ಗದಗ: ಆ ವಿದ್ಯಾರ್ಥಿ ಬಹಳ ಚೂರುಕ್ಕಾಗಿದ್ದ, ವೈದ್ಯನಾಗಬೇಕು ಎಂದು ಕನಸು ಕಂಡಿದ್ದ. ಹಾಗಾಗಿಯೇ ಆತನನ್ನು ದೂರದ ಉಕ್ರೇನ್ ದೇಶಕ್ಕೆ ವ್ಯಾಸಂಗ ಮಾಡಲು ಕಳುಹಿಸಿಕೊಡಲಾಗಿದೆ. ಆದ್ರೆ ಈವಾಗ ಆತನ ಕುಟುಂಬಸ್ಥರಲ್ಲಿ ಭಯ ಶುರುವಾಗಿದೆ. ಹೌದು ಉಕ್ರೇನ್ ಹಾಗೂ ರಷ್ಯಾ (Russia Ukraine War) ದೇಶಗಳ ನಡುವೆ ಯುದ್ಧ ಆರಂಭವಾಗಿದ್ದು, ಉಕ್ರೇನ್ ದೇಶಕ್ಕೆ ವ್ಯಾಸಂಗ ಮಾಡಲು ಹೋದ ವಿದ್ಯಾರ್ಥಿ ಕುಟುಂಬ ಮಗ ಸುರಕ್ಷಿತವಾಗಿ ಮನೆಗೆ ಬರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಉಕ್ರೇನ್ ಹಾಗೂ ರಷ್ಯಾ ದೇಶಗಳ ನಡುವೆ ಯುದ್ಧ ಆರಂಭವಾಗಿದೆ. ದೇಶದಲ್ಲಿ ನಾಗರಿಕರು ಹಾಗೂ ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಭಾರತ ದೇಶಕ್ಕೆ ಬರಬೇಕು ಎಂದ್ರೆ ನಾಗರಿಕ ವಿಮಾನಯಾನ ಬಂದ್ ಮಾಡಲಾಗಿದೆ. ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಎಂ.ಬಿ.ವಿ.ಎಸ್ ವಿದ್ಯಾರ್ಥಿ ಉಕ್ರೇನ್ ದೇಶದಲ್ಲಿ ಸಿಲುಕಿ ಹಾಕಿಕೊಂಡಿದ್ದಾನೆ.
ಹೌದು ಮುಂಡರಗಿ ಪಟ್ಟಣದ ಮಹಾಗಣಪತಿ ಬಿಳಿಮಗ್ಗದ ಎನ್ನುವ ವಿದ್ಯಾರ್ಥಿ ಉಕ್ರೇನ್ ದೇಶದ ಕೀವ್ ರಾಜಧಾನಿಯ ಚೆರ್ನಿವಿಸ್ ನಗರದಲ್ಲಿ ಸಿಲುಕಿಕೊಂಡಿದ್ದಾರೆ. ಮಾರ್ಚ 01 ನೇ ತಾರೀಖು ತಾಯಿ ನಾಡಿಗೆ ವಾಪಾಸ್ಸ್ ಬರಬೇಕಾಗಿತ್ತು. ಆತನ ಆಗಮನಕ್ಕಾಗಿ ಟಿಕೇಟ್ ಬುಕ್ ಕೂಡಾ ಮಾಡಲಾಗಿತ್ತು. ಆದ್ರೆ ದಿಢೀರ್ ಯುದ್ದ ಆರಂಭವಾಗಿದ್ದು, ಮಹಾಗಣಪತಿ ಉಕ್ರೇನ್ ದೇಶದಲ್ಲಿ ಸಿಲುಕಿ ಹಾಕಿಕೊಂಡಿದ್ದಾನೆ. ಹೀಗಾಗಿ ಮಹಾಗಣಪತಿ ತಂದೆ ಕಾಶಿನಾಥ ಬಿಳಿಮಗ್ಗದ ಅವರಲ್ಲಿ ಆತಂಕ ಹೆಚ್ಚಾಗಿದೆ. ಮಗನನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವಂತೆ ಸರ್ಕಾರಕ್ಕೆ ವಿದ್ಯಾರ್ಥಿ ತಂದೆ ಕಾಶಿನಾಥ ಬಿಳಿಮಗ್ಗದ ಮನವಿ ಮಾಡಿದ್ದಾರೆ.
