ಬೆಂಗಳೂರು: ಬೃಹತ್ ಸರ್ಚ್ ಇಂಜಿನ್ ಗೂಗಲ್ ಬಳಿಕ ಇದೀಗ ಮತ್ತೊಂದು ವಿಶ್ವವ್ಯಾಪಿ ಅಮೆಜಾನ್ ಆನ್‌ಲೈನ್ ಶಾಪಿಂಗ್ ಸಂಸ್ಥೆಯಿಂದಲೂ ಕನ್ನಡಿಗರ ಪ್ರಾಣನುಡಿ, ಸಂಸ್ಕೃತಿಗೆ ಅಪಮಾನ ನಡೆದಿದೆ. ಅಮೆಜಾನ್ ಆನ್‌ಲೈನ್ ಶಾಪಿಂಗ್ ವೆಬ್ಸೈಟ್ನಲ್ಲಿ ಈ ಅಪಮಾನ ನಡೆದಿದೆ. ಅವರು ಆನ್‌ಲೈನ್ ಮೂಲಕ ಮಾರಾಟ ಮಾಡುವ ಮಹಿಳೆಯರ ಒಳಉಡುಪುಗಳ ಮೇಲೆ ಕನ್ನಡ ಬಾವುಟ, ಲಾಂಛನದ ಬಳಕೆಯಾಗಿದೆ. ಅಮೇಜಾನ್ ಆನ್‌ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಕನ್ನಡ ಧ್ವಜ, ಲಾಂಛನಕ್ಕೆ ಹೀಗೆ ಅಪಮಾನ ಆಗಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ತೀವ್ರ ಆಕ್ರೋಶ, ವಿರೋಧ ವ್ಯಕ್ತಪಡಿಸಿದ್ದಾರೆ.
ಅಮೇಜಾನ್ ಕಂಪನಿ ಮಹಿಳೆಯರ ಒಳ ಉಡುಪಿನಲ್ಲಿ ನಮ್ಮ ಕನ್ನಡದ ಬಾವುಟ, ಭಾರತದ ಅಶೋಕ ಚಕ್ರ, ಕರ್ನಾಟಕದ ಲಾಂಛನವನ್ನ ಹಾಕುವ ಮೂಲಕ ಕನ್ನಡಿಗಯರಿಗೆ ಹಾಗೂ ಭಾರತೀಯರಿಗೆ ನೋವುಂಟು ಮಾಡಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಇಂತಹ ದುಷ್ಟ ಶಕ್ತಿಗಳ ಹುನ್ನಾರವನ್ನು ಬಗ್ಗು ಬಡಿಯಬೇಕು ಎಂದು ಎಲ್ಲ ಕನ್ನಡಿಗರ ಪರವಾಗಿ ಅವರು ಆಗ್ರಹಿಸಿದ್ದಾರೆ.
ಸರ್ಕಾರ ಕನ್ನಡಿಗರಿಗಾಗಿಯೇ ಒಂದು ಸೈಬರ್ ಕ್ರೈಮ್ ಸೆಲ್ ಶುರು ಮಾಡಲಿ:
ಇತ್ತೀಚೆಗೆ ಗೂಗಲ್ ನಲ್ಲೂ ಹೀಗೆ ಆಗಿತ್ತು. ಈ ಕೂಡಲೇ ಅಮೇಜಾನ್ ಸಂಸ್ಥೆ ಕ್ಷಮೆ ಕೇಳಬೇಕು. ರಾಜ್ಯ ಸರ್ಕಾರ ಕನ್ನಡಿಗರಿಗಾಗಿಯೇ ಒಂದು ಸೈಬರ್ ಕ್ರೈಮ್ ಸೆಲ್ ಶುರು ಮಾಡಬೇಕು. ಇದೇ ರೀತಿ ಕನ್ನಡಿಗರ ಅವಮಾನ ಮಾಡಿದರೆ ಮಸ್ಕಾ ಚಳುವಳಿ ಬಿಟ್ಟು, ಮಚ್ಚು ಹಿಡಿದು ಚಳುವಳಿ ಮಾಡಬೇಕಾಗುತ್ತದೆ ಎಂದು ಕರವೇ ಪ್ರವೀಣ್ ಶೆಟ್ಟಿ ಖಡಕ್ಕಾಗಿ ಎಚ್ಚರಿಕೆ ರವಾನಿಸಿದ್ದಾರೆ.
Ugliest Language of India: ಕನ್ನಡಿಗರ ಕ್ಷಮೆ ಕೇಳಿದ ಗೂಗಲ್; ಕನ್ನಡದಲ್ಲೇ ಟ್ವೀಟ್ ಮಾಡಿ ತಪ್ಪೊಪ್ಪಿಕೊಂಡ ಸಂಸ್ಥೆ
(Amazon online shopping website Insults Kannada flag, emblem, ashoka chakra karave protests)
Published On - 2:44 pm, Sat, 5 June 21