ಬ್ಲ್ಯಾಕ್ ಫಂಗಸ್​ಗೆ ಕಲಬುರಗಿ ನಿವೃತ್ತ ಹೆಚ್ಚುವರಿ ಎಸ್​ಪಿ ಬಲಿ

|

Updated on: May 30, 2021 | 12:08 PM

ಜಿಲ್ಲೆಯಲ್ಲಿ ಸುಮಾರು 21 ಜನರಿಗೆ ಬ್ಲ್ಯಾಕ್ ಫಂಗಸ್ ಇರುವುದು ದೃಢಪಟ್ಟಿದೆ. ಇನ್ನಷ್ಟು ಜನರ ಮಾದರಿ ಪ್ರಯೋಗಾಲಯಕ್ಕೆ ಹೋಗಿದೆ. ಜಿಲ್ಲಾ ಕೊವಿಡ್ ಆಸ್ಪತ್ರೆ, ಬಾಪೂಜಿ ಆಸ್ಪತ್ರೆ, ಎಸ್ಎಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಎನ್​ಟಿ ವೈದ್ಯರಿಂದ ಈಗ ಚಿಕಿತ್ಸೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಫಂಗಸ್ಗೆ ಔಷಧಿ ಕೊರತೆ ಎದುರಾಗಿದೆ.

ಬ್ಲ್ಯಾಕ್ ಫಂಗಸ್​ಗೆ ಕಲಬುರಗಿ ನಿವೃತ್ತ ಹೆಚ್ಚುವರಿ ಎಸ್​ಪಿ ಬಲಿ
ನಿವೃತ್ತ ಹೆಚ್ಚುವರಿ ಎಸ್​ಪಿ ಬಿ.ಮಹಾಂತೇಶ್
Follow us on

ಕಲಬುರಗಿ: ಬ್ಲ್ಯಾಕ್ ಫಂಗಸ್​ಗೆ ವಿಜಯಪುರ ಜಿಲ್ಲೆಯ ಸಿಂದಗಿ ಮೂಲದರಾದ ನಿವೃತ್ತ ಹೆಚ್ಚುವರಿ ಎಸ್​ಪಿ ಬಿ.ಮಹಾಂತೇಶ್ ಮೃತಪಟ್ಟಿದ್ದಾರೆ. 65 ವರ್ಷದ ನಿವೃತ್ತ ಹೆಚ್ಚುವರಿ ಎಸ್​ಪಿ ಇತ್ತೀಚೆಗಷ್ಟೇ ಕೊವಿಡ್ ಸೋಂಕಿನಿಂದ ಗುಣಮುಖರಾಗಿದ್ದರು. ಬಳಿಕ ಬ್ಲ್ಯಾಕ್ ಫಂಗಸ್ ಲಕ್ಷಣಗಳು ಕಾಣಿಸಿಕೊಂಡಿತ್ತು. ಚಿಕಿತ್ಸೆ ಫಲಿಸದೆ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಿ.ಮಹಾಂತೇಶ್ ಪೊಲೀಸ್ ಮತ್ತು ಲೋಕಾಯುಕ್ತ ಇಲಾಖೆಯಲ್ಲಿ ಹಲವು ವರ್ಷಗಳು ಸೇವೆ ಸಲ್ಲಿಸಿದ್ದರು.

21 ಜನರಿಗೆ ಬ್ಲ್ಯಾಕ್ ಫಂಗಸ್ ದೃಢ
ದಾವಣಗೆರೆ: ಜಿಲ್ಲೆಯಲ್ಲಿ ಸುಮಾರು 21 ಜನರಿಗೆ ಬ್ಲ್ಯಾಕ್ ಫಂಗಸ್ ಇರುವುದು ದೃಢಪಟ್ಟಿದೆ. ಇನ್ನಷ್ಟು ಜನರ ಮಾದರಿ ಪ್ರಯೋಗಾಲಯಕ್ಕೆ ಹೋಗಿದೆ. ಜಿಲ್ಲಾ ಕೊವಿಡ್ ಆಸ್ಪತ್ರೆ, ಬಾಪೂಜಿ ಆಸ್ಪತ್ರೆ, ಎಸ್ಎಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಎನ್​ಟಿ ವೈದ್ಯರಿಂದ ಈಗ ಚಿಕಿತ್ಸೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಫಂಗಸ್​ಗೆ ಔಷಧಿ ಕೊರತೆ ಎದುರಾಗಿದೆ.

55 ಜನರಿಗೆ ಬ್ಲ್ಯಾಕ್ ಫಂಗಸ್
ಬಾಗಲಕೋಟೆ: ಜಿಲ್ಲೆಯಲ್ಲಿ 55 ಜನರಿಗೆ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಡಿಹೆಚ್ಒ ಅನಂತ ದೇಸಾಯಿ ಮಾಹಿತಿ ನೀಡಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ 113 ಜನರಿಗೆ ಬ್ಲ್ಯಾಕ್ ಫಂಗಸ್ ಇರುವುದು ದೃಢಪಟ್ಟಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 92 ರೋಗಿಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಧಾರವಾಡದ ಎಸ್​ಡಿಎಂ ಆಸ್ಪತ್ರೆಯಲ್ಲಿ 20 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಒಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅಂಪೋಟೆರಿಸನ್ ಬಿ ಚುಚ್ಚು ಮದ್ದಿಲ್ಲದೇ ರೋಗಿಗಳು ಕಂಗಾಲಾಗಿದ್ದಾರೆ. ಚುಚ್ಚು ಮದ್ದು ಬದಲಾಗಿ ಅದಕ್ಕೆ ಪರ್ಯಾಯವಾಗಿ ಸರ್ಕಾರ ಮಾತ್ರ ಕಳುಹಿಸಿದೆ. ಸದ್ಯ ರೋಗಿಗಳಿಗೆ ವೈದ್ಯರು ಮಾತ್ರೆಯನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ

ಚಿತ್ರದುರ್ಗದಲ್ಲಿ ಲಾಕ್​ಡೌನ್ ಜಾರಿಯಾದರು ಇಳಿಮುಖವಾಗಿಲ್ಲ ಸೋಂಕಿತರ ಸಂಖ್ಯೆ; ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಜನರ ಪರದಾಟ

ಕೊವಿಡ್ ನಿಯಮ ಉಲ್ಲಂಘಿಸಿ ಹೋಮ ಹವನ; ನಾಲ್ವರ ವಿರುದ್ಧ ಎಫ್ಐಆರ್

(A retired SP from Black Fungus has died in Kalaburagi)

Published On - 12:02 pm, Sun, 30 May 21