ಬೆಂಗಳೂರು: ಬೆಳ್ಳಂಬೆಳಗ್ಗೆ ಬಿಬಿಎಂಪಿ ಎಇಇ ಆಂಜಿನಪ್ಪ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ನಾಲ್ಕು ತಂಡಗಳಿಂದ ಬೆಂಗಳೂರು, ಚನ್ನಗಿರಿ, ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ ನಡೆದಿದ್ದು 2 ಕಾರು, ಬೈಕ್, 3.5 ಲಕ್ಷ ರೂಪಾಯಿ ಪತ್ತೆಯಾಗಿದೆ.
ದಾವಣಗೆರೆ ಎಸಿಬಿ ಕಚೇರಿಯಲ್ಲಿ BBMP ಎಕ್ಸ್ಯೂಟಿವ್ ಇಂಜಿನಿಯರ್ ಆಂಜಿನಪ್ಪ ಅವರ ವಿರುದ್ಧ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಡಿವೈಎಸ್ಪಿ ಪರಮೇಶ್ ನೇತೃತ್ವದಲ್ಲಿ ಆಜಿನಪ್ಪ ಅವರ ಜೀವನ್ ಭೀಮಾನಗರದ ಸರ್ಕಾರಿ ಕ್ವಾಟರ್ಸ್ ನ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಇನೋವಾ ಕಾರ್ ಸೇರಿದಂತೆ ಮೂರು ಕಾರ್, ಒಂದು ಬೈಕ್, ಮೂರೂವರೆ ಲಕ್ಷ ನಗದು ಪತ್ತೆಯಾಗಿದೆ.
ಮೇಲ್ನೋಟಕ್ಕೆ ಹತ್ತಕ್ಕೂ ಹೆಚ್ಚು ಕಡೆ ಆಸ್ತಿ ಮಾಡಿರುವುದು ಪತ್ತೆಯಾಗಿದೆ. ದಾವಣಗೆರೆಯಲ್ಲಿ ಎಸಿಬಿ ಎಸ್ಪಿ ಜಯಪ್ರಕಾಶ ನೇತ್ರತ್ವದಲ್ಲಿ ದಾಳಿ ನಡೆದಿದ್ದು 9.79 ಲಕ್ಷ ರೂಪಾಯಿ ನಗದು. 22 ಎಕರೆ ಅಡಿಕೆ ತೋಟ, ನಾಲ್ಕು ಕಂಪನಿಗೆ ಸೇರಿದ ಕಾರ್, ಬೆಂಗಳೂರು ಮತ್ತು ಲೋಕಿಕೆರೆಯಲ್ಲಿ ಮನೆಗಳ ಪತ್ರಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.
ಎಸಿಎಫ್ ಶಿವಶಂಕರ್ ಮನೆ ಮೇಲೆ ಎಸಿಬಿ ದಾಳಿ: ₹ 3.79 ಕೋಟಿ ಮೌಲ್ಯದ ಆಸ್ತಿ ಪತ್ತೆ