ಕಾಶಿನಾಥ ಹಾಗೂ ಭಾಗ್ಯಲಕ್ಷ್ಮಿ ಬಿಳಿಮಗ್ಗದ ಅವರಿಗೆ ಇಬ್ಬರು ಗಂಡು ಮಕ್ಕಳು ಮಹಾಗಣಪತಿ ದೊಡ್ಡ ಮಗ, ಮುಂಡರಗಿ ಪಟ್ಟಣದ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಸೈನ್ಸ್ ಮಾಡಿ ಉತ್ತಮ ಅಂಕಗಳನ್ನು ಪಡೆದುಕೊಂಡು ಪಾಸ್ ಆಗಿದ್ದಾನೆ. ಉಕ್ರೇನ್ ದೇಶದ ಚೆರ್ನಿವೀಸ್ ನಗರದ ಬೋಕೋಮಿನಿನ್ ಸ್ಟೇಟ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಎಂಬಿವಿಎಸ್ ಓದುತ್ತಿದ್ದು, ಕಳೆದ ಒಂದುವರೆ ವರ್ಷಗಳಿಂದ ವ್ಯಾಸಂಗ ಮಾಡುತ್ತಿದ್ದಾನೆ. ಮಹಾಗಣಪತಿ ಅವರ ತಾಯಿ ಭಾಗ್ಯಲಕ್ಷ್ಮೀ ಕೂಡಾ 2021 ಅಗಸ್ಟ್ ತಿಂಗಳಲ್ಲಿ ನಿಧನ ಹೊಂದಿದ್ದಾರೆ. ಮಹಾಗಣಪತಿ ತಂದೆ ಕಾಶಿನಾಥ, ಅಜ್ಜಿ, ಇನ್ನೊರ್ವ ಸಹೋದರ ಹೈಸ್ಕೂಲ್ ನಲ್ಲಿ ಅಭ್ಯಾಸ ಮಾಡುತ್ತಿದ್ದಾನೆ. ಮಹಾಗಣಪತಿ ಒಳ್ಳೆಯ ವಿದ್ಯಾರ್ಥಿಯಾಗಿದ್ದ. ಇನ್ನೂ ಮಹಾಗಣಪತಿ ಕುಟುಂಬಸ್ಥರು ಮಹಾಗಣಪತಿ ಜೊತೆಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದು, ನಾವು ಸುರಕ್ಷಿತವಾಗಿ ಇದ್ದೇವೆ, ನೀವು ಭಯ ಪಡಬೇಡಿ ಎಂದು ಹೇಳಿದ್ದಾನೆ. ಆದ್ರೆ ಪೋಷಕರು ಮಾತ್ರ ಆತಂಕದಲ್ಲಿ ಇದ್ದಾರೆ. ಹೀಗಾಗಿ ಆದಷ್ಟು ಬೇಗ ಉಕ್ರೇನ್ ದೇಶದಿಂದ ಕರೆದುಕೊಂಡು ಬರುವಂತೆ ಸಂಬಧಿ ಬಸವರಾಜ್ ಮನವಿ ಮಾಡಿದ್ದಾರೆ. ಉಕ್ರೇನ್ ದೇಶದಲ್ಲಿ ಸಿಲಿಕಿಕೊಂಡ ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವಂತೆ ಒತ್ತಾಯ ಮಾಡಲಾಗಿದೆ. ಕೇಂದ್ರ ಸರ್ಕಾರ ಕೂಡಾ ಭಾರತೀಯ ನಾಗರಿಕರು ಹಾಗೂ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರಬೇಕಾಗಿದೆ.
ಇದನ್ನೂ ಓದಿ:
ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