ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ಯಲಹಂಕದ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಜಾದು ನಡೆಯುತ್ತೆ. ಏಷ್ಯಾದ ಅತೀ ದೊಡ್ಡ 2021ರ ಏರೋ ಶೋಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ಹೀಗಾಗಿ ನಿನ್ನೆ ಏರೋ ಶೋಗೆ 14 ದೇಶಗಳಿಂದ ಬಂದಿರೋ ಯುದ್ಧ ವಿಮಾನಗಳು, ಹೆಲಿಕಾಫ್ಟರ್ಗಳು ತಾಲೀಮು ನಡೆಸಿದ್ದಾಗಿದೆ. ತಾಲೀಮು ವೇಳೆ ರಾಷ್ಟ್ರಧ್ವಜ ಹೊತ್ತ 3 ಸೇನಾ ಹೆಲಿಕಾಪ್ಟರ್ಗಳು ನೆರೆದವರಿಗೆ ಭವ್ಯ ಸ್ವಾಗತ ನೀಡಿದ್ವು. ನಂತ್ರ ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಚಿತ್ತಾರ ಶುರುವಾಗಿತ್ತು.
ಇನ್ನು, ಮೊಟ್ಟಮೊದಲ ಬಾರಿಗೆ ಹೆಚ್ಎಎಲ್ನ ಆತ್ಮನಿರ್ಭರ್ ಫಾರ್ಮೇಶನ್ ನಡೆಯಿತು. ತೇಜಸ್ ಯುದ್ಧ ವಿಮಾನದ ಮುಂದಾಳತ್ವದಲ್ಲಿ 5 ವಿಮಾನಗಳು ಆತ್ಮನಿರ್ಭರ್ ಫಾರ್ಮೇಶನ್ ನಡೆಸಿದ್ವು. ಜೊತೆಗೆ ಮೊದಲ ಬಾರಿಗೆ ಸೂರ್ಯಕಿರಣ್ ತಂಡ ಹಾಗೂ ಸಾರಂಗ್ ತಂಡ ಜಂಟಿಯಾಗಿ ಪ್ರದರ್ಶನ ನೀಡಲಿದೆ.
ಸದ್ಯ ಕೊರೊನಾ ಆತಂಕ ಹಿನ್ನೆಲೆಯಲ್ಲಿ ಇಂದಿನ ಏರೋ ಶೋಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಬೆಳಗ್ಗೆ 9.30ರ ಸುಮಾರಿಗೆ ರಾಜನಾಥ್ ಸಿಂಗ್ ಏರೋ ಶೋಗೆ ಚಾಲನೆ ನೀಡಲಿದ್ದು, ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಬೆಂಗಳೂರು ಏರೋ ಇಂಡಿಯಾ 2021: ಸಿದ್ಧತೆ ಪರಿಶೀಲಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್