ಪುನೀತ್ ರಾಜ್​ಕುಮಾರ್ ಮಾಲೆ ಧರಿಸಿ ಇರುಮುಡಿ ಕಟ್ಟು ತಲೆಮೇಲೆ ಹೊತ್ತು ಸಮಾಧಿಗೆ ನಡೆದು ಬಂದ ಅಭಿಮಾನಿ

ಅರುಣ್​ ಕುಮಾರ್​ ಬೆಳ್ಳಿ

Updated on: Mar 17, 2025 | 11:20 AM

ಪುನೀತ್ ರಾಜ್​ಕುಮಾರ್ ಅವರಿಗೆ ತರಹೇವಾರಿ ಅಭಿಮಾನಿಗಳು, ಒಬ್ಬೊಬ್ಬರದು ಒಂದೊಂದು ಬಗೆಯ ಅಭಿಮಾನ. ಆದರೆ ಅಯ್ಯಪ್ಪನ ಭಕ್ತರಂತೆ ಮಾಲೆಧರಿಸಿ ನಟನ ಫೋಟೋವನ್ನು ಕುತ್ತಿಗೆಗೆ ನೇತಾಡಿಸಿಕೊಂಡು ನಡೆಯುತ್ತಾ ಅವರ ಸಮಾಧಿಗೆ ಹೋಗಿ ಪೂಜೆ ಸಲ್ಲಿಸುವ ಪರಿಕಲ್ಪನೆ ಈ ಅಭಿಮಾನಿಗೆ ಬಿಟ್ಟು ಬೇರೆ ಯಾರಿಗೂ ಬಂದಿರಲಿಕ್ಕಿಲ್ಲ.

ಬೆಂಗಳೂರು, ಮಾರ್ಚ್ 17: ಪುನೀತ್ ರಾಜ್​ಕುಮಾರ್ ಅವರ ಜನಪ್ರಿಯತೆ ಎಲ್ಲರಿಗೂ ಗೊತ್ತಿದೆ. ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದವರ ಸಂಖ್ಯೆ 25 ಲಕ್ಷಕ್ಕೂ ಹೆಚ್ಚು ಅಂತ ಹೇಳಲಾಗಿದೆ. ಅವರಿಗೆ ಎಲ್ಲ ವಯೋಮಾನದ ಅಬಿಮಾನಿಗಳಿದ್ದರು. ಆದರೆ ಈ ಅಭಿಮಾನಿ ವಿಶಿಷ್ಟ ಮತ್ತು ವಿಭಿನ್ನ. ದೇಶದಾದ್ಯಂತ ಭಕ್ತರು ಅಯ್ಯಪ್ಪ ಮಾಲೆ ಧರಿಸುತ್ತಾರೆ, ವ್ರತ ಅಚರಿಸುತ್ತಾರೆ. ಇವರಾದರೋ ಪುನೀತ್ ರಾಜ್​ಕುಮಾರ್ ಅವರ ಮಾಲೆ ಧರಿಸಿದ್ದಾರೆ ಮತ್ತು ಅವರ ಫೋಟೋ ಕೊರಳಿಗೆ ಹಾಕಿಕೊಂಡು, ತಲೆಮೇಲೆ ಇರುಮುಡ ಕಟ್ಟು ಹೊತ್ತು ನಟನ ಸಮಾಧಿ ಕಡೆ ಬರಿಗಾಲಲ್ಲಿ ನಡೆದುಬರುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪುನೀತ್ ರಾಜ್​ಕುಮಾರ್ ಅವರ ಸ್ಟಂಟ್ ಅನ್ನು ‘ಅಪ್ಪು ವೆಂಕಟೇಶ್’ ನೆನಪಿಸಿಕೊಂಡಿದ್ದು ಹೀಗೆ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.