ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಸಮೀಪ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ. ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ ಮಂಗಳೂರು ಪೊಲೀಸರು ಪತ್ತೆಯಾದ ಬ್ಯಾಗ್ ಹೊರತಂದು ಬಾಂಬ್ ನಿಷ್ಕ್ರಿಯದಳ, ಶ್ವಾನ ದಳದಿಂದ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಲ್ಯಾಪ್ಟಾಪ್ ಬ್ಯಾಗ್ ಎಂಬುದು ಪತ್ತೆಯಾಗಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಭೇಟಿ ನೀಡಿ ಪರಿಶೀಸಿದ್ದಾರೆ. ಪತ್ತೆಯಾಗಿರುವ ಬ್ಯಾಗ್ನಲ್ಲಿ ಸಜೀವ ಬಾಂಬ್ ಇದೆ ಎಂಬ ಅನುಮಾನ ಉಂಟಾಗಿದೆ. ಹೀಗಾಗಿ ಬಾಂಬ್ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಬ್ಯಾಗ್ ಅನ್ನು ಸುರಕ್ಷಿತ ಸ್ಥಳದಲ್ಲಿರಿಸಿ ಪೊಲೀಸರು ಸ್ಥಳದಿಂದ ದೂರ ಸರಿದಿದ್ದಾರೆ.
ಇನ್ನು ವಿಐಪಿಗಳ ವಾಹನಗಳು ಬಂದು ನಿಲುಗಡೆಯಾಗುವ ಸ್ಥಳದಲ್ಲಿ ಬ್ಯಾಗ್ ಪತ್ತೆಯಾಗಿದೆ. ಆಟೋದಲ್ಲಿ ಬಂದ ಇಬ್ಬರು ಲ್ಯಾಪ್ಟಾಪ್ ಬ್ಯಾಗ್ ಇಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಸಿಸಿಟಿವಿ ದೃಶ್ಯವನ್ನು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ವಾಹನಗಳ ಮಾರ್ಗ ಬದಲಾವಣೆ:
ಮೊದಲು ಬಾಂಬ್ ರೀತಿಯ ವಸ್ತು ನೋಡಿದ್ದು ಭದ್ರತಾ ಸಿಬ್ಬಂದಿ. ಬಳಿಕ ಉನ್ನಾತಾಧಿಕಾರಿಗಳಿಗೆ ಮಾಹಿತಿ ರವಾನೆ ಮಾಡಲಾಗಿದೆ. ನಂತರ ನಿರಂತರ ಕಾರ್ಯಾಚರಣೆ ಮಾಡುತ್ತಿದ್ದು, ಸದ್ಯ ಏರ್ಪೋರ್ಟ್ ಕಡೆ ಹೋಗುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ತಾತ್ಕಾಲಿಕವಾಗಿ ಎಲ್ಲ ರಸ್ತೆ ಮಾರ್ಗಗಳ ಬದಲಾವಣೆ ಮಾಡಿದ್ದಾರೆ. ಪ್ರಯಾಣಿಕರ ಸುರಕ್ಷತೆಗಾಗಿ ಏರ್ಪೋರ್ಟ್ ಆವರಣದಲ್ಲಿ ಪೊಲೀಸರ ಸರ್ಪಗಾವಲು ಹಾಕಿದ್ದಾರೆ.
Published On - 1:17 pm, Mon, 20 January 20