KAS ಅಧಿಕಾರಿ ಡಾ. ಸುಧಾ ಆಪ್ತರಿಗೆ ಬೆಳ್ಳಂಬೆಳಗ್ಗೆ ACB ಶಾಕ್​: ದಾಳಿಯಲ್ಲಿ ನಗದು, ಅಕ್ರಮ ಆಸ್ತಿ ಪತ್ತೆ

ಬೆಂಗಳೂರು: ಅಕ್ರಮ ಆಸ್ತಿ ಸಂಗ್ರಹಕ್ಕೆ ಸಂಬಂಧಪಟ್ಟಂತೆ KAS ಅಧಿಕಾರಿ ಡಾ. ಸುಧಾ ಮನೆ ಮೇಲೆ ದಾಳಿ ನಡೆಸಿದ್ದ ACB ಅಧಿಕಾರಿಗಳು ಇದೀಗ ಮುಂದುವರಿದ ಭಾಗವಾಗಿ, ಸುಧಾ ಆಪ್ತರ ಮನೆ ಮೇಲೂ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಒಟ್ಟು 6 ಕಡೆ ದಾಳಿ ನಡೆಸಿರುವ ಅಧಿಕಾರಿಗಳು, ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಸುಧಾ ಮತ್ತು ಅವರ ಆಪ್ತರ ಬಳಿ ಒಟ್ಟು 50 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಸುಧಾ ಆಪ್ತರು ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿ, […]

KAS ಅಧಿಕಾರಿ ಡಾ. ಸುಧಾ ಆಪ್ತರಿಗೆ ಬೆಳ್ಳಂಬೆಳಗ್ಗೆ ACB ಶಾಕ್​: ದಾಳಿಯಲ್ಲಿ ನಗದು, ಅಕ್ರಮ ಆಸ್ತಿ ಪತ್ತೆ
KAS ಅಧಿಕಾರಿ ಡಾ.ಸುಧಾ ಆಪ್ತರ ಮನೆ ಮೇಲೆ ACB ದಾಳಿ
Edited By:

Updated on: Nov 24, 2020 | 12:12 PM

ಬೆಂಗಳೂರು: ಅಕ್ರಮ ಆಸ್ತಿ ಸಂಗ್ರಹಕ್ಕೆ ಸಂಬಂಧಪಟ್ಟಂತೆ KAS ಅಧಿಕಾರಿ ಡಾ. ಸುಧಾ ಮನೆ ಮೇಲೆ ದಾಳಿ ನಡೆಸಿದ್ದ ACB ಅಧಿಕಾರಿಗಳು ಇದೀಗ ಮುಂದುವರಿದ ಭಾಗವಾಗಿ, ಸುಧಾ ಆಪ್ತರ ಮನೆ ಮೇಲೂ ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಒಟ್ಟು 6 ಕಡೆ ದಾಳಿ ನಡೆಸಿರುವ ಅಧಿಕಾರಿಗಳು, ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಸುಧಾ ಮತ್ತು ಅವರ ಆಪ್ತರ ಬಳಿ ಒಟ್ಟು 50 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಸುಧಾ ಆಪ್ತರು ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿ, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸೃಷ್ಟಿಮಾಡಿದ್ದಾರೆ ಎಂದು ಹೇಳಲಾಗಿದೆ.

ಸುಧಾ ಆಪ್ತ ಮಹೇಶ್ ಮನೆಯಲ್ಲಿ ಶೋಧ
ದೊಡ್ಡ ಆಲದಮರದ ಬಳಿಯ ಭೀಮನಕುಪ್ಪೆಯಲ್ಲಿರುವ ಸುಧಾ ಆಪ್ತ ಮಹೇಶ್ ಮನೆಯಲ್ಲಿ ACB ಅಧಿಕಾರಿಗಳು ಶೋಧ ನಡೆಸಿದ್ದಾರೆ. ಐವರು ಅಧಿಕಾರಿಗಳ ತಂಡ ಇಂದು ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿದ್ದು, ಮಹೇಶ್ ಮನೆಯಲ್ಲೂ ಅಪಾರ ಪ್ರಮಾಣದಲ್ಲಿ ಚಿನ್ನ ಮತ್ತು ನಗದು ಪತ್ತೆಯಾಗಿದೆ. ಹಾಗೇ, ಇನ್ನೋರ್ವ ಆಪ್ತನಾದ ರಿಯಲ್ ಎಸ್ಟೇಟ್ ಉದ್ಯಮಿ ಪ್ರಭು ಮನೆಯನ್ನೂ ಶೋಧಿಸಿದ್ದಾರೆ.

 

Published On - 12:10 pm, Tue, 24 November 20