ಸದ್ದುಗುಂಟೆಪಾಳ್ಯದಲ್ಲಿ ಪುಡಿರೌಡಿಯೊಬ್ಬನ ಪುಂಡಾಟ, ಸಿಗರೇಟು ಕೊಡದಿದ್ದುಕ್ಕೆ ಬೇಕರಿ ಮೇಲೆ ಅಟ್ಟಹಾಸ

Updated on: May 27, 2025 | 12:30 PM

ಸ್ಥಳೀಯರು ಹೇಳುವ ಪ್ರಕಾರ ಮದ್ಯ ಹಾಗೂ ಗಾಂಜಾದ ಅಮಲಿನಲ್ಲಿ ರೌಡಿಗಳು ಪುಂಡಾಟದಲ್ಲಿ ತೊಡಗುತ್ತಾರೆ, ವ್ಯಾಪಾರಸ್ಥರು ಪೊಲೀಸರಿಗೆ ತಿಳಿಸಿದಾಗ ಅವರು ಸೈರನ್ ಹಾಕ್ಕೊಂಡು ಬರೋದ್ರಿಂದ ಸದ್ದು ಕೇಳಿ ರೌಡಿಗಳು ಪರಾರಿಯಾಗುತ್ತಾರಂತೆ. ಹಳೇ ಜಮಾನಾದ ಪೊಲೀಸರಂತೆ ಈಗಿನವರು ಯಾಕೆ ಸೈರನ್ ಬಾರಿಸಿಕೊಂಡು ಬರುತ್ತಾರೋ? ರೌಡಿಗಳಿಗೆ ತಾವು ಬರುತ್ತಿರುವ ವಿಷಯ ಗೊತ್ತಾಗಲೀ ಅಂತಲೇ?

ಬೆಂಗಳೂರು, ಮೇ 27: ಇದು ಸದ್ದುಗುಂಟೆಪಾಳ್ಯದ (Sadduguntepalya) ಕತೆ ಮಾತ್ರ ಅಲ್ಲ, ನಗರದ ಹಲವಾರು ಏರಿಯಾಗಳಲ್ಲಿ ಪುಡಿರೌಡಿಗಳು ಮತ್ತು ರೌಡಿಗಳ ಮೆರೆದಾಟ ಹೆಚ್ಚಾಗಿದೆ. ನಿನ್ನೆ ಸದ್ದುಗುಂಟೆಪಾಳ್ಯದಲ್ಲಿ ಸುಮಾರು 25-ವರ್ಷದ ಅಪ್ಪಿ ಹೆಸರಿನ ಯುವಕನೊಬ್ಬ ಬೇಕರಿಯೊಂದರಲ್ಲಿ ಪುಗ್ಸಟ್ಟೆ ಸಿಗರೇಟು ಕೇಳಿದ್ದಾನೆ, ಬೇಕರಿ ಮಾಲೀಕ ಕೊಡಲ್ಲ ಅಂದಿದ್ದಕ್ಕೆ ಅವರನ್ನು ಮನಬಂದಂತೆ ಬೈದು ಬೇಕರಿಯಲ್ಲಿದ್ದ ಗಾಜಿನ ಭರಣಿಗಳನ್ನು ಎತ್ತಿ ಹೊರಗೆ ಬಿಸಾಡಿದ್ದಾನೆ. ಪೊಲೀಸರಿಗೆ ಹೇಳುವುದಾಗಿ ಮಾಲೀಕ ಹೇಳಿದರೆ ಪುಂಡ ಯುವಕ ಪೊಲೀಸರನ್ನೂ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಪುಡಿರೌಡಿಗಳಿಂದ ಬೇಕರಿ ಮತ್ತು ಚಿಲ್ಲರೆ ಅಂಗಡಿಗಳ ವ್ಯಾಪಾರಿಗಳು ಬೇಸತ್ತು ಹೋಗಿದ್ದಾರೆ

ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಡ ಪಿಸ್ತೂಲ್ ಮಾರಾಟಕ್ಕೆ ಯತ್ನಿಸುತ್ತಿದ್ದ ರೌಡಿಶೀಟರ್​ ಅರೆಸ್ಟ್​

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