ಗ್ರಾ.ಪಂ ಚುನಾವಣೆಯಲ್ಲಿ ಅಭ್ಯರ್ಥಿಯ ಸಂಖ್ಯೆ ಬದಲು: ಅಧಿಕಾರಿಗಳಿಂದ ಕತ್ರವ್ಯಲೋಪ

|

Updated on: Dec 23, 2020 | 9:12 AM

ಮತಗಟ್ಟೆ ಸಂಖ್ಯೆ 26ರಲ್ಲಿ ಚಿಹ್ನೆ ಬದಲಾಗಿದೆ. ಇದರಿಂದ ಅಧಿಕಾರಿಗಳು ಕರ್ತವ್ಯಲೋಪ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ರಾಯಚೂರು ಜಿಲ್ಲಾಧಿಕಾರಿ ನೋಟೀಸ್ ನೀಡಿದ್ದಾರೆ.

ಗ್ರಾ.ಪಂ ಚುನಾವಣೆಯಲ್ಲಿ ಅಭ್ಯರ್ಥಿಯ ಸಂಖ್ಯೆ ಬದಲು: ಅಧಿಕಾರಿಗಳಿಂದ ಕತ್ರವ್ಯಲೋಪ
ಸಾಂದರ್ಭಿಕ ಚಿತ್ರ
Follow us on

ರಾಯಚೂರು: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣಾ ವೇಳೆ ಮತಗಟ್ಟೆ ಸಂಖ್ಯೆಯಲ್ಲಿ ಅಭ್ಯರ್ಥಿಯ ಚಿಹ್ನೆ ಬದಲಾದ ಘಟನೆ ತುಪ್ಪದೂರು ಗ್ರಾಮ ಮತಗಟ್ಟೆಯಲ್ಲಿ ನಡೆದಿತ್ತು. ಈ ಸಂಬಂಧ ಸಿರವಾರ ತಹಶೀಲ್ದಾರ್ ಬಸವರಾಜ ಬೆಣ್ಣೆ ಶಿರೂರು ಹಾಗೂ ಗಣದಿನ್ನಿ ಚುನಾವಣಧಿಕಾರಿ ಮೌನೇಶ್ ಅವರಿಗೆ ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್ ನೋಟೀಸು ನೀಡಿದ್ದಾರೆ.

ಮತಗಟ್ಟೆ ಸಂಖ್ಯೆ 26ರಲ್ಲಿ ಚಿಹ್ನೆ ಬದಲಾಗಿದೆ. ಇದರಿಂದ ಅಧಿಕಾರಿಗಳ ಕರ್ತವ್ಯಲೋಪವಾಗಿದೆ ಎಂದು ಆರೋಪಿಸಲಾಗಿದ್ದು, ಜಿಲ್ಲಾಧಿಕಾರಿ ನೋಟೀಸ್ ನೀಡಿದ್ದಾರೆ. 3 ದಿನಗಳಲ್ಲಿ ನೋಟೀಸ್​ಗೆ ಉತ್ತರಿಸುವಂತೆ ಹೇಳಲಾಗಿದ್ದು, ನೋಟೀಸಿಗೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಲ್ಲಿ ಶಿಸ್ತುಕ್ರಮ ಜಾರಿಗೊಳಿಸುವಂತೆ ಎಚ್ಚರಿಕೆ ನೀಡಲಾಗಿದೆ.

ಗ್ರಾ.ಪಂ ಚುನಾವಣೆ ಅಭ್ಯರ್ಥಿ ಕ್ರಮ ಸಂಖ್ಯೆ ಅದಲು ಬದಲು: ಅಧಿಕಾರಿಗಳ ವಿರುದ್ಧ ಆಕ್ರೋಶ

Published On - 8:50 am, Wed, 23 December 20