈ ಘಟನೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಸಂಭವಿಸಿದೆ. ಉಮೇಶ ಗಂಡಗುದರಿ ಎಂಬಾತ ಪತ್ನಿಯ ಮೂಗು ಕಚ್ಚಿ ವಿಕೃತಿ ಮೆರೆದಿದ್ದಾನೆ. ಆತ ತನ್ನ ಹೆಂಡತಿ ಮನೆಗೆ ಬಂದು ಉಳಿದಿದ್ದ. ಕಂಠಪೂರ್ತಿ ಕುಡಿದು ದಿನಾಲು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಗಂಡ ಸರಿ ಹೋಗುತ್ತಾನೆ ಅಂತ ಪತ್ನಿ ಗೀತಾ ಸುಧಾರಿಸಿಕೊಂಡಿದ್ದಳು. ಆದರೆ ಪತ್ನಿಯ ಮೇಲಿದ್ದ ಅನುಮಾನದಿಂದ ಉಮೇಶ ಈ ರೀತಿ ಹಲ್ಲೆ ಮಾಡಿದ್ದಾನೆ.

ನಿನ್ನೆ (ಜುಲೈ 10) ರಾತ್ರಿ ಗೀತಾಳೊಂದಿಗೆ ಮೊದಲಿಗೆ ಉಮೇಶ ಸಣ್ಣದಾಗಿ ಜಗಳ ತೆಗೆದಿದ್ದಾನೆ. ನಿತ್ಯ ಕುಡಿದು ಬಂದು ಇದೇ ರೀತಿ ಬೈಯುತ್ತಿದ್ದ ಕಾರಣಕ್ಕೆ ಗೀತಾ ಈತನ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅದರೆ ಏಕಾಏಕಿಯಾಗಿ ಗೀತಾಳ ಮೂಗು ಕಚ್ಚಿದ ಉಮೇಶ, ಗೀತಾಳ ತಾಯಿಯ ಕತ್ತುನ್ನು ಹಿಸುಕಿದ್ದಾನೆ. ಈ ವೇಳೆ ತಾಯಿ, ಮಗಳು ಚೀರಾಡುವುದನ್ನು ಕೇಳಿದ ಜನ ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲೇ ಉಮೇಶ ಪರಾರಿಯಾಗಿದ್ದಾನೆ.

ಉಮೇಶ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದವನು. ಉಮೇಶ ಮತ್ತು ಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಕುಡಿತದ ದಾಸನಾಗಿದ್ದ ಉಮೇಶ, ಐದು ವರ್ಷದ ಹಿಂದೆ ಪತ್ನಿಯೊಂದಿಗೆ ಜಗಳ ಮಾಡಿ ಆಕೆಯನ್ನು ತವರು ಮನೆಗೆ ಕಳುಹಿಸಿದ್ದನಂತೆ. ಜೊತೆಗೆ ಪತ್ನಿಯ ನಡತೆಯ ಮೇಲೆ ಅನುಮಾನ ಪಡುತ್ತಿದ್ದನಂತೆ.

ಆರು ತಿಂಗಳ ಹಿಂದೆ ಮರಳಿ ಬಂದ ಉಮೇಶ ಪತ್ನಿ ಮನೆಯಲ್ಲಿಯೇ ಇರೋಕೆ ಶುರು ಮಾಡಿದ್ದ. ಕುಡಿದು ಬಂದು ಆಗಾಗ ಜಗಳ ತೆಗೆಯುತ್ತಲೇ ಇದ್ದ. ಸದ್ಯ ಗಂಭೀರ ಗಾಯಗೊಂಡಿರುವ ಗೀತಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲ್ಲೆ ನಡೆಸಿದ ಉಮೇಶನ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ

ಜಮ್ಮು-ಕಾಶ್ಮೀರದ ಹಲವು ಪ್ರದೇಶಗಳಲ್ಲಿ ರಾಷ್ಟ್ರೀಯ ತನಿಖಾದಳದಿಂದ ರೇಡ್​: ಪೊಲೀಸರಿಂದ ಮೂವರು ಉಗ್ರರ ಹತ್ಯೆ

ಕ್ಷುಲ್ಲಕ ವಿಚಾರಕ್ಕೆ 7 ಸ್ಟಾರ್ ಹೋಟೆಲ್​ಗೆ ನುಗ್ಗಿ ದಾಂಧಲೆ; ಐವರು ಬಂಧನ

(A husband bit his wife nose at Hubli)