17 ವರ್ಷ ದೇಶ ಸೇವೆ ಮಾಡಿ.. ಊರಿಗೆ ಮರಳಿದ ವೀರ ಯೋಧನಿಗೆ ಸಿಕ್ತು ಅದ್ದೂರಿ ಸ್ವಾಗತ
ನಿವೃತ್ತಿ ನಂತರ ಊರಿಗೆ ಮರಳಿದ ಯೋಧನಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದ ಪ್ರಸಂಗ ಜಿಲ್ಲೆಯ ಹಾನಗಲ್ ತಾಲೂಕಿನ ಹಸನಾಬಾದಿ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರಿಂದ ಸೇನೆಯಲ್ಲಿ ಲ್ಯಾನ್ಸ್ ನಾಯಕ್ ಆಗಿ ಕರ್ತವ್ಯ ನಿರ್ವಹಿಸಿದ ಸಂತೋಷ ಆರೇರಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ಹಾವೇರಿ: ನಿವೃತ್ತಿ ನಂತರ ಊರಿಗೆ ಮರಳಿದ ಯೋಧನಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದ ಪ್ರಸಂಗ ಜಿಲ್ಲೆಯ ಹಾನಗಲ್ ತಾಲೂಕಿನ ಹಸನಾಬಾದಿ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರಿಂದ ಸೇನೆಯಲ್ಲಿ ಲ್ಯಾನ್ಸ್ ನಾಯಕ್ ಆಗಿ ಕರ್ತವ್ಯ ನಿರ್ವಹಿಸಿದ ಸಂತೋಷ ಆರೇರಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ಸುಮಾರು 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಸಂತೋಷ ಜಮ್ಮು-ಕಾಶ್ಮೀರ, ದೆಹಲಿ, ಪಂಜಾಬ್ ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ, ಊರಿಗೆ ಮರಳಿ ಬಂದ ವೀರ ಯೋಧನನ್ನು ಗ್ರಾಮಸ್ಥರು ಮೆರವಣಿಗೆ ಮಾಡಿಸಿ, ಬಳಿಕ ಗೌರವ ನೀಡಿ ಸನ್ಮಾನಿಸಿದರು. ಸಂತೋಷಗೆ ಹೂಮಾಲೆ ಹಾಕಿ, ಮಹಿಳೆಯರು ಆರತಿ ಬೆಳಗಿದರು.
ನಿವೃತ್ತರಾದ ಮರುದಿನವೇ.. ಕೋಲಾರದ ಯೋಧ ಹೃದಯಾಘಾತದಿಂದ ಸಾವು
Published On - 11:06 pm, Tue, 2 February 21