AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯ ಇಂದಿರಾ ಕ್ಯಾಂಟೀನ್​ನಲ್ಲಿ ಗೋಲ್ಮಾಲ್; ತಹಶೀಲ್ದಾರ್ ದಾಳಿ ವೇಳೆ ಅಕ್ರಮ ಬಯಲು

ನಿತ್ಯ 450 ಜನರಿಗೆ ಊಟ, ತಿಂಡಿ ಮಾಡಿದ್ದೇವೆ ಎಂದು ಕ್ಯಾಂಟೀನ್ ಸಿಬ್ಬಂದಿ ಲೆಕ್ಕ ಬರೆದಿದ್ದರು. ಆದರೆ ಊಟ ತಿಂಡಿಗೆ ಹೋದರೆ ಕ್ಯಾಂಟೀನ್​ನಲ್ಲಿ ಖಾಲಿಯಾಗಿರುತ್ತದೆ. ಮೇಯರ್ ಎಸ್.ಟಿ. ವೀರೇಶ್, ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ತಹಶೀಲ್ದಾರ್ ಗಿರೀಶ್ ದಾಳಿ ನಡೆಸಿದ ಬಳಿಕ ಸತ್ಯ ಬಯಲಾಗಿದೆ.

ದಾವಣಗೆರೆಯ ಇಂದಿರಾ ಕ್ಯಾಂಟೀನ್​ನಲ್ಲಿ ಗೋಲ್ಮಾಲ್; ತಹಶೀಲ್ದಾರ್ ದಾಳಿ ವೇಳೆ ಅಕ್ರಮ ಬಯಲು
ಲೆಕ್ಕ ಪರಿಶೀಲನೆ
sandhya thejappa
|

Updated on: May 30, 2021 | 11:24 AM

Share

ದಾವಣಗೆರೆ: ಲಾಕ್​ಡೌನ್​ನಿಂದ ಜನ ಊಟಕ್ಕೆ ಪರದಾಡುತ್ತಾರೆ ಎಂದು ಸರ್ಕಾರ ಇಂದಿರಾ ಕ್ಯಾಂಟೀನ್ ಆರಂಭಿಸಿತು. ಆದರೆ ಈ ಸಂದಿಗ್ಧ ಕಾಲದಲ್ಲಿ ಕ್ಯಾಂಟೀನ್ ಸಿಬ್ಬಂದಿ ಗೋಲ್ಮಾಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಗರದ ಮಹಾನಗರ ಪಾಲಿಕೆ ಪಕ್ಕದ ಇಂದಿರಾ ಕ್ಯಾಂಟೀನ್ನಲ್ಲಿ ಗೋಲ್ಮಾಲ್ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೇಯರ್ ಮತ್ತು ತಹಶೀಲ್ದಾರ್ ದಾಳಿ ವೇಳೆ ಅಕ್ರಮ ಬಯಲಾಗಿದೆ.

ನಿತ್ಯ 450 ಜನರಿಗೆ ಊಟ, ತಿಂಡಿ ಮಾಡಿದ್ದೇವೆ ಎಂದು ಕ್ಯಾಂಟೀನ್ ಸಿಬ್ಬಂದಿ ಲೆಕ್ಕ ಬರೆದಿದ್ದರು. ಆದರೆ ಊಟ ತಿಂಡಿಗೆ ಹೋದರೆ ಕ್ಯಾಂಟೀನ್​ನಲ್ಲಿ ಖಾಲಿಯಾಗಿರುತ್ತದೆ. ಮೇಯರ್ ಎಸ್.ಟಿ. ವೀರೇಶ್, ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ತಹಶೀಲ್ದಾರ್ ಗಿರೀಶ್ ದಾಳಿ ನಡೆಸಿದ ಬಳಿಕ ಸತ್ಯ ಬಯಲಾಗಿದೆ.

ಪೊಲೀಸ್ ಇಲಾಖೆಯಿಂದ ಕೊರೊನಾ ಜಾಗೃತಿ ದಾವಣಗೆರೆ ತಾಲೂಕಿನ ಮುದಹದಡಿಯಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾದ ಕಾರಣ ಪೊಲೀಸ್ ಇಲಾಖೆ ಗ್ರಾಮ ಗ್ರಾಮಗಳಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಇಡೀ ಗ್ರಾಮದ ಜನರಿಗೆ ಸ್ಯಾನಿಟೇಜರ್, ಮಾಸ್ಕ್ ವಿತರಣೆ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮಾಂತರ ಡಿವೈಎಸ್​ಪಿ ನರಸಿಂಹ ತಾಮ್ರಧ್ವಜ ನೇತೃತ್ವದಲ್ಲಿ ಮಾಸ್ಕ್, ಸ್ಯಾನಿಟೇಜರ್ ವಿತರಣೆ ಮಾಡುತ್ತಿದ್ದಾರೆ. ಯಾರು ಕೂಡ ಅನಗತ್ಯವಾಗಿ ಹೊರ ಹೋಗಬೇಡಿ ಎಂದು ತೆರೆದ ವಾಹನದಲ್ಲಿ ಮೈಕ್ ಮೂಲಕ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.

ಇದನ್ನೂ ಓದಿ

43 ಕೆಜಿ ತೂಕ ಇಳಿಸಿ ತಮ್ಮ ಜೀವನದ ಸ್ಪೂರ್ತಿದಾಯಕ ಕಥೆ ಹಂಚಿಕೊಂಡ ಐಪಿಎಸ್​ ಅಧಿಕಾರಿ

ವ್ಯಾಕ್ಸಿನ್ ಕ್ಯಾರಿಯರ್ ಆವಿಷ್ಕಾರ; ಲಸಿಕೆ ಪೋಲಾಗುವುದನ್ನು ತಪ್ಪಿಸಲು ಉಡುಪಿ ಯುವಕರ ತಂಡದಿಂದ ವಿನೂತನ ಪ್ರಯೋಗ

(Golmaal is happening at Indira Canteen in Davanagere)