ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ‘ಏರೋ ಇಂಡಿಯಾ 2021’ರಲ್ಲಿ ನಡೆದ Flypast ವೇಳೆ ಏರ್ಕ್ರಾಫ್ಟ್ಗಳು ಆತ್ಮನಿರ್ಭರ ಪರಿಕಲ್ಪನೆಯನ್ನು ಆಗಸದಲ್ಲಿ ಮೂಡಿಸುವ ಮೂಲಕ ಕೇಂದ್ರ ಸರ್ಕಾರದ ಬಹು ಆಕಾಂಕ್ಷಿ ಯೋಜನೆಯ ಮಹತ್ವ ಸಾರಿದವು.
ಇತ್ತೀಚೆಗಷ್ಟೇ ಆಕ್ಸ್ಫರ್ಡ್ ಭಾಷೆಗಳಲ್ಲಿ, ಆತ್ಮನಿರ್ಭರತಾ ಪದವನ್ನು ವರ್ಷದ ಹಿಂದಿ ಪದವೆಂದು ಘೋಷಿಸಿದೆ. ಇದೀಗ ಏರೋ ಇಂಡಿಯಾ 2021ರಲ್ಲಿ ಕೂಡಾ ಆತ್ಮನಿರ್ಭರ ಪರಿಕಲ್ಪನೆಗೆ ಆದ್ಯತೆ ನೀಡಲಾಗಿದೆ. ಏರ್ ಶೋ ಉದ್ಘಾಟಿಸುವ ವೇಳೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆತ್ಮನಿರ್ಭರ ಭಾರತದ ಆಲೋಚನೆಯ ಕುರಿತು ಮಾತನಾಡಿದ್ದರು.
ಭಾರತವು ಅತ್ಯುತ್ಕೃಷ್ಟ ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಇದು ಭಾರತ ಸ್ವಾವಲಂಬಿ ಆಗಿರುವುದರ ಸಂಕೇತ. ಇದು ನಮ್ಮ ದೇಶಕ್ಕೆ ಹೆಮ್ಮೆಯಷ್ಟೇ ಅಲ್ಲದೇ, ಬೇರೆ ದೇಶಗಳಿಗೆ ಕೊಡುವ ಸಂದೇಶವೂ ಆಗಿದೆ ಎಂದು ರಕ್ಷಣಾ ಸಚಿವರು ಹೇಳಿದ್ದರು.
ಈ ಬಾರಿ ಒಟ್ಟು 63 ವಿಮಾನಗಳಿಂದ ಪ್ರದರ್ಶನ ನಡೆಯಲಿದ್ದು ದಿನಕ್ಕೆ ಎರಡು ಬಾರಿ 42 ವಿಮಾನಗಳು ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನೀಡಲಿವೆ. ಡಕೋಟಾ, ಸುಖೋಯ್, ರಫೆಲ್, ಎಲ್ಸಿಹೆಚ್, ಎಲ್ಯುಎಚ್, ಜಾಗ್ವಾರ್, ಹಾಕ್ ಸೇರಿ ಇನ್ನಿತರ ಫೈಟರ್ ಜೆಟ್ ಏರ್ ಕ್ರಾಫ್ಟ್, ಹೆಲಿಕಾಫ್ಟರ್ಗಳಿಂದ ಪ್ರದರ್ಶನ ನಡೆಯಲಿದೆ.
#WATCH | Aircraft taking part in the flypast in Atmanirbhar formation at Aero India-2021 in Bengaluru. pic.twitter.com/eusLZOnouL
— ANI (@ANI) February 3, 2021
Atmanirbharta word in oxford languages 2020 ಆತ್ಮನಿರ್ಭರತಾ ಪದ ಆಕ್ಸ್ಫರ್ಡ್ ಭಾಷಾ ಪಟ್ಟಿಗೆ ಸೇರ್ಪಡೆಯಾಯ್ತು!
Published On - 11:58 am, Wed, 3 February 21