ಸಚಿವ ಜಾರಕಿಹೊಳಿ ಅಳಿಯನ ದಬ್ಬಾಳಿಕೆ: ನಿರ್ವಾಣೇಶ್ವರ ಸ್ವಾಮೀಜಿ ಆರೋಪ

|

Updated on: Mar 08, 2020 | 1:36 PM

ಬೆಳಗಾವಿ: ಜಮೀನು ಮಾರಾಟದ ಹಣ ಕೇಳಿದ್ದಕ್ಕೆ ದಬ್ಬಾಳಿಕೆ ಮಾಡಿದ್ದಾರೆ ಎಂಬ ಆರೋಪ ಸಚಿವ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ್ ವಿರುದ್ಧ ಕೇಳಿ ಬಂದಿದೆ. ನಿರ್ವಾಣೇಶ್ವರ ಮಠದ ಪೀಠಾಧಿಪತಿಯಾಗಿರುವ ವೀರಭದ್ರ ಸ್ವಾಮೀಜಿಯವರಿಗೆ ಸೇರಿದ ಐದು ಎಕರೆ ಜಮೀನು ಮಾರಾಟ ಮಾಡಿ ಹಣ ನೀಡದೆ ದಬ್ಬಾಳಿಕೆ ಮಾಡ್ತಿದ್ದಾರೆ ಎಂದ ವೀರಭದ್ರ ಸ್ವಾಮೀಜಿ ಆರೋಪಿಸಿದ್ದಾರೆ. 15 ವರ್ಷಗಳಿಂದ ಗೋಕಾಕ್ ತಾಲೂಕಿನ ಯೋಗಿಕೊಳ್ಳದಲ್ಲಿರುವ ನಿರ್ವಾಣೇಶ್ವರ ಮಠದ ಪೀಠಾಧಿಪತಿಯಾಗಿರುವ ವೀರಭದ್ರ ಸ್ವಾಮೀಜಿ ಕಳೆದ ಎರಡು ವರ್ಷಗಳ ಹಿಂದೆ ಅಂಬಿರಾವ್ ಪಾಟೀಲ್​ನಿಂದ ಪೂರ್ವಾಶ್ರಮದ ಆಸ್ತಿ […]

ಸಚಿವ ಜಾರಕಿಹೊಳಿ ಅಳಿಯನ ದಬ್ಬಾಳಿಕೆ: ನಿರ್ವಾಣೇಶ್ವರ ಸ್ವಾಮೀಜಿ ಆರೋಪ
Follow us on

ಬೆಳಗಾವಿ: ಜಮೀನು ಮಾರಾಟದ ಹಣ ಕೇಳಿದ್ದಕ್ಕೆ ದಬ್ಬಾಳಿಕೆ ಮಾಡಿದ್ದಾರೆ ಎಂಬ ಆರೋಪ ಸಚಿವ ರಮೇಶ್ ಜಾರಕಿಹೊಳಿ ಅಳಿಯ ಅಂಬಿರಾವ್ ಪಾಟೀಲ್ ವಿರುದ್ಧ ಕೇಳಿ ಬಂದಿದೆ. ನಿರ್ವಾಣೇಶ್ವರ ಮಠದ ಪೀಠಾಧಿಪತಿಯಾಗಿರುವ ವೀರಭದ್ರ ಸ್ವಾಮೀಜಿಯವರಿಗೆ ಸೇರಿದ ಐದು ಎಕರೆ ಜಮೀನು ಮಾರಾಟ ಮಾಡಿ ಹಣ ನೀಡದೆ ದಬ್ಬಾಳಿಕೆ ಮಾಡ್ತಿದ್ದಾರೆ ಎಂದ ವೀರಭದ್ರ ಸ್ವಾಮೀಜಿ ಆರೋಪಿಸಿದ್ದಾರೆ.

15 ವರ್ಷಗಳಿಂದ ಗೋಕಾಕ್ ತಾಲೂಕಿನ ಯೋಗಿಕೊಳ್ಳದಲ್ಲಿರುವ ನಿರ್ವಾಣೇಶ್ವರ ಮಠದ ಪೀಠಾಧಿಪತಿಯಾಗಿರುವ ವೀರಭದ್ರ ಸ್ವಾಮೀಜಿ ಕಳೆದ ಎರಡು ವರ್ಷಗಳ ಹಿಂದೆ ಅಂಬಿರಾವ್ ಪಾಟೀಲ್​ನಿಂದ ಪೂರ್ವಾಶ್ರಮದ ಆಸ್ತಿ ಮಠದ ಹೆಸರಿಗೆ ವರ್ಗಾಯಿಸುವಂತೆ ಒತ್ತಡ ಹೇರಲಾಗಿತ್ತು.

5 ಎಕರೆ ಭೂಮಿಯನ್ನು ಸ್ವಾಮೀಜಿ ಅಂಬಿರಾವ್ ಪಾಟೀಲ್‌ಗೆ ಜಮೀನು ಮಾರಾಟ ಮಾಡಿದ್ದರು. ತಮ್ಮ ಹಣ ನೀಡುವಂತೆ ಕೇಳಿದ್ದಕ್ಕೆ ಸ್ವಾಮೀಜಿಗೆ ಅಂಬಿರಾವ್ ಪಾಟೀಲ್ ಮತ್ತು ಕೆಲ ಪ್ರಮುಖರಿಂದ ಕಿರುಕುಳ ನೀಡಲಾಗಿತ್ತು. ಕಿರುಕುಳಕ್ಕೆ ಬೇಸತ್ತು ಮಠಕ್ಕೆ ಬೀಗಹಾಕಿ ವೀರಭದ್ರೇಶ್ವರ ಸ್ವಾಮೀಜಿ ಊರು ಬಿಟ್ಟಿದ್ದಾರೆ.

Published On - 12:31 pm, Sun, 8 March 20