ಮೊಲದ ಬೇಟೆಯಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ: ನಾಡ ಬಂದೂಕು ವಶ
ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯ ವೇಳೆ, ಚಿಕ್ಕ ಹೊನ್ನೂರು ದೇವರಕಂಡಿ ಕ್ಯಾಂಪ್‌ನಲ್ಲಿ ನಾಡ ಬಂದೂಕು ಹಿಡಿದು ಮೊಲಗಳನ್ನ ಬೇಟೆಯಾಡುತ್ತಿದ್ದ ವಿನಯ್(28), ಸಣ್ಣ ಸ್ವಾಮಿ(19) ಸಿಕ್ಕಿಬಿದ್ದಿದ್ದಾರೆ.

ಸಣ್ಣ ಸ್ವಾಮಿ(19), ವಿನಯ್(28)
ಮೈಸೂರು: ಮೊಲದ ಬೇಟೆಯಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿ ಬಳಿ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯ ವೇಳೆ, ಚಿಕ್ಕ ಹೊನ್ನೂರು ದೇವರಕಂಡಿ ಕ್ಯಾಂಪ್‌ನಲ್ಲಿ ನಾಡ ಬಂದೂಕು ಹಿಡಿದು ಮೊಲಗಳನ್ನ ಬೇಟೆಯಾಡುತ್ತಿದ್ದ ವಿನಯ್ (28), ಸಣ್ಣ ಸ್ವಾಮಿ (19) ಸಿಕ್ಕಿಬಿದ್ದಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದು, ಬಂಧಿತರಿಂದ ನಾಡ ಬಂದೂಕು ವಶಕ್ಕೆ ಪಡೆದಿದ್ದಾರೆ.

ಅರಣ್ಯ ಅಧಿಕಾರಿಗಳೊಂದಿಗೆ ಆರೋಪಿಗಳು
ಜಿಂಕೆಗಳ ಬೇಟೆ ಆರೋಪದಡಿ 6 ದುಷ್ಕರ್ಮಿಗಳ ಬಂಧನ.. ಎಲ್ಲಿ?
Published On - 12:16 pm, Wed, 3 February 21