AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ನಿಯಮ ಉಲ್ಲಂಘಿಸಿ ಹೋಮ ಹವನ; ನಾಲ್ವರ ವಿರುದ್ಧ ಎಫ್ಐಆರ್

ಬೆಳಗಾವಿ ಮಹಾನಗರ ಪಾಲಿಕೆ ಕಿರಿಯ ಆರೋಗ್ಯ ನಿರೀಕ್ಷಕರ ದೂರಿನ ಮೇರೆಗೆ FIR ದಾಖಲಾಗಿದ್ದು ಶಹಾಪುರದ ಬಸವಣ ಗಲ್ಲಿಯ ಸುನಿಲ್ ಮುತಗೇಕರ್, ಕಲ್ಲಪ್ಪ ಶಹಾಪುರಕರ್, ಜಯಂತ ಜಾಧವ್, ಗಿರೀಶ್ ಧೋಂಗಡಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕೊವಿಡ್ ನಿಯಮ ಉಲ್ಲಂಘಿಸಿ ಹೋಮ ಹವನ; ನಾಲ್ವರ ವಿರುದ್ಧ ಎಫ್ಐಆರ್
ಹೋಮ ಹವನದ ದೃಶ್ಯ
Follow us
ಆಯೇಷಾ ಬಾನು
|

Updated on: May 30, 2021 | 11:29 AM

ಬೆಳಗಾವಿ: ಕೊವಿಡ್ ನಿಯಮ ಉಲ್ಲಂಘಿಸಿ ಹೋಮ ಹವನ ವಿಚಾರಕ್ಕೆ ಸಂಬಂಧಿಸಿ ಶಾಸಕ ಅಭಯ್ ಪಾಟೀಲ್ ಬಿಟ್ಟು ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ. ಹೋಮ ಹವನ ನಡೆಸಿದ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ. ಬೆಳಗಾವಿಯ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆ ಕಿರಿಯ ಆರೋಗ್ಯ ನಿರೀಕ್ಷಕರ ದೂರಿನ ಮೇರೆಗೆ FIR ದಾಖಲಾಗಿದ್ದು ಶಹಾಪುರದ ಬಸವಣ ಗಲ್ಲಿಯ ಸುನಿಲ್ ಮುತಗೇಕರ್, ಕಲ್ಲಪ್ಪ ಶಹಾಪುರಕರ್, ಜಯಂತ ಜಾಧವ್, ಗಿರೀಶ್ ಧೋಂಗಡಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 1860(U/S 188) ಕರ್ನಾಟಕ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 2020. ರಾಷ್ಟ್ರೀಯ ವಿಪತ್ತು ನಿರ್ವಹಣೆ ತಡೆ ಕಾಯ್ದೆ 2005ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾತಾವರಣ ಶುದ್ಧಿ ಮಾಡಲು ಬಿಜೆಪಿ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಮೇ 24ರ ಸಂಜೆ 6.45ರ ಸುಮಾರಿಗೆ‌ ಹೊಸೂರು ಬಸವಣ ಗಲ್ಲಿ ಸೇರಿದಂತೆ ಶಿವಾಜಿ ಗಾರ್ಡನ್ ಸುತ್ತಮುತ್ತ 50 ಕಡೆ ಹೋಮ-ಹವನಗಳನ್ನು ಮಾಡಲಾಗಿತ್ತು. ಇದೇ ರೀತಿ ಜೂನ್ 15ರೊಳಗೆ ಬೆಳಗಾವಿ ದಕ್ಷಿಣ ಕ್ಷೇತ್ರದ ಎಲ್ಲ ಕಡೆ ಹೋಮ ಮಾಡಿಸುವುದಕ್ಕೆ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿತ್ತು. ಅದರೆ ಕೊವಿಡ್ ನಿಯಮ ಉಲ್ಲಂಘಿಸಿ ಹೋಮ ಹವನ ನಡೆಸಿದ್ದಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಈಗ ಈ ಸಂಬಂಧ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ.

ವಾತಾವರಣ ಶುದ್ಧೀಕರಣಕ್ಕೆ ಹೋಮ ಮಾಡಿಸಿದೆ ಇನ್ನು ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಶಾಸಕ ಅಭಯ್ ಪಾಟೀಲ್‌, ಮೌಢ್ಯ ಎಂದು ತಿಳಿದುಕೊಳ್ಳುವವರಿಗೆ ಅದು ಮೌಢ್ಯ. ಈ ರೀತಿ ಮಾಡುವುದರಿಂದ ವಾತಾವರಣ ಶುದ್ಧವಾಗುತ್ತೆ. ಪರಿಸರ ಇಲಾಖೆಯ ಕೆಲವರಿಗೂ ಇದರ ಬಗ್ಗೆ ಹೇಳಿದ್ದೇನೆ. ಹೋಮ ಹವನ ಮಾಡಲು ಜನರೇ ಮುಂದೆ ಬರ್ತಿದ್ದಾರೆ. ಕ್ಷೇತ್ರದಲ್ಲಿ ಹೋಮ ಹವನ ಕಾರ್ಯ ಮುಂದುವರಿಯುತ್ತೆ ಎಂದು ಹೇಳಿದ್ದರು.

ಮನೆಯಲ್ಲಿ ರೋಗಿಗಳಿದ್ದರೆ ಪರಿಣಾಮ ಏನಾಗುತ್ತೆ ಅಂತಾ ಅವಲೋಕನ ಮಾಡಿ ಹೋಮ ಮಾಡಿದ್ದೇವೆ. ಕೊರೊನಾ ಸಂದರ್ಭದಲ್ಲಿ ವಾತಾವರಣ ಕಲುಷಿತ ಆಗಿದೆ ಅನ್ನುವ ಕಾರಣಕ್ಕೆ ವಾತಾವರಣ ತಿಳಿ ಆಗಲಿ ಅಂತಾ ಮಾಡಿದ್ದೇವೆ. ಹೋಮ ಹವನ ಕಾರ್ಯಕ್ರಮ ಮಾಡಲು ಜನರೇ ಮುಂದೆ ಬರ್ತಿದ್ದಾರೆ. ಮಹಾನಗರ ಪಾಲಿಕೆ ಪರಿಸರ ಇಲಾಖೆ ಅಧಿಕಾರಿಗೆ ಹೇಳಿದ್ದೇನೆ. ಹೋಮ ಹವನ ಮಾಡುವುದರಿಂದ ಏನಾಗುತ್ತೆ ಅನ್ನುವುದನ್ನ ಚೆಕ್ ಮಡ್ತಾರಂತೆ. ಹೋಮ ಹವನ ಕಾರ್ಯ ಮುಂದುವರೆಯುತ್ತೆ ಕರೆದ್ರೇ ಕಾರ್ಯಕ್ರಮಕ್ಕೆ ನಾನು ಹೋಗ್ತೆನಿ ಎಂದು ತಿಳಿಸಿದ್ದರು.

ಇದನ್ನೂ ಓದಿ:  ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಮೌಢ್ಯದಾಚೆಗೂ ವಾತಾವರಣ ಶುದ್ಧೀಕರಣಕ್ಕೆ ಹೋಮ-ಹವನ ಮಾಡಿಸಿದ ಶಾಸಕ ಅಭಯ್ ಪಾಟೀಲ್