ಬೆಂಗಳೂರು: Aero India 2021 ದೇಶದ ಪ್ರತಿಷ್ಠಿತ ಏರೋ ಶೋಗೆ ಇಂದು ಅದ್ಧೂರಿ ತೆರೆ ಬೀಳಲಿದೆ. 2 ದಿನ ಎದೆ ಝೆಲ್ ಅನ್ನಿಸೋ ಲೋಹದ ಹಕ್ಕಿಗಳ ಸಾಹಸ ಪ್ರದರ್ಶನ ನೋಡುಗರನ್ನ ನಿಬ್ಬೆರಗಾಗಿಸಿತ್ತು. 3ನೇ ದಿನವಾದ ಇಂದು ಈ ಕಲರ್‌ಪುಲ್ ಶೋಗೆ ತೆರಬೀಳಲಿದೆ. ಕೊರೊನಾ ಆತಂಕದ ನಡುವೆ ನಡೆದ ಏರೋ ಶೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಾರಿ ಸೂರ್ಯಕಿರಣ್ ಹಾಗೂ ಸಾರಂಗ್ ತಂಡ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿತ್ತು. ಆಕಾಶದಲ್ಲಿ ಈ ತಂಡಗಳು ನಡೆಸಿದ ಝಲಕ್ ಎಲ್ಲರ ಹುಬ್ಬೆರಿಸುವಂತೆ ಮಾಡಿದೆ.
ಕಳೆದ ಎರಡು ದಿನಗಳಿಂದ ನಾನಾ ಕಂಪನಿಗಳು ಬ್ಯುಸಿನೆಸ್ ಟಾಕ್ ನಡೆಸಿದ್ದು, ಏರೋ ಶೋನ ಕೊನೆಯ ದಿನವಾದ ಇಂದು ಕೆಲ ಒಪ್ಪಂದಗಳಿಗೆ ಸಹಿಹಾಕಲಿದ್ದಾರೆ. ಡಿಆರ್ ಡಿಒ ಗೆ ಬಾಂಗ್ಲಾದೇಶ ರಕ್ಷಣಾ ಅಧಿಕಾಗಳು ಭೇಟಿ ನೀಡಲಿದ್ದು, ಕೆಲ ರಕ್ಷಣಾ ಕ್ಷೇತ್ರ ಒಪ್ಪಂದದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇನ್ನೂ ಈ ಬಾರಿ ಸಾರ್ವಜನಿಕರಿಗೆ ಪ್ರವೇಶ ಕಂಪ್ಲೀಟ್ ಆಗಿ ಕ್ಲೋಸ್ ಮಾಡಿರುವ ಕಾರಣ ಸಾರ್ವಜನಿಕರು ಈ ಏರ್‌ಶೋವನ್ನ ಮಿಸ್ ಮಾಡ್ಕೊಂಡಿದ್ದಾರೆ. ಒಟ್ಟಾರೆ ಕೊನೆಯ ದಿನವಾದ ಇಂದಿನ ಏರ್ ಶೋನಲ್ಲಿ ಲೋಹದ ಹಕ್ಕಿಗಳು ಮತ್ತಷ್ಟು ಚಮತ್ಕಾರ ಮಾಡಲಿವೆ.
Aero India 2021 ಲಘು ಯುದ್ಧ ವಿಮಾನ ತೇಜಸ್ ಬೆನ್ನೇರಿದ ಸಂಸದ ತೇಜಸ್ವಿ ಸೂರ್ಯ.. Photos