ಅಕ್ರಮ ಆಸ್ತಿ ಗಳಿಕೆ ಆರೋಪ, ರಾಜ್ಯದ 7 ಅಧಿಕಾರಿಗಳ ಮನೆಗಳ ಮೇಲೆ ACB ರೇಡ್

|

Updated on: Feb 02, 2021 | 1:19 PM

ಆದಾಯಕ್ಕಿಂತ ಹೆಚ್ಚು ಆಸ್ತಿಯನ್ನು ಗಳಿಸಿರುವ ಆರೋಪದಡಿ ಬೆಂಗಳೂರು ನಗರ, ಬಳ್ಳಾರಿ, ಕೋಲಾರ, ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಕಲಬುರಗಿ ಜಿಲ್ಲೆಯಲ್ಲಿ ಎಸಿಬಿ ದಾಳಿ ನಡೆದಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪ, ರಾಜ್ಯದ 7 ಅಧಿಕಾರಿಗಳ ಮನೆಗಳ ಮೇಲೆ ACB ರೇಡ್
ಚಿತ್ರದುರ್ಗದಲ್ಲಿ ನಡೆದ ಎಸಿಬಿ ದಾಳಿ ದೃಶ್ಯ
Follow us on

ಬೆಂಗಳೂರು: ರಾಜ್ಯದ 7 ಅಧಿಕಾರಿಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯದ ಒಟ್ಟು 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಎಸಿಬಿ ದಾಳಿ ಮಾಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿಯನ್ನು ಗಳಿಸಿರುವ ಆರೋಪದಡಿ ಬೆಂಗಳೂರು ನಗರ, ಬಳ್ಳಾರಿ, ಕೋಲಾರ, ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಕಲಬುರಗಿ ಜಿಲ್ಲೆಯಲ್ಲಿ ದಾಳಿ ನಡೆದಿದೆ.

ಅಸಮತೋಲನ ಆಸ್ತಿ ಹೊಂದಿರುವ ಬಗ್ಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಾಗಿದೆ. ಹೀಗಾಗಿ ಬೆಂಗಳೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕ ಪಾಂಡುರಂಗ ಗರಗ್ ಮನೆ ಮೇಲೆ ರೇಡ್ ಆಗಿದೆ.

ಡಿ.ಪಾಂಡುರಂಗ ಗರಗ್‌ಗೆ ಸೇರಿದ 5 ಕಡೆ ಎಸಿಬಿ ದಾಳಿ ನಡೆಸಿದೆ. ಬೆಂಗಳೂರಿನ ವಿಜಯನಗರದ ಮನೆ, ಜಯನಗರದ ಫ್ಲ್ಯಾಟ್, ಜಯನಗರದಲ್ಲಿರುವ ಡಿ.ಪಾಂಡುರಂಗ ಗರಗ್‌ ಅತ್ತೆಯ ಮನೆ, ಚಿತ್ರದುರ್ಗ, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮನೆ, ಪಾಂಡುರಂಗ ಗರಗ್ ಕಚೇರಿ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ಪಾಂಡುರಂಗ ಆಸ್ತಿ ಮೌಲ್ಯ, ಚಿನ್ನಾಭರಣ, ವಿವಿಧ ಬ್ಯಾಂಕ್​ಗಳ ಠೇವಣಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ವೇಳೆ ವಿಜಯನಗರದ ಪಾಂಡುರಂಗ ನಿವಾಸದಲ್ಲಿ ಅಪಾರ ಪ್ರಮಾಣದ ಸಂಪತ್ತು ಪತ್ತೆಯಾಗಿದೆ. ಲಾಕರ್​ನಲ್ಲಿ ಕಂತೆ ಕಂತೆ ನೋಟು, ಚಿನ್ನ ಹಾಗೂ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ.

ಇಇ ದೇವರಾಜ್ ಶಿಗ್ಗಾಂವಿ ಮನೆ ಮೇಲೆ ದಾಳಿ
ಸಣ್ಣ ನೀರಾವರಿ ಇಲಾಖೆ ಇಇ ದೇವರಾಜ್ ಶಿಗ್ಗಾಂವಿ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯ ಮನೆ, ವಿದ್ಯಾನಗರದ ಮನೆ, ಕೋಟಿಲಿಂಗೇಶ್ವರ ನಗರದ ಮನೆ ಸೇರಿದಂತೆ ಮೂರು ಕಡೆ ಏಕಕಾಲಕ್ಕೆ ಧಾರವಾಡ ಎಸಿಬಿ ಅಧಿಕಾರಿಗಳಿಂದ ದಾಳಿ ನಡೆದಿದೆ.

