ಮಂಗಳೂರು ಮೈಸೂರಿನಲ್ಲಿ ಪ್ರತ್ಯೇಕ ಅಪಘಾತ.. ಕುಡಿದ ಮತ್ತಿನಲ್ಲಿ BSNLನ ನಿವೃತ್ತ ಉದ್ಯೋಗಿ ಮೇಲೆ ಕಾರು ಹತ್ತಿಸಿದ ಪಿಡಬ್ಲ್ಯುಡಿ ಎಇಇ

|

Updated on: Mar 29, 2021 | 8:37 AM

ಕಂಠಪೂರ್ತಿ ಕುಡಿದು ಕಾರು ಚಲಾಯಿಸುತ್ತಿದ್ದ ಪಿಡಬ್ಲ್ಯುಡಿ ಎಇಇ ಷಣ್ಮುಗಂ ಯಮನಾಗಿ BSNLನ ನಿವೃತ್ತ ಉದ್ಯೋಗಿ ಎ.ಆನಂದ್​ರ ಜೀವ ತೆಗೆದಿದ್ದಾರೆ. ಮದ್ಯದ ಅಮಲಿನಲ್ಲಿ ಪಾದಚಾರಿ ಮೇಲೆ ಕಾರು ಹತ್ತಿಸಿದ್ದಾರೆ. ಈ ಪರಿಣಾಮ BSNLನ ನಿವೃತ್ತ ಉದ್ಯೋಗಿ ಎ.ಆನಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಗಳೂರು ಮೈಸೂರಿನಲ್ಲಿ ಪ್ರತ್ಯೇಕ ಅಪಘಾತ.. ಕುಡಿದ ಮತ್ತಿನಲ್ಲಿ BSNLನ ನಿವೃತ್ತ ಉದ್ಯೋಗಿ ಮೇಲೆ ಕಾರು ಹತ್ತಿಸಿದ ಪಿಡಬ್ಲ್ಯುಡಿ ಎಇಇ
ಅಪಘಾತದ ದೃಶ್ಯ
Follow us on

ಮಂಗಳೂರು: ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಪಾದಚಾರಿಗೆ ಡಿಕ್ಕಿ ಹೊಡೆದಿದ್ದು ಆತ ಮೃತಪಟ್ಟಿರುವ ಘಟನೆ ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯ ಬಳಿ ನಡೆದಿದೆ. ಅಪಘಾತದಲ್ಲಿ ಪಾದಚಾರಿ BSNLನ ನಿವೃತ್ತ ಉದ್ಯೋಗಿ ಎ.ಆನಂದ್ ಮೃತಪಟ್ಟಿದ್ದಾರೆ. ಹಾಗೂ ಪಾನಮತ್ತ ಪಿಡಬ್ಲ್ಯುಡಿ ಎಇಇ ಷಣ್ಮುಗಂ ಅಪಘಾತ ಮಾಡಿದ್ದು ಮಂಗಳೂರು ಪೂರ್ವ ಸಂಚಾರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಂಠಪೂರ್ತಿ ಕುಡಿದು ಕಾರು ಚಲಾಯಿಸುತ್ತಿದ್ದ ಪಿಡಬ್ಲ್ಯುಡಿ ಎಇಇ ಷಣ್ಮುಗಂ ಯಮನಾಗಿ BSNLನ ನಿವೃತ್ತ ಉದ್ಯೋಗಿ ಎ.ಆನಂದ್​ರ ಜೀವ ತೆಗೆದಿದ್ದಾರೆ. ಮದ್ಯದ ಅಮಲಿನಲ್ಲಿ ಪಾದಚಾರಿ ಮೇಲೆ ಕಾರು ಹತ್ತಿಸಿದ್ದಾರೆ. ಈ ಪರಿಣಾಮ BSNLನ ನಿವೃತ್ತ ಉದ್ಯೋಗಿ ಎ.ಆನಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಪ್ರಕರಣದಿಂದ ತಪ್ಪಿಸಿಕೊಳ್ಳಲು ಈತ ನನ್ನ ತಮ್ಮ ಎಂದು ಹೇಳಿ ಪೊಲೀಸರಿಗೆ ದಿಕ್ಕು ತಪ್ಪಿಸುವ ಪ್ರಯತ್ನ ಸಹ ಮಾಡಿದ್ದಾರೆ. ಆದ್ರೆ ಆರೋಪಿಯ ಚಲಾಕಿ ತನ ಅರಿತ ಮಂಗಳೂರು ಪೂರ್ವ ಸಂಚಾರಿ ಪೊಲೀಸರು ಪಿಡಬ್ಲ್ಯುಡಿ ಇಂಜಿನಿಯರ್ ಷಣ್ಮುಗಂನನ್ನು ಬಂಧಿಸಿದ್ದಾರೆ. ಸದ್ಯ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಪೊಲೀಸರು ಸಾಕ್ಷ್ಯಾಧಾರ ಕಲೆ ಹಾಕಿ ದೂರು ದಾಖಲಿಸಿಕೊಂಡಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಪಲ್ಟಿಯಾದ ಟಾಟಾಏಸ್
ಚಾಲಕನ ನಿಯಂತ್ರಣ ತಪ್ಪಿ ಮದುವೆಗೆ ಹೊರಟಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ ನಾಲೆಗೆ ಬಿದ್ದ ಘಟನೆ ಮೈಸೂರಿನ ಕೆ.ಆರ್.ನಗರದ ಹೊಸೂರು-ಹಳಿಯೂರು ರಸ್ತೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಬಾಲಕಿಯರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಪುಷ್ಪಲತಾ(10), ಪಲ್ಲವಿ(9) ಮೃತ ದುರ್ದೈವಿಗಳು. ನಾಲೆಯಲ್ಲಿ ನೀರಿಲ್ಲದ ಕಾರಣ ಬಾರಿ ಅನಾಹುತವೊಂದು ತಪ್ಪಿದೆ. ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜೋಡಿ ಎತ್ತಿನಗಾಡಿ ಓಟ ಸ್ಪರ್ಧೆ ವೇಳೆ ಇಬ್ಬರು ಯುವಕರ ಮೇಲೆ ಜೋಡೆತ್ತಿನ ಗಾಡಿ ಹರಿದು ಯುವಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ಹೊರವಲಯದಲ್ಲಿ ನಡೆದಿದೆ. ಗಾಯಾಳುಗಳಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: ದಾಮರದುರ್ಗಂ ಬಳಿ ಅಪಘಾತ; ಲಾರಿ, ಟೆಂಪೊ ನಡುವೆ ಡಿಕ್ಕಿಯಾಗಿ 8 ಜನರ ಸಾವು

Published On - 7:20 am, Mon, 29 March 21