ಪುರುಷರು ಹೆದರಿ ಹಿಂದೆ ಸರಿಯುವಾಗ ಮುಂದೆ ಬಂದು ಬೃಹತ್ ಹೆಬ್ಬಾವು ಹಿಡಿದ ಧೀರ ಮಹಿಳೆ

| Updated By: ರಮೇಶ್ ಬಿ. ಜವಳಗೇರಾ

Updated on: Nov 06, 2024 | 5:31 PM

ಪುರುಷರು ಹೆದರಿಕೊಳ್ಳುತ್ತಿದ್ದರೆ ಮಹಿಳೆಯೊಬ್ಬರು ಮುಂದೆ ಬಂದು ಬೃಹತ್ ಗಾತ್ರದ ಹೆಬ್ಬಾವು ಹಿಡಿದಿದ್ದಾರೆ. ಹೆಬ್ಬಾವು ನೋಡಲು ಸಾಕಷ್ಟು ಜನರು ಸೇರಿದ್ದರು. ಆದ್ರೆ, ಹಿಡಿಯಲು ಯಾರೊಬ್ಬರು ಮುಂದೆ ಬರಲಿಲ್ಲ. ಕೊನೆಗೆ ಓರ್ವ ಮಹಿಳೆ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಗೋಣಿ ಚೀಲಕ್ಕೆ ತುಂಬಿಸಿ ಕಾಡಿಗೆ ಬಿಟ್ಟಿದ್ದಾರೆ.

ಮಂಗಳೂರು, (ನವೆಂಬರ್ 06): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ಸುಳ್ಯದ ಗಡಿಪ್ರದೇಶದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಇದನ್ನು ಕಂಡು ಗಂಡಸರು ಹೆದರಿಕೊಂಡಿದ್ದಾರೆ. ಆದ್ರೆ, ಓರ್ವ ಮಹಿಳೆ, ಬೃಹತ್ ಗಾತ್ರದ ಹೆಬ್ಬಾವು ಹಿಡಿದು ಗೋಣಿ ಚೀಲದಲ್ಲಿ ಹಾಕಿಕೊಂಡುಹೋಗಿ ಕಾಡಿಗೆ ಬಿಟ್ಟಿದ್ದಾಳೆ. ಈ ಹೆಬ್ಬಾವಿಗೆ `ಇಂಡಿಯನ್ ರಾಕ್ ಪೈತಾನ್’ ಎಂದು ಎಂದು ಕರೆಯಲಾಗುತ್ತೆ. ಇನ್ನು ಕರಾವಳಿ ಭಾಗದಲ್ಲಿ ಈ ಹೆಬ್ಬಾವಿಗೆ `ಕೋಳಿ ಮರ್ಲೆ’ ಎಂಬ ತುಳು ಪದವನ್ನ ಬಳಸಲಾಗುತ್ತೆ. ಶೋಭ ಅವರು ಹೆಬ್ಬಾವನ್ನ ಹಿಡಿಯುವ ಸಂದರ್ಭ ಯಾವುದೇ ಭಯವಿಲ್ಲದೆ ನಾಜೂಕಾಗಿ ಹಿಡಿದು ಗೋಣಿ ಚೀಲಕ್ಕೆ ತುಂಬಿಸುವ ವೀಡಿಯೋ ವೈರಲ್ ಆಗಿದೆ. ‘ಹೆಬ್ಬಾವು ಹಿಡಿದ ವೀರ ಶೋಭಕ್ಕ ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

Published On - 5:31 pm, Wed, 6 November 24

Follow us on