ಬೆನ್ನುನೋವಿನ ಕಾರಣದಿಂದ ಜಾಮೀನು ಪಡೆಯಲು ರಾಗಿಣಿ ಯತ್ನ?

ಈಗಾಗಲೇ ಆರೋಗ್ಯ ಸಮಸ್ಯೆ ಹಿನ್ನೆಲೆ ನಟಿ ಸಂಜನಾ ಜಾಮೀನು ಪಡೆದಿದ್ದು, ಬೆನ್ನು ನೋವಿನಿಂದ ಬಳಲುತ್ತಿರುವ ರಾಗಿಣಿ ಕೂಡ ಅದೇ ಮಾದರಿಯಲ್ಲಿ ಬೇಲ್ ಪಡೆಯುವ ನಿರೀಕ್ಷೆಯಿದೆ.

ಬೆನ್ನುನೋವಿನ ಕಾರಣದಿಂದ ಜಾಮೀನು ಪಡೆಯಲು ರಾಗಿಣಿ ಯತ್ನ?
ಸಾಂದರ್ಭಿಕ ಚಿತ್ರ
sandhya thejappa Edited By:

Updated on: Dec 26, 2020 | 10:10 AM

ಬೆಂಗಳೂರು: ಡ್ರಗ್ ಕೇಸ್​ನಲ್ಲಿ ಜೈಲು ಸೇರಿದ್ದ ಸ್ಯಾಂಡಲ್​ವುಡ್ ನಟಿ ರಾಗಿಣಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದು, ಪರಪ್ಪನ ಅಗ್ರಹಾರ ಜೈಲು ಆಸ್ಪತ್ರೆಯಲ್ಲೇ  ಚಿಕಿತ್ಸೆ ಮುಂದುವರಿದಿದೆ.

ನನಗೆ ಬೆನ್ನುನೋವು ಬರುತ್ತಿದೆ ಎಂದು  ಪದೇಪದೆ ಜೈಲು ಅಧಿಕಾರಿಗಳಿಗೆ  ಹೇಳಿದ ರಾಗಿಣಿಯವರನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಆದರೆ ಗಂಭೀರ ಸಮಸ್ಯೆಯಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಈಗಾಗಲೇ ಆರೋಗ್ಯ ಸಮಸ್ಯೆ ಹಿನ್ನೆಲೆ ನಟಿ ಸಂಜನಾ ಜಾಮೀನು ಪಡೆದಿದ್ದು, ಬೆನ್ನು ನೋವಿನಿಂದ ಬಳಲುತ್ತಿರುವ ರಾಗಿಣಿ ಕೂಡ ಅದೇ ಮಾದರಿಯಲ್ಲಿ ಬೇಲ್ ಪಡೆಯುವ ನಿರೀಕ್ಷೆಯಿದೆ. ಜನವರಿ ಮೊದಲ ವಾರದಲ್ಲಿ ಸುಪ್ರೀಂ ಕೊರ್ಟ್​ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಆ ವೇಳೆ ರಾಗಿಣಿ ಆರೋಗ್ಯ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಜಾಮೀನಿಗೆ ಮನವಿ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಸಂಜನಾಗೊಂದು ನ್ಯಾಯ, ರಾಗಿಣಿಗೊಂದು ನ್ಯಾಯವೇ? ರಾಗಿಣಿ ತಾಯಿ ಪ್ರಶ್ನೆ

 

Follow Us