‘₹2 ಲಕ್ಷ ಪಾವತಿಸಿ, ಇಲ್ಲದಿದ್ದರೆ ರೂಮಿನಲ್ಲಿ ಕೂಡಿಹಾಕುತ್ತೇವೆ’ ಆಕಾಶ್ ಆಸ್ಪತ್ರೆ ವಿರುದ್ಧ ಆರೋಪ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳ ಕರ್ಮಕಾಂಡ ಮುಂದುವರೆದಿದೆ. ಕೊರೊನಾ ಸೋಂಕಿತರೇ ಖಾಸಗಿ ಆಸ್ಪತ್ರೆಗಳಿಗೆ ಬಂಡವಾಳ ಆಗ್ತಿದ್ದಾರೆ. ದೇವನಹಳ್ಳಿಯ ಆಕಾಶ್ ಆಸ್ಪತ್ರೆ ಸೋಂಕಿತರ ಬಳಿ ಹಣ ಪೀಕುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ರೋಗಿ ಸಂಬಂಧಿ ಆಕಾಶ್ ಆಸ್ಪತ್ರೆಯ ಕರ್ಮಕಾಂಡ ಬಯಲಿಗೆಳೆದಿದ್ದಾರೆ. ಸೋಂಕಿತರು ಗುಣಮುಖರಾದರೂ ಡಿಸ್ಚಾರ್ಜ್‌ಗೆ ಹಿಂದೇಟು ಹಾಕಲಾಗುತ್ತಿದೆಯಂತೆ. ಡಿಸ್ಚಾರ್ಜ್ ಮಾಡದೆ ಬೆದರಿಕೆ ಹಾಕಿರುವುದಾಗಿ ಆಕಾಶ್ ಆಸ್ಪತ್ರೆಯ ವಿರುದ್ಧ ಆರೋಪ ಮಾಡಿದ್ದಾರೆ. ಬಿಬಿಎಂಪಿ ಸೂಚನೆಯ ಮೇರೆಗೆ 15 ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ದಂಪತಿ ಕೊರೊನಾದಿಂದ […]
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳ ಕರ್ಮಕಾಂಡ ಮುಂದುವರೆದಿದೆ. ಕೊರೊನಾ ಸೋಂಕಿತರೇ ಖಾಸಗಿ ಆಸ್ಪತ್ರೆಗಳಿಗೆ ಬಂಡವಾಳ ಆಗ್ತಿದ್ದಾರೆ. ದೇವನಹಳ್ಳಿಯ ಆಕಾಶ್ ಆಸ್ಪತ್ರೆ ಸೋಂಕಿತರ ಬಳಿ ಹಣ ಪೀಕುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ರೋಗಿ ಸಂಬಂಧಿ ಆಕಾಶ್ ಆಸ್ಪತ್ರೆಯ ಕರ್ಮಕಾಂಡ ಬಯಲಿಗೆಳೆದಿದ್ದಾರೆ.
ಸೋಂಕಿತರು ಗುಣಮುಖರಾದರೂ ಡಿಸ್ಚಾರ್ಜ್‌ಗೆ ಹಿಂದೇಟು ಹಾಕಲಾಗುತ್ತಿದೆಯಂತೆ. ಡಿಸ್ಚಾರ್ಜ್ ಮಾಡದೆ ಬೆದರಿಕೆ ಹಾಕಿರುವುದಾಗಿ ಆಕಾಶ್ ಆಸ್ಪತ್ರೆಯ ವಿರುದ್ಧ ಆರೋಪ ಮಾಡಿದ್ದಾರೆ. ಬಿಬಿಎಂಪಿ ಸೂಚನೆಯ ಮೇರೆಗೆ 15 ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ದಂಪತಿ ಕೊರೊನಾದಿಂದ ಗುಣಮುಖರಾಗಿದ್ದರು. ಅವರನ್ನ ಡಿಸ್ಚಾರ್ಜ್ ಮಾಡಬೇಕಾದ್ರೆ ₹2 ಲಕ್ಷ ಪಾವತಿಸಲು ಆಸ್ಪತ್ರೆ ಮಂಡಳಿ ಸೂಚಿಸಿದೆ.
ಹಣ ಪಾವತಿಸದಿದ್ದರೆ ರೂಮಿನಲ್ಲಿ ಕೂಡಿಹಾಕುವ ಬೆದರಿಕೆ ಹಾಕಿದೆ. ಕೊರೊನಾ ಸೋಂಕಿತ ಚಿಕಿತ್ಸೆಗೆ ಸರ್ಕಾರವೇ ಹಣ ಪಾವತಿಸುವುದಾಗಿ ದಂಪತಿ ಹೇಳಿದರೂ ಕೇಳಿಲ್ಲ. 2 ದಿನ ಆಸ್ಪತ್ರೆಯಲ್ಲೇ ಇಟ್ಟುಕೊಂಡು ಸತಾಯಿಸಲಾಗಿತ್ತು. ಬಳಿಕ ಡಿಹೆಚ್‌ಒಗೆ ಕರೆ ಮಾಡಿದ್ದಾರೆ. ಆಗ ಡಿಹೆಚ್‌ಒ ಸೂಚನೆ ಬಳಿಕ ಬೆಂಗಳೂರಿನ ದಂಪತಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಆದ್ರೆ ಆಸ್ಪತ್ರೆಯ ಸಿಬ್ಬಂದಿ ಮಧ್ಯರಾತ್ರಿ ಅವರನ್ನು ಡಿಸ್ಚಾರ್ಜ್ ಮಾಡಿದ್ದಾರೆ. ಆ ಸಮಯದಲ್ಲಿ ವಾಹನ ವ್ಯವಸ್ಥೆ ಇಲ್ಲದೆ ದಂಪತಿ ತೀವ್ರ ಪರದಾಡಿದ್ದಾರೆ. ಆಸ್ಪತ್ರೆಯಿಂದ 4 ಕಿ.ಮೀ. ನಡೆದುಕೊಂಡು ಬಂದಿದ್ದಾರೆ. ಬಳಿಕ ಅಲ್ಲಿಂದ ವಾಹನದಲ್ಲಿ ಮನೆಗೆ ತೆರಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಆಕಾಶ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಈಗ ಕೇಳಿ ಬಂದಿದೆ.
Published On - 8:24 am, Thu, 9 July 20