ಅಮಿತ್ ಶಾ ಕರ್ನಾಟಕ ಪ್ರವಾಸ: ಭದ್ರಾವತಿಯ RAF ಘಟಕ ಸ್ಥಾಪನೆಗೆ ಭೂಮಿ ಪೂಜೆ

| Updated By: ganapathi bhat

Updated on: Apr 06, 2022 | 8:54 PM

ಎರಡು ದಿನಗಳ ಕರ್ನಾಟಕ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ, ಉಕ್ಕಿನ ನಗರಿ ಭದ್ರಾವತಿಗೆ ಭೇಟಿ ನೀಡಿದರು. ಭದ್ರಾವತಿಯ ಹೊರವಲಯದ ಬುಳ್ಳಾಪುರದಲ್ಲಿ ಆರ್​ಎ​ಎಫ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಅಮಿತ್ ಶಾ ಕರ್ನಾಟಕ ಪ್ರವಾಸ: ಭದ್ರಾವತಿಯ RAF ಘಟಕ ಸ್ಥಾಪನೆಗೆ ಭೂಮಿ ಪೂಜೆ
ಆರ್​ಎಎಫ್ ಕಟ್ಟಡಕ್ಕೆ ಅಮಿತ್ ಶಾ ಶಿಲಾನ್ಯಾಸ ನೆರವೇರಿಸಿದರು
Follow us on

ಶಿವಮೊಗ್ಗ: ಎರಡು ದಿನಗಳ ಕರ್ನಾಟಕ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ, ಉಕ್ಕಿನ ನಗರಿ ಭದ್ರಾವತಿಗೆ ಭೇಟಿ ನೀಡಿದರು. ಭದ್ರಾವತಿಯ ಹೊರವಲಯದ ಬುಳ್ಳಾಪುರದಲ್ಲಿ ಆರ್​ಎ​ಎಫ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಕ್ಷಿಪ್ರ ಕಾರ್ಯಪಡೆ ದಕ್ಷಿಣ ಭಾರತ ಬೆಟಾಲಿಯನ್ ಕಟ್ಟಡಕ್ಕೆ ಶಿಲಾನ್ಯಾಸ ಪೂಜೆಯಲ್ಲಿ ಭಾಗಿಯಾದರು.

ದೇಶದ 97ನೇ RAFನ ಬೆಟಾಲಿಯನ್​ಗೆ ಅಮಿತ್ ಶಾ ಭೂಮಿ ಪೂಜೆ ನೆರವೇರಿಸಿದರು. 1500 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ ವ್ಯಾಪ್ತಿಗೊಳಪಟ್ಟು, 39 ಜಿಲ್ಲೆಗಳ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಲಿದೆ. 50 ಎಕರೆ ಪ್ರದೇಶದಲ್ಲಿ RAF ಘಟಕ ಆರಂಭ ಗೊಳ್ಳಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಕೆ.ಎಸ್. ಈಶ್ವರಪ್ಪ , ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖರು ಅಮಿತ್ ಶಾ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಹಿಸಿದರು. ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಜನ ಭಾಗಿಯಾಗುವ ಸಾಧ್ಯತೆ ಅಂದಾಜಿಸಲಾಗಿದೆ. ಹಾಗಾಗಿ, ಕಾರ್ಯಕ್ರಮ ನಡೆಯುವ ಪ್ರದೇಶದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಅಮಿತ್ ಶಾ, ಮದ್ಯಾಹ್ನ 12.30ಕ್ಕೆ ಭದ್ರಾವತಿಗೆ ಬರಬೇಕಿತ್ತು. ಆದರೆ, ದೆಹಲಿಯಲ್ಲಿ ಹವಾಮಾನ ವೈಪರಿತ್ಯ ಹಿನ್ನೆಲೆ ಬೆಂಗಳೂರಿಗೆ ಆಗಮನ ವಿಳಂಬವಾಗಿತ್ತು. ಹಾಗಾಗಿ, ಮದ್ಯಾಹ್ನ 2 ಗಂಟೆಗೆ ಶಾ ಆಗಮಿಸಿದ್ದರು. ಸಿ.ಎಂ. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಡಿ.ವಿ. ಸದಾನಂದ ಗೌಡ, ಗೃಹಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಬಿಜೆಪಿ ಸಹ ಉಸ್ತುವಾರಿ ಡಿ.ಕೆ. ಅರುಣಾ, ಸಚಿವರಾದ ಸುರೇಶ್ ಕುಮಾರ್, ವಿ. ಸೋಮಣ್ಣ, ಅರವಿಂದ ಲಿಂಬಾವಳಿ, ಎಸ್.ಟಿ. ಸೋಮಶೇಖರ್, ಅರ್. ಅಶೋಕ್, ಭೈರತಿ ಬಸವರಾಜು, ಕೆ. ಗೋಪಾಲಯ್ಯ, ಸಂಸದ ಪಿ.ಸಿ. ಮೋಹನ್, ಕೆ.ಸಿ. ರಾಮಮೂರ್ತಿ, ರಾಜೀವ್ ಚಂದ್ರಶೇಖರ್, ಡಿಜಿಪಿ ಪ್ರವೀಣ್ ಸೂದ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಗೃಹ ಇಲಾಖೆ ಎಸಿಎಸ್ ರಜನೀಶ್ ಗೋಯೆಲ್ ಉಪಸ್ಥಿತರಿದ್ದರು.

ಅಮಿತ್ ಶಾ ಭೂಮಿ ಪೂಜೆಯಲ್ಲಿ ಭಾಗಿಯಾದರು

ಸಭಿಕರತ್ತ ಕೈ ಬೀಸಿದ ಅಮಿತ್ ಶಾ, ಯಡಿಯೂರಪ್ಪ ಹಾಗೂ ಪ್ರಲ್ಹಾದ್ ಜೋಷಿ

ಭದ್ರಾವತಿಯಲ್ಲಿ ಸೇರಿರುವ ಜನಸ್ತೋಮ

ಲಸಿಕೆ ಬಂದಾಯ್ತು.. ದೇಶ ಕೊರೊನಾ ಮುಕ್ತ ಆಗಲಿದೆ. ದೇಶವು ಮತ್ತೆ ಮೋದಿ ಕನಸಿನಂತೆ ತುಂಬಾ ವೇಗವಾಗಿ ಅಭಿವೃದ್ಧಿ ಹೊಂದಲಿದೆ: ಅಮಿತ್ ಶಾ

 

Published On - 4:37 pm, Sat, 16 January 21