ಆತ್ಮೀಯನ ಅಂತಿಮ ಪಯಣದಲ್ಲಿ ಹೆಜ್ಜೆ ಹಾಕಿದ ಕುರಿ..!

|

Updated on: Oct 18, 2019 | 4:48 PM

ತನ್ನ ಆತ್ಮೀಯ ಮೀನು ವ್ಯಾಪಾರಿಯ ಅಂತ್ಯಸಂಸ್ಕಾರದಲ್ಲಿ ಕುರಿಯೊಂದು ಭಾಗಿಯಾದ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದ ಕುವೆಂಪು ನಗರದಲ್ಲಿ ನಡೆದಿದೆ. ನಿನ್ನೆ ಪಟ್ಟಣದ ಮೀನು ವ್ಯಾಪಾರಿ ಹುಸನಬ್ಬ ಹೃದಯಾಘಾತದಿಂದ ಸಾವನಪ್ಪಿದ್ರು. ಇಂದು ಹುಸನಬ್ಬ ಅವರ ಅಂತ್ಯಕ್ರಿಯೆ ನಡೆಸಲಾಯ್ತು. ಹುಸನಬ್ಬ ಅವರ ಪಕ್ಕದ ಮನೆಯಲ್ಲಿ ಕುರಿಯೊಂದನ್ನ ಸಾಕಿದ್ರು. ಈ ಕುರಿಯನ್ನ ಹುಸನಬ್ಬ ತುಂಬಾ ಪ್ರೀತಿ ಮಾಡ್ತಿದ್ರು. ಆದ್ರೆ, ತನ್ನ ಆತ್ಮೀಯನನ್ನ ಕಳೆದುಕೊಂಡ ಆ ಕುರಿ ಆಹಾರವನ್ನ ತಿನ್ನದೇ ಮೌನಕ್ಕೆ ಶರಣಾಗಿತ್ತು. ಅಲ್ಲದೇ ನಿನ್ನೆಯಿಂದ ತನ್ನ ಆತ್ಮೀಯ ಹುಸನಬ್ಬ […]

ಆತ್ಮೀಯನ ಅಂತಿಮ ಪಯಣದಲ್ಲಿ ಹೆಜ್ಜೆ ಹಾಕಿದ ಕುರಿ..!
Follow us on

ತನ್ನ ಆತ್ಮೀಯ ಮೀನು ವ್ಯಾಪಾರಿಯ ಅಂತ್ಯಸಂಸ್ಕಾರದಲ್ಲಿ ಕುರಿಯೊಂದು ಭಾಗಿಯಾದ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದ ಕುವೆಂಪು ನಗರದಲ್ಲಿ ನಡೆದಿದೆ.

ನಿನ್ನೆ ಪಟ್ಟಣದ ಮೀನು ವ್ಯಾಪಾರಿ ಹುಸನಬ್ಬ ಹೃದಯಾಘಾತದಿಂದ ಸಾವನಪ್ಪಿದ್ರು. ಇಂದು ಹುಸನಬ್ಬ ಅವರ ಅಂತ್ಯಕ್ರಿಯೆ ನಡೆಸಲಾಯ್ತು. ಹುಸನಬ್ಬ ಅವರ ಪಕ್ಕದ ಮನೆಯಲ್ಲಿ ಕುರಿಯೊಂದನ್ನ ಸಾಕಿದ್ರು. ಈ ಕುರಿಯನ್ನ ಹುಸನಬ್ಬ ತುಂಬಾ ಪ್ರೀತಿ ಮಾಡ್ತಿದ್ರು.

ಆದ್ರೆ, ತನ್ನ ಆತ್ಮೀಯನನ್ನ ಕಳೆದುಕೊಂಡ ಆ ಕುರಿ ಆಹಾರವನ್ನ ತಿನ್ನದೇ ಮೌನಕ್ಕೆ ಶರಣಾಗಿತ್ತು. ಅಲ್ಲದೇ ನಿನ್ನೆಯಿಂದ ತನ್ನ ಆತ್ಮೀಯ ಹುಸನಬ್ಬ ಅವರ ಮೃತದೇಹದ ಬಳಿಯೇ ಓಡಾಡಿಕೊಂಡಿತ್ತು. ಇಂದು ನಡೆದ ಅಂತ್ಯಕ್ರಿಯೆಯ ಕೊನೆಯ ಪ್ರಯಾಣದವರೆಗೂ ತಾ ಮುಂದು.. ನಾ ಮುಂದು ಅಂತಾ ಜನರ ಜೊತೆ ಹೆಜ್ಜೆ ಹಾಕಿದ ದೃಶ್ಯ ನಿಜಕ್ಕೂ ಮನಕಲಕುವಂತಿತ್ತು.

Published On - 4:44 pm, Fri, 18 October 19