ಧಾರವಾಡ ಅರಣ್ಯ ಇಲಾಖೆ ಅಧಿಕಾರಿ ಮನೆ ಮೇಲೆ ರೇಡ್
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ACF ಶ್ರೀನಿವಾಸ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿತ್ರದುರ್ಗದ ವಿದ್ಯಾನಗರದಲ್ಲಿರುವ ಶ್ರೀನಿವಾಸ್ ಮನೆ, ನಗರದ ಬಸವೇಶ್ವರ ಮೆಡಿಕಲ್ ಕಾಲೇಜು ಬಳಿಯ ಮನೆ, ಮಾರಘಟ್ಟ ಗ್ರಾಮದ ಬಳಿಯ ತೋಟದ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಕೋಲಾರ ಡಿಹೆಚ್‌ಒ ಮನೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ
ಎಸಿಬಿ DySP ಪುರುಷೋತ್ತಮ್ ನೇತೃತ್ವದಲ್ಲಿ ಕೋಲಾರ ಡಿಹೆಚ್‌ಒ ಡಾ.ವಿಜಯ್‌ಕುಮಾರ್‌ರ ಕೋಲಾರದ ಕಚೇರಿ, ಮುಳಬಾಗಿಲಿನಲ್ಲಿರುವ ಮನೆ, ಅವರ ಖಾಸಗಿ ಆಸ್ಪತ್ರೆ, ಚಿಂತಾಮಣಿಯಲ್ಲಿರುವ ಮನೆ, ಬೆಂಗಳೂರಿನ ಫ್ಲ್ಯಾಟ್ ಸೇರಿ 6 ಕಡೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಗಳೂರು ಪಾಲಿಕೆ ಟಿಪಿಒ ಮನೆಯ ಮೇಲೆ ದಾಳಿ
SP ಬೋಪಯ್ಯ, DySP ಕೆ.ಸಿ.ಪ್ರಕಾಶ್‌, ಇನ್ಸ್‌ಪೆಕ್ಟರ್​ಗಳಾದ ಶ್ಯಾಂಸುಂದರ್‌, ಗುರುರಾಜ್‌ ಹಾಗೂ ಸಿಬ್ಬಂದಿಗಳಿಂದ ಮಂಗಳೂರು ಪಾಲಿಕೆ ಟೌನ್ ಪ್ಲ್ಯಾನಿಂಗ್ ಆಫೀಸರ್ ಜಯರಾಜ್ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ಜಯರಾಜ್‌ನ ಮಂಗಳೂರಿನ ಮನೆ, ಜಯರಾಜ್ ತಂದೆ ಮನೆ, ಕೇರಳದಲ್ಲಿರುವ ಜಯರಾಜ್ ಪತ್ನಿ ಕ್ವಾರ್ಟರ್ಸ್‌ನಲ್ಲಿ ದಾಳಿ ನಡೆದಿದೆ.

ವಿಮ್ಸ್ ಆಸ್ಪತ್ರೆಯ ಮಾಜಿ ನಿರ್ದೇಶಕನ ಮನೆಯ ಮೇಲೆ ಎಸಿಬಿ ದಾಳಿ
ವಿಮ್ಸ್ ಆಸ್ಪತ್ರೆಯ ಮಾಜಿ ನಿರ್ದೇಶಕ. ಕೊಪ್ಪಳ ಕಿಮ್ಸ್‌ನ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ.ಶ್ರೀನಿವಾಸ್ ಮನೆಯ ಮೇಲೆ ಎಸಿಬಿ ದಾಳಿ ನಡೆಸಿದೆ. ಕೊಪ್ಪಳದಲ್ಲಿರುವ ಕಚೇರಿ, ಬಳ್ಳಾರಿ ಮನೆ ಮೇಲೆ ದಾಳಿ ನಡೆದಿದೆ.

ಎಸಿಎಫ್ ಶಿವಶಂಕರ್ ಮನೆ ಮೇಲೆ ಎಸಿಬಿ ದಾಳಿ: ₹ 3.79 ಕೋಟಿ ಮೌಲ್ಯದ ಆಸ್ತಿ ಪತ್ತೆ

Published On - 9:22 am, Tue, 2 February 21